Advertisement
ರಸ್ತೆ ಹೊಂಡಕ್ಕೆ ತೇಪೆಮಾಣಿ-ಸಂಪಾಜೆ ರಸ್ತೆಯ ಪೈಚಾರಿನಿಂದ ಗಾಂಧಿನಗರದ ತನಕ ರಸ್ತೆ ಹೊಂಡ ಮುಚ್ಚುವ ಕಾರ್ಯ ಭರದಿಂದ ಸಾಗಿದೆ. ಶುಕ್ರವಾರ ಪೈಚಾರು ಬಳಿ ಹೊಂಡ ಮುಚ್ಚಲಾಗಿತ್ತು. ಶನಿವಾರ ಎರಡನೇ ಹಂತದ ಡಾಮರು ಹಾಕುವ ಕಾರ್ಯ ಪೂರ್ಣಗೊಂಡಿದೆ. ಜ್ಯೋತಿ ಸರ್ಕಲ್ ಹಂಪ್, ಶ್ರೀರಾಮ ಪೇಟೆ, ಗಾಂಧಿನಗರ ಸಹಿತ ನಾನಾ ಕಡೆಗಳಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನ ಇದೀಗ ಅಲೆಲ್ಲಾ ಹೊಂಡಕ್ಕೆ ತೇಪೆ ಹಾಕಲಾಗುತ್ತಿದೆ.
ಮೊಗರ್ಪಣೆ ಸೇತುವೆ ಅವ್ಯವಸ್ಥೆ ಬಗ್ಗೆ ಜು. 2ರಂದು ಉದಯವಾಣಿ ಸುದಿನ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಕೆಆರ್‌ಡಿಸಿಎಲ್ ಇಲಾಖೆ ಮರುದಿನವೇ ಮೇಲ್ಪದರ ಶಿಥಿಲ ಸ್ಥಳಕ್ಕೆ ಜಲ್ಲಿಮಿಶ್ರಿತ ಪರಿಕರ ತುಂಬಿಸಿ ತೇಪೆ ಕಾಮಗಾರಿ ಮಾಡಿತ್ತು. ಅದು ಒಂದೇ ವಾರದಲ್ಲಿ ಎದ್ದು ಹೋಗಿ ಕಾಮಗಾರಿ ಗಟ್ಟಿತನ ಬಹಿರಂಗಗೊಂಡಿತ್ತು. ಅದಾದ ಬಳಿಕ ತೇಪೆ ಹಾಕುವ ಪ್ರಯತ್ನ ನಡೆಯಿತ್ತಾದರೂ ಅದು ನಿಲ್ಲಲಿಲ್ಲ. ವಿಪರೀತ ಮಳೆ ಕಾರಣ ಕಾಮಗಾರಿ ಸಾಧ್ಯವಾಗುತ್ತಿಲ್ಲ ಎಂಬ ಕಾರಣ ನೀಡಿ ಇಲಾಖೆ ದುರಸ್ತಿಯನ್ನು ಮುಂದೂಡಿತ್ತು. ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೇರ್ಪಡೆಗೊಂಡ ಅನಂತರ ನ. 16ರಂದು ‘ಮೊಗರ್ಪಣೆ ಸೇತುವೆ ಮೇಲ್ಪದರ ಮತ್ತಷ್ಟು ಶಿಥಿಲ’ ಎಂಬ ಬಗ್ಗೆ ಸುದಿನ ವರದಿ ಪ್ರಕಟಿಸಿತ್ತು. ಇದೀಗ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ.