Advertisement

ಸುಳ್ಯ: ಅನುಷ್ಠಾನ ಹಾದಿಯಲ್ಲಿ ವಿಳಂಬ!

02:33 PM Jan 02, 2018 | |

ಸುಳ್ಯ: ತ್ಯಾಜ್ಯ ಮುಕ್ತ ಸುಳ್ಯ ಇದು ನ.ಪಂ. ಎರಡು ವರ್ಷದ ಹಿಂದಿನ ಘೋಷಣೆ. ಆದರೆ ಯೋಚನೆ ಸಮರ್ಪಕ ವಾಗಿ ಅನುಷ್ಠಾನಕ್ಕೆ ಬಂದಿಲ್ಲ ಅನ್ನುತ್ತಿದೆ ಇಲ್ಲಿನ ಸ್ಥಿತಿ. ಕರಗದ ಪ್ಲಾಸ್ಟಿಕ್‌ನಿಂದ ಭೂಮಿಗೆ, ಜೀವ ಸಂಕುಲಕ್ಕೆ ಅಪಾಯ ಎಂಬ ಸತ್ಯ ಗೊತ್ತಿದ್ದರೂ, ಅದರ ಬಳಕೆಗೆ ಕಡಿ ವಾಣ ಬಿದ್ದಿಲ್ಲ. ಸ್ವತ್ಛ ಸುಳ್ಯ ಕಲ್ಪನೆಗೆ ಬದ ಲಾಗಿ, ನಗರದ ಮುಖ್ಯ ರಸ್ತೆಗಳ ಬದಿಗಳಲ್ಲಿ ತ್ಯಾಜ್ಯ ರಾಶಿಗೆ ಕಡಿವಾಣ ಬಿದ್ದಿಲ್ಲ!

Advertisement

ಸ್ವಚ್ಛ ಸುಳ್ಯದ ಕನಸು
ಸ್ವಚ್ಛ ಸುಳ್ಯ ನಿರ್ಮಾಣದ ಕನಸಿ ವೇಳೆ, ಇದಕ್ಕೆ ಪೂರಕ ವಾಗಿ ಹಲವು ಕ್ರಮಗ ಳನ್ನು ಕೈಗೊಳ್ಳಲು ನಿರ್ಧರಿಸಲಾಗಿತ್ತು. 2015 ಅ. 2ರಂದು ವಿವಿಧ ವಾರ್ಡ್‌ಗಳಲ್ಲಿ ಕಾರ್ಯಕ್ರಮ ನಡೆದಿತ್ತು. ಪ್ರತಿ ವಾರ್ಡ್‌ ನಲ್ಲಿ ಸ್ವಚ್ಛತಾ ಸಮಿತಿ, ಜನಜಾಗೃತಿ, ಅಭಿಪ್ರಾಯ ಸಂಗ್ರಹ, ವಾರ್ಡ್‌ಗೆ 10 ಪೈಪ್‌ ಕಾಂಪೋಸ್ಟ್‌, ಸ್ಥಳೀಯವಾಗಿ ತ್ಯಾಜ್ಯ ನಿರ್ವಹಣೆ, ತ್ಯಾಜ್ಯ ವಿಂಗಡಣೆ ಕುರಿತು ಅರಿವು, ಅಂಗಡಿ-ಮಾರುಕಟ್ಟೆಗೆ ನಿಯಮ, ಉಲ್ಲಂಘಿಸುವವರ ಪರವಾನಿಗೆ ರದ್ದು ಮೊದಲಾದ ಕ್ರಮ ಜಾರಿಗೆ ತೀರ್ಮಾನಿಸಲಾಗಿತ್ತು. ಆದರೆ ಅದು ಜಾರಿ ಆಗುತ್ತಿಲ್ಲ ಎನ್ನುವುದಕ್ಕೆ ನಗರದ ಅಲ್ಲಲ್ಲಿ ಹಬ್ಬಿರುವ ಪ್ಲಾಸ್ಟಿಕ್‌ ರಾಶಿ ಸಾಕ್ಷಿ.

ಯಾರ್ಡ್‌ನಲ್ಲಿ ಜಾಗ ಇಲ್ಲ
25 ಸಾವಿರ ಜನಸಂಖ್ಯೆ ನಗರದಲ್ಲಿ 4,500 ಮನೆಗಳಿವೆ. 3,500ಕ್ಕೂ ಅಧಿಕ ಕಟ್ಟಡಗಳಿವೆ. ದಿನಂಪ್ರತಿ 7 ಟನ್‌ನಷ್ಟು ಕಸ ಸಂಗ್ರಹವಾಗುತ್ತಿದೆ. ವಿಲೇವಾರಿಗಾಗಿ ತಿಂಗಳಿಗೆ 2 ಲಕ್ಷ ರೂ.ನಷ್ಟು ನಗರಸಭೆ ವ್ಯಯಿಸುತ್ತಿದೆ. ಇಲ್ಲಿ ಸ್ವತ್ಛತಾ ಸಿಬಂದಿ ಕೊರತೆಯಿದೆ. 30 ಜನ ಇರಬೇಕಾದಲ್ಲಿ 15 ಮಂದಿ ಮಾತ್ರ ಇದ್ದಾರೆ.

ನಗರದ ತ್ಯಾಜ್ಯ ಡಂಪಿಂಗ್‌ ಆಗುವ ಕಲ್ಚೆಪೆì ಯಾರ್ಡ್‌ ಹೌಸ್‌ಪುಲ್‌ ಆಗಿದೆ. ಪರ್ಯಾಯ ಯಾರ್ಡ್‌ ನಿರ್ಮಾಣ ಕಾರ್ಯ ಇನ್ನು ಅನುಷ್ಠಾನಗೊಂಡಿಲ್ಲ. ಎರೆಹುಳ ಘಟಕ ಉತ್ಪಾದನೆಗೆ ಆದ್ಯತೆ ನೀಡಿಲ್ಲ. ಹಸಿಕಸ-ಒಣಕಸ ವಿಭಜನೆ ಆಗದೇ ಎಲ್ಲವೂ ಯಾರ್ಡ್‌ನಲ್ಲಿ ರಾಶಿ ಬೀಳುತ್ತಿದೆ. ಮಳೆಗಾಲದಲ್ಲಿ ತ್ಯಾಜ್ಯದ ನೀರು ರಸ್ತೆ ಮೂಲಕ ಪಯಸ್ವಿನಿ ಮಡಿಲು ಸೇರುವ ಆತಂಕವೂ ಸೃಷ್ಟಿ ಆಗಿದೆ.

ಪ್ಲಾಸ್ಟಿಕ್‌ ರಾಶಿ
ನಗರದಲ್ಲಿ ಹಾದುವ ಹೋಗುವ ಮಾಣಿ- ಮೈಸೂರು ರಾಜ್ಯ ಹೆದ್ದಾರಿ ಬದಿಯ, ನ.ಪಂ. ವ್ಯಾಪ್ತಿಯ ಹಳೆಗೇಟು, ಪೈಚಾರಿನ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಇದೆ. ಎರಡು ಬದಿಯ ಚರಂಡಿ, ರಸ್ತೆ ಯಲ್ಲೇ ಪ್ಲಾಸ್ಟಿಕ್‌ ವಸ್ತುಗಳು ಎಲ್ಲೆಂದರಲ್ಲಿ ಬಿದ್ದು ತಿಂಗಳು ಕಳೆ ದಿವೆ. ಪ್ರತಿದಿನ ಅಧಿಕಾರಿಗಳು, ಜನಪ್ರತಿ ನಿಧಿಗಳು ಇದೇ ರಸ್ತೆ ಮೂಲಕ ಸಂಚರಿಸುತ್ತಾರೆ. ಪರಿಸ್ಥಿತಿ ಹೀಗಿದ್ದರೂ, ಅವರ ಗಮನಕ್ಕೆ ಬಂದಿಲ್ಲ.

Advertisement

ಪ್ಲಾಸ್ಟಿಕ್‌ ನಿಷೇಧ 
ಈ ಹಿಂದೆ  ನ.ಪಂ. ನಿರ್ಣಯ ಅಂಗೀಕರಿಸಿ, ಸರಕಾರಕ್ಕೆ ಕಳುಹಿಸಿದೆ. ವಾಣಿಜ್ಯ ಕಟ್ಟಡಗಳಲ್ಲಿ ಪ್ಲಾಸ್ಟಿಕ್‌ ಚೀಲ ನೀಡುವ ಮತ್ತು ಜನರ ಬಳಕೆ ನಿಯಂತ್ರಿಸುವ ಕುರಿತು ಕರಪತ್ರ ಮತ್ತು ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಿತ್ತು. ಇಷ್ಟಾದರೂ, ಅಧಿಕಾರಿಗಳು ಘೋಷಣೆ, ಕ್ರಮದ ಬಗ್ಗೆ ಮಾತನಾಡಿದ ರೀತಿಯಲ್ಲಿ ನಿರ್ವಹಣೆ ಬಗ್ಗೆ ತಲೆ ಕೆಡಿಸಿ ಕೊಳ್ಳಲಿಲ್ಲ. ಹಾಗಾಗಿ ಪರಿಸ್ಥಿತಿ ಸುಧಾರಿಸುವ ಬದಲು, ಹದಗೆಟ್ಟಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಕಿರಣ್‌ ಪ್ರಸಾದ್‌ ಕುಂಡಡ್ಕ
ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ.

Advertisement

Udayavani is now on Telegram. Click here to join our channel and stay updated with the latest news.

Next