Advertisement

Udupi ಧರ್ಮ ಸಂರಕ್ಷಣೆಯಲ್ಲಿ ಪುರೋಹಿತರು, ವಿದ್ವಾಂಸರ ಪಾತ್ರ ಅಪಾರ: ಪುತ್ತಿಗೆ ಶ್ರೀ

10:59 PM May 26, 2024 | Team Udayavani |

ಉಡುಪಿ: ಧರ್ಮ ಸಂರಕ್ಷಣೆಯಲ್ಲಿ ಪುರೋಹಿತರು, ವಿದ್ವಾಂಸರ ಪಾತ್ರ ಮುಖ್ಯವಾದುದು. ಅಂತಹವರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವಲ್ಲಿ ಶ್ರೀ ಪುತ್ತಿಗೆ ವಿದ್ಯಾಪೀಠವು 37 ವರ್ಷಗಳಿಂದ ಕಾರ್ಯನಿರತವಾಗಿದೆ ಎಂದು
ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು.

Advertisement

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ನಡೆದ ಶ್ರೀ ಪುತ್ತಿಗೆ ವಿದ್ಯಾಪೀಠದ 37ನೇ ಘಟಿಕೋತ್ಸವ ಹಾಗೂ ಗುರುವಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರೀಪಾದರು ಆಶೀರ್ವಚನ ನೀಡಿದರು.

ಧಾರ್ಮಿಕ ಆಚರಣೆ, ತಣ್ತೀದ ತಿಳುವಳಿಕೆಯನ್ನು ಸ್ಥೂಲವಾಗಿ ಅಧ್ಯ ಯನ ಮಾಡಿದ ವಿದ್ಯಾರ್ಥಿಗಳು ಜನರು ಧರ್ಮ ಪರಿಪಾಲಕರಾಗಿ ಬದುಕಲು ದಾರಿ ತೋರಿಸಬೇಕು.

ವಿದ್ಯಾಪೀಠದಲ್ಲಿ ಅಭ್ಯಾಸ ಮಾಡಿದವರಲ್ಲಿ 30 ಪುರೋಹಿತರು ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾಪೀಠವು ಇದೀಗ 7 ಮಂದಿ ಪುರೋಹಿತ ರನ್ನು ಸಮಾಜಕ್ಕೆ ಧಾರೆ ಎರೆದಿದೆ ಎಂದರು.

ಹುಣಸಿಹೊಳೆ ಕಣ್ವ ಮಠದ ಶ್ರೀ ವಿದ್ಯಾಕಣ್ವವಿರಾಜತೀರ್ಥ ಶ್ರೀಪಾದರು,ಶ್ರೀ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

Advertisement

ವಿದ್ವಾಂಸರಾದ ವಿ| ಸಗ್ರಿ ರಾಘವೇಂದ್ರ ಆಚಾರ್ಯ, ವಿ| ಸೂರ್ಯನಾರಾಯಣ ಉಪಾಧ್ಯಾಯ ಕುಂಭಾಶಿ, ವಿ| ಶ್ರೀಧರ ತಂತ್ರಿ ಕೇಂಜ, ವಿ| ರಾಮದಾಸ ಉಪಾಧ್ಯಾಯ ಮುಂಬಯಿ, ವಿ| ಪ್ರಕಾಶ ಭಟ್‌ ಮುಂಬಯಿ, ವಿ| ಪ್ರವೀಣ್‌ ಆಚಾರ್ಯ ಚೆನ್ನೈ, ವಿ| ಶ್ರೀಪತಿ ಆಚಾರ್ಯ, ಶ್ರೀನಿವಾಸ ಆಚಾರ್ಯ ಬೆಳಗಾವಿ, ರೋಹಿತ್‌ ಚಕ್ರತೀರ್ಥ, ಶತಾವಧಾನಿ ರಾಮನಾಥ ಆಚಾರ್ಯ, ವಿ| ವಿಜಯಸಿಂಹ ತೋಟಂತಿಲ್ಲಾಯ ಶುಭಾಶಂಸನೆಗೈದರು.
ಶ್ರೀ ಮಠದ ರಮೇಶ್‌ ಭಟ್‌, ವಿದ್ವಾಂಸರು, ಗಣ್ಯರು ಉಪಸ್ಥಿತರಿದ್ದರು. ವಿ| ರಾಜೇಶ್‌ ಭಟ್‌ ಮುಂಬಯಿ, ವಿ| ಪಂಜ ಭಾಸ್ಕರ ಭಟ್‌ ಅವರನ್ನು ಶ್ರೀಪಾದರು ಗೌರವಿಸಿದರು. ವಿದ್ವಾಂಸ ಡಾ| ಬಿ. ಗೋಪಾಲ ಆಚಾರ್ಯರು ವಿದ್ಯಾಪೀಠದ ಆಶಯವನ್ನು ವ್ಯಕ್ತಪಡಿಸಿ ದರು. ವಿದ್ಯಾಪೀಠದ ಪ್ರಾಂಶುಪಾಲ ಶ್ರೀನಿಧಿ ಆಚಾರ್ಯ ಸ್ವಾಗತಿಸಿದರು. ವಿ| ಯೋಗೀಂದ್ರ ಭಟ್‌ ಉಳಿ ನಿರೂಪಿಸಿ, ವಿ| ವಾದಿರಾಜ ತಂತ್ರಿ ವಂದಿಸಿದರು.

ಮಂಗಳ ಮಹೋತ್ಸವದಲ್ಲಿ ವಿದ್ಯಾರ್ಥಿಗಳಾದ ಸಂದೇಶ ಮೂಡಿತ್ತಾಯ ಪೆರ್ಡೂರು (ಜೋತಿಷ ಶಾಸ್ತ್ರ ), ವಿರಾಜ್‌ ಭಟ್‌ ಹಳೆಯಂಗಡಿ (ರುಕ್ಮಿಣೀಶ ವಿಜಯ), ಅರ್ಜುನ ಹೆಗಡೆ ಶಿರಸಿ (ಉಪನಿಷತ್ತು), ಕೃಷ್ಣ ಹೆಗಡೆ ಶಿರಸಿ (ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥ), ದರ್ಶನ್‌ ದೇಶಪಾಂಡೆ ಬಾದಾಮಿ (ವಾಯುದೇವರ ಅವತಾರದ ಕಾರಣ), ಶ್ರವಣ್‌ ಭಟ್‌ ಅಜೆಕಾರು (ಪೌರೋಹಿತ್ಯ) ಅವರು ವಿಷಯ ಪ್ರಸ್ತುತಪಡಿಸಿದರು.

ಪ್ರಾರಂಭೋತ್ಸವ-ಗುರುವಂದನೆ
ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಗೌರವಿಸಿದ ಪುತ್ತಿಗೆ ಶ್ರೀಪಾದರು ವಿದ್ಯಾಪೀಠದ 38ನೇ ವರ್ಷಕ್ಕೆ ವಿದ್ಯಾರ್ಥಿಗಳಿಗೆ ಶಾಂತಿ ಪಾಠದ ಮೂಲಕ ಚಾಲನೆ ನೀಡಿದರು. ವಿದ್ಯಾರ್ಥಿಗಳ ಪರವಾಗಿ ಶ್ರೀ ವಿದ್ಯಾಕಣ್ವವಿರಾಜತೀರ್ಥ ಶ್ರೀಪಾದರಿಗೆ ಮಠದ ದಿವಾನ ಪ್ರಸನ್ನ ಆಚಾರ್ಯರ ನೇತೃತ್ವದಲ್ಲಿ ಗುರುವಂದನೆ ನಡೆಸಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next