Advertisement

ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ಜಾಗ ಅತಿಕ್ರಮಣ ?

04:42 PM Oct 29, 2017 | |

ಸುಳ್ಯ: ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಈ ಹಿಂದೆ 24 ಎಕ್ರೆ ಜಾಗ ಮಂಜೂರಾಗಿದ್ದು, ಪ್ರಸ್ತುತ 11.07 ಎಕ್ರೆ ಮಾತ್ರ ಎನ್ನಲಾಗುತ್ತಿದೆ. ಈ ಕುರಿತಾದ ಪರ- ವಿರೋಧ ಅಭಿಪ್ರಾಯಗಳು ಗರಿಗೆದರಿ ಕೊಂಡಿದ್ದು, ಒತ್ತುವರಿ ಬಗೆಗೆ ಹೋರಾಟ ಶುರುವಾಗುವ ಲಕ್ಷಣ ಕಂಡುಬರುತ್ತಿದೆ.

Advertisement

ಸುಳ್ಯ ತಾ.ಪಂ. ಸಭಾಂಗಣದಲ್ಲಿ ಜರಗಿದ ಪ.ಜಾತಿ ಮತ್ತು ಪ. ಪಂಗಡದ ಕುಂದು -ಕೊರತೆ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಗೊಂಡಿತು. ಶನಿವಾರ ನಡೆದ ಸಭೆಯಲ್ಲಿ ಪಾಲನ ವರದಿ ಸಂದರ್ಭ ಪ್ರಾಂಶುಪಾಲರ ಗೈರಿನಲ್ಲಿ ದಲಿತ ಮುಖಂಡ ನಂದರಾಜ್‌ ಸಂಕೇಶ್‌ ವಿಷಯ ಪ್ರಸ್ತಾಪಿಸಿದರು.

ಕಾಲೇಜು ಫಲಿತಾಂಶ ಉತ್ತಮವಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಕೊಠಡಿ ಕೊರತೆಯಿದೆ. ಕಾಲೇಜಿಗೆಂದು 24 ಎಕ್ರೆ ಜಾಗ ಮಂಜೂರಾಗಿದ್ದರೂ ಅದರಲ್ಲಿ ಈಗ 14 ಎಕ್ರೆ ಮಾತ್ರ ಶಾಲಾಡಳಿತದ ಸುಪರ್ದಿಯಲ್ಲಿದೆ. ಉಳಿದ ಜಾಗ ಅತಿಕ್ರಮಣವಾಗಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಸರ್ವೆ ನಡೆಸಿ ಗಡಿಗುರುತು ಮಾಡಿಕೊಳ್ಳುವಂತೆ ಆಗ್ರಹಿಸಿದ್ದರು. ಸಭೆಗೆ ಪ್ರಾಂಶುಪಾಲರನ್ನು ಕರೆಸುವಂತೆ ದಲಿತ ಮುಖಂಡರು ಮನವಿ ಮಾಡಿದರು. ಬಳಿಕ ಆಗಮಿಸಿದ ಪ್ರಾಂಶುಪಾಲರು ಮಾಹಿತಿ ನೀಡಿದರು. ಒತ್ತುವರಿ ತೆರವಿಗೆ ನೋಟಿಸ್‌ ಜಾರಿ ಮಾಡಬೇಕು. ಅಕ್ರಮ ಜಾಗದ ಆರ್‌ಟಿಸಿ ರದ್ದತಿಗೆ ಉಪವಿಭಾಗಾಕಾಧಿರಿಗಳಿಗೆ ಹಕ್ಕು ಇದ್ದು, ಅವರಿಗೆ ಪತ್ರ ಬರೆಯಿರಿ ಎಂದು ಹೇಳಿದ ತಹಶೀಲ್ದಾರ್‌, ಮುಂದಿನ ಬಾರಿ ಶಾಲಾ ಜಾಗ, ಒತ್ತುವರಿ ಮೊದಲಾದ ಪೂರ್ಣ ಮಾಹಿತಿಯೊಂದಿಗೆ ಸಭೆಗೆ ಆಗಮಿಸುವಂತೆ ಸೂಚಿಸಿದರು.

ಆರ್‌ಟಿಸಿ ಪ್ರಕಾರ 1.76 ಎಕ್ರೆ
ಶಾಲಾ ದಾಖಲಾತಿ ಪ್ರಕಾರ ಒಟ್ಟು 10.31 ಸೆಂಟ್ಸ್‌ ಇದೆ. ಆರ್‌ಟಿಸಿ ಪ್ರಕಾರ ಸ.ನಂ. 329 ಮತ್ತು 327 ರಲ್ಲಿ 1.10
ಮತ್ತು 66 ಸೆಂಟ್ಸ್‌ ಸೇರಿದಂತೆ ಒಟ್ಟು 1.76 ಎಕ್ರೆ ಜಾಗ ಒತ್ತುವರಿಯಾಗಿದೆ. ಸ.ನಂ. 327ರಲ್ಲಿ ಎರಡು ಆರ್‌ಟಿಸಿ
ಇವೆ. ಇದರಲ್ಲಿ 66 ಸೆಂಟ್ಸ್‌ ಹಾಗೂ 329ರಲ್ಲಿ 7.47 ಸೆಂಟ್ಸ್‌ ಇದೆ. ಈ ಪೈಕಿ 1.10 ಎಕ್ರೆ ಒತ್ತುವರಿಯಾಗಿದೆ. ಈ ಆರ್‌ಟಿಸಿಯಲ್ಲಿ ನಾಲ್ವರ ಹೆಸರು ಇರುವುದನ್ನು ಉಲ್ಲೇಖೀಸಿ ಪ್ರಾಂಶುಪಾಲರಾದ ಚಿದಾನಂದ ಅವರು ಸಭೆಯಲ್ಲಿ ಮಾಹಿತಿ ನೀಡಿದರು.

ಕ್ರಮ ಕೈಗೊಳ್ಳಿ
ಶಾಲೆಯ ದಾಖಲೆ ಪ್ರಕಾರ ಪ್ರಸ್ತುತ ಒಟ್ಟು 10.31 ಎಕ್ರೆ ಜಾಗವಿದೆ. ಈ ಪೈಕಿ ಎರಡೂ ಆರ್‌ಟಿಸಿಯಲ್ಲಿರುವಂತೆ
ಒಟ್ಟು 1.76 ಎಕ್ರೆ ಒತ್ತುವರಿಯಾಗಿರುವುದು ಕಾಣಿಸುತ್ತಿದೆ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಸರಕಾರ ಕ್ರಮ ಕೈಗೊಂಡು ಸಂರಕ್ಷಿಸಬೇಕು.
ಚಿದಾನಂದ ಎಂ.ಎಸ್‌.
   ಸುಳ್ಯ ಸ.ಪ.ಪೂ. ಕಾಲೇಜು ಪ್ರಾಂಶುಪಾಲ

Advertisement

24 ಎಕ್ರೆ ಜಾಗವಿದೆ
ಸಾಮಾಜಿಕವಾದ ಉದ್ದೇಶದಿಂದ ಶಾಲಾ ಜಾಗದ ಬಗ್ಗೆ ಧ್ವನಿ ಎತ್ತಿದ್ದೇನೆ. ಅಂದಾಜು 24 ಎಕ್ರೆ ಜಾಗವಿದ್ದು, ಈ ಪೈಕಿ 11 ಎಕ್ರೆ ಮಾತ್ರ ಇದೆ ಎಂದು ಶಾಲಾಡಳಿತ ಹೇಳುತ್ತಿದೆ.
– ನಂದರಾಜ ಸಂಕೇಶ, ದಲಿತ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next