Advertisement

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

01:46 AM Apr 30, 2024 | Team Udayavani |

ಸುಳ್ಯ: ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿ ಬೈಕ್‌ ಸವಾರ ದಂಪತಿ ತೀವ್ರ ಗಾಯಗೊಂಡ ಘಟನೆ ಸುಳ್ಯದ ಬೋಳುಬೈಲಿನಲ್ಲಿ ಸೋಮವಾರ ಸಂಜೆ ಸಂಭವಿಸಿದೆ.

Advertisement

ಬೈಕ್‌ನಲ್ಲಿದ್ದ ಗುರುಪ್ರಸಾದ್‌ ಹಾಗೂ ಪತ್ನಿ ಶಶಿಕಲಾ ತೀವ್ರ ಗಾಯಗೊಂಡಿದ್ದು, ಕಾರಿನಲ್ಲಿದ್ದ ವಿಜಲಕ್ಷ್ಮೀ ಅವರೂ ಗಾಯಗೊಂಡಿದ್ದಾರೆ. ಬಂಟ್ವಾಳದ ದಂಪತಿ ಸುಳ್ಯದ ಮೇನಾಲದಲ್ಲಿ ನಡೆದ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಊರಿಗೆ ತೆರಳುವ ವೇಳೆ ಬೋಳುಬೈಲು ಎಂಬಲ್ಲಿ ಕಾರಿಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಗುರುಪ್ರಸಾದ್‌ ಅವರ ತಲೆಗೆ ಹಾಗೂ ಶಶಿಕಲಾ ಅವರಿಗೂ ತೀವ್ರ ಗಾಯವಾಗಿದ್ದು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಎರಡೂ ವಾಹನಗಳೂ ಜಖಂಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next