Advertisement

Sullia: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

12:19 AM Apr 11, 2024 | Team Udayavani |

ಸುಳ್ಯ: ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಾರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಪೆರುವಾಜೆ ಎಂಬಲ್ಲಿ ನಡೆದಿದೆ.

Advertisement

ಪೆರುವಾಜೆ ಗ್ರಾಮದ ಪೆರುವಾಜೆ ಮಹೇಶ್‌ (40) ಮೃತರು. ಮಹೇಶ್‌ ಅವರ ಪತ್ನಿ ತನ್ನ ಮಕ್ಕಳೊಂದಿಗೆ ಎ.3ರಂದು ತವರು ಮನೆಗೆ ತೆರಳಿದ್ದು, ಎ.9ರಂದು ಮಹೇಶ್‌ ಅವರು ತನ್ನ ಮನೆಯ ಎದುರಿನ ವರಾಂಡದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹೇಶ್‌ ಫೆಬ್ರವರಿ ಯಲ್ಲಿ ಹೊಸ ಮನೆ ಕಟ್ಟಿ ಗೃಹ ಪ್ರವೇಶ ಮಾಡಿಕೊಂಡಿದ್ದು, ಮನೆ ಕಟ್ಟುವ ಸಮಯ ಬ್ಯಾಂಕಿನಿಂದ ಸಾಲ ಹಾಗೂ ಇತರೆ ಕೈ ಸಾಲ ಪಡೆದಿದ್ದು, ಇತ್ತೀಚಿನ ದಿನಗಳಲ್ಲಿ ಸಾಲ ಕಟ್ಟಲು ಕಷ್ಟವಾಗಿದ್ದು ಹಾಗೂ ಮನೆಯಲ್ಲಿನ ತಕರಾರುನಿಂದ ಮನಸ್ತಾಪ ಹೊಂದಿ ಮಾನಸಿಕ ಖಿನ್ನತೆಗೆ ಒಳಗಾದಂತೆ ವರ್ತಿಸುತ್ತಿದ್ದರು ಎಂದು ಬೆಳ್ಳಾರೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next