Advertisement
ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಈ ಸಲ್ಫೇಟ್ ಬೆಟ್ಟವನ್ನು ಪತ್ತೆ ಮಾಡಿದ್ದು, ಇದು ಸಮುದ್ರದ ಮೇಲ್ಮೆ„ನಿಂದ 4.5 ಕಿ.ಮೀ. ಆಳದಲ್ಲಿದೆ ಎಂದು ಅವರು ಹೇಳಿದ್ದಾರೆ. ಸಾಗರ ತಳದ ಅಧ್ಯಯನಕ್ಕಾಗಿಯೇ ಈ ತಂಡ ಹಲವು ದಿನಗಳಿಂದ ಹಿಂದೂ ಮಹಾಸಾಗರದ ಮೇಲೆ ಬೀಡು ಬಿಟ್ಟಿತ್ತು. ಸಮುದ್ರ ತಂತ್ರಜ್ಞಾನ ಸಂಸ್ಥೆಯೇ ತಯಾರಿಸಿರುವ ಸ್ವಯಂಚಾಲಿತ ವಾಹನ ಸಮುದ್ರಾದಳದಲ್ಲಿರುವ ಶಾಖದ ಅಲೆಗಳನ್ನು ಆಧರಿಸಿ ಈ ಬೆಟ್ಟಗಳನ್ನು ಪತ್ತೆ ಮಾಡಿದೆ.ಆರ್ಥಿಕತೆಗೆ ಸಹಕಾರಿ: ಸಮುದ್ರದಾಳದಲ್ಲಿನ ಸಂಶೋಧನೆಗಳು ಒಂದು ದೇಶದ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸುತ್ತದೆ. ಹೆಚ್ಚಿನ ಮಾಲಿನ್ಯವಿಲ್ಲದೇ ಇಲ್ಲಿ ಗಣಿಗಾರಿಕೆಯನ್ನು ನಡೆಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.