Advertisement

Moon: ಚಂದ್ರನಲ್ಲಿ ಗಂಧಕ: ಲಾಭಗಳೇನು?

11:55 PM Aug 30, 2023 | Team Udayavani |

ಹೊಸದಿಲ್ಲಿ: ಚಂದ್ರನ ದಕ್ಷಿಣ ಭಾಗಕ್ಕೆ ಇಳಿದಿರುವ ಚಂದ್ರಯಾನ-3ರ ರೋವರ್‌ ಮಂಗಳವಾರ ಆ ಪ್ರದೇಶದಲ್ಲಿ ಗಂಧಕ ಇದೆ ಎಂಬ ಅಂಶ ಇರುವ ಬಗ್ಗೆ ಮಾಹಿತಿ ರವಾನೆ ಮಾಡಿತ್ತು. ಇದು ಹಲವು ರೀತಿಯಲ್ಲಿ ಮಹತ್ವಗಳನ್ನು ಪಡೆದುಕೊಂಡಿದೆ.

Advertisement

· ಚಂದ್ರನ ರಚನೆ ಹೇಗೆ ಆಗಿರಬಹುದು ಎಂಬುದರ ಬಗ್ಗೆ ಅಧ್ಯಯನ ನಡೆಸಲು ಸಾಧ್ಯ.
· ಅಲ್ಲಿ ಇರಬಹುದು ಎಂದು ನಿರೀಕ್ಷೆ ಮಾಡಲಾಗಿರುವ ಖನಿಜಗಳ ಬಗ್ಗೆ ಹೆಚ್ಚಿನ ಅಧ್ಯಯನ ಸಾಧ್ಯ.
· ಮಂಜುಗಡ್ಡೆಯ ರೀತಿಯಲ್ಲಿ ನೀರು ಇರುವ ಸಾಧ್ಯತೆಯ ಮುನ್ಸೂಚನೆ.
· ಮುಂದಿನ ಹಂತಗಳಲ್ಲಿ ಅಲ್ಲಿಗೆ ಅಧ್ಯಯನಕ್ಕಾಗಿ ಹೋದಾಗ ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ನೆರವು.

ಹೈಡ್ರೋಜನ್‌ ಬಗ್ಗೆ ಸಂಶೋಧನೆ
ರೋವರ್‌ ಈಗ ಚಂದ್ರನ ದಕ್ಷಿಣ ಭಾಗದಲ್ಲಿ ಇರಬಹುದಾದ ಹೈಡ್ರೋಜನ್‌ ಬಗ್ಗೆ ಶೋಧ ನಡೆಸುತ್ತಿದೆ. ಒಂದು ವೇಳೆ ಅದು ಲಭ್ಯವಾದರೆ, ಬಾಹ್ಯಾಕಾಶದ ಲ್ಲಿಯೇ ಇಂಧನ ಉತ್ಪಾದನೆ ಮಾಡಲು ಸಾಧ್ಯವಾಗುವ ಬಗ್ಗೆ ಸಂಶೋಧನೆಗಳು ನಡೆಯಬಹುದು.

 

Advertisement

Udayavani is now on Telegram. Click here to join our channel and stay updated with the latest news.

Next