ಸುಳ್ಯ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಗುರುವಾರ ಸುಳ್ಯ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರೊಂದಿಗೆ ನಗರದ ಬೀರಮಂಗಲ ವಾರ್ಡ್‌ನಲ್ಲಿ ‘ಮನೆ-ಮನೆಗೆ ಕಾಂಗ್ರೆಸ್ ಭೇಟಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪ್ರಥಮವಾಗಿ ಬೀರಮಂಗಲ ಸೈಂಟ್ ಬ್ರಿಜಿಡ್ಸ್ ಚರ್ಚ್‌ಗೆ ಭೇಟಿ ನೀಡಿದರು. ಈ ಸಂದರ್ಭ ಸ್ಥಳೀಯರು ವಾರ್ಡ್‌ನ ಮೂಲ ಸೌಕರ್ಯಗಳಿಗೆ ಅನುದಾನ ಕೊಡಿಸಲು ಜನಪ್ರತಿನಿಧಿಗಳನ್ನು ಒತ್ತಾಯಿಸಲು ಮನವಿ ಮಾಡಿದರು. ಬಳಿಕ ಮುಗೇರ ದೈವಸ್ಥಾನಕ್ಕೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದಾಗ ಪ್ರಕಾಶ್ ಬಂಗ್ಲೆಗುಡ್ಡೆ ಅವರು ಹಾರಾರ್ಪಣೆ ಮಾಡಿ ಸ್ವಾಗತಿಸಿದರು.
ಬಳಿಕ ಬೀರಮಂಗಲದ ಮನೆಗಳಿಗೆ ಭೇಟಿ ನೀಡಿ ರಾಜ್ಯ ಸರಕಾರದ ಸಾಧನೆಯ ಹೊತ್ತಗೆ ಯನ್ನು ನೀಡಿ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಮತ ನೀಡುವಂತೆ ಕೋರಿದರು.
ಮನೆಮನೆ ಭೇಟಿ ಸಂದರ್ಭ ಕೆಪಿಸಿಸಿ ಸದಸ್ಯರಾದ ಎಂ. ವೆಂಕಪ್ಪ ಗೌಡ, ಡಾ| ರಘು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಪದಾಧಿಕಾರಿಗಳಾದ ಸುಧೀರ್ ರೈ ಮೇನಾಲ, ಶ್ರೀಹರಿ ಕುಕ್ಕುಡೇಲು, ಸಿದ್ದಿಕ್ ಸುಳ್ಯ, ಅಶೋಕ್ ಚೂಂತಾರು, ನಂದರಾಜ್ ಸಂಕೇಶ, ವಕೀಲ ಧರ್ಮಪಾಲ ಕೊಯಿಂಗಾಜೆ, ಲಕ್ಷ್ಮಣ ಶೆಣೈ, ಅಕ್ಷತ್, ಧೀರ, ಅಬ್ದುಲಬಿನ್ನ, ಶಾಫಿ ಕುತ್ತಮೊಟ್ಟೆ, ಗೋಕುಲ್‌ದಾಸ್, ಪ್ರಕಾಶ್ ಬಂಗ್ಲೆಗುಡ್ಡೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಕಾಂಗ್ರೆಸ್ ಕಚೇರಿಗೆ ಭೇಟಿ
ಮನೆ ಮನೆ ಭೇಟಿ ಮೊದಲು ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಾಲೂಕು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭ ಮನೆ ಮನೆ ಭೇಟಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮತ್ತು ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುವಂತೆ ಒಗ್ಗಟ್ಟಿನಿಂದ ಕಾರ್ಯಪ್ರವೃತ್ತರಾಗಲು ಕರೆ ನೀಡಿದರು.