ಈ ಸಕ್ಕರೆ ಕಾಯಿಲೆಗೆ ವಯಸ್ಸಿನ ಹಂಗೇ ಇಲ್ಲ ನೋಡಿ. ಹುಟ್ಟಿದ ಮಕ್ಕಳಿಂದ ಸಾಯೋ ಮುದುಕರನ್ನು ಸಮಾನ ರೀತಿ ಕಾಡುವ ರೋಗ ಇದು. ಚಿಂತೆ ಇಲ್ಲ. ಅದಕ್ಕೂ ಮದ್ದಿದೆ. ಅದುವೇ ನಮ್ಮ ಆಹಾರ ಪದ್ಧತಿ. ದೇಹದಲ್ಲಿ ಕೊಲೆಸ್ಟ್ರಾಲ್ ಇದ್ದರೆ ತಲೆನೋವು ಜಾಸ್ತಿ. ಇದರಿಂದ ಹೃದಯಕ್ಕೂ ಸಮಸ್ಯೆ. ಸಕ್ಕರೆ ಅಂಶ ಏರಿಸುತ್ತದೆ. ಹೀಗಾಗಿ, ಜೇಬಲ್ಲಿ ಶೇಂಗಾ, ಗೇರು ಬೀಜ, ಬಾದಾಮಿಗಳಂಥ ಒಣ ಹಣ್ಣಿನ ಬೀಜಗಳನ್ನು ಇಟ್ಟುಕೊಂಡು ಆಗಾಗ ತಿನ್ನಿ. ಇವು ದೇಹದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಹಿಡಿತದಲ್ಲಿಟ್ಟುಕೊಂಡಿರ್ತುತದೆ. ಸಕ್ಕರ ಪ್ರಮಾಣ ಹೆಚ್ಚು ಉತ್ಪಾದನೆ ಆಗದಂತೆ ನೋಡಿಕೊಳ್ಳುತ್ತದೆ. ಜೀರ್ಣ ಶಕ್ತಿ ಸರಿ ಮಾಡಿಕೊಳ್ಳಲು ಕಾಮ ಕಸ್ತೂರಿ ಬೀಜವನ್ನು ನೀರಲ್ಲಿ ಹಾಕಿ ಕುಡಿಯಿರಿ. ಇದರಿಂದ ಇನ್ಸುಲಿನ್ ಪ್ರಮಾಣ ಕಡಿಮೆಯಾಗುತ್ತದೆ. ಇದರ ಜೊತೆಗೆ ಅಗಸೆ ಬೀಜ ಪುಡಿ ಬಳಸಿ ಇದೂ ಕೂಡ ಇನ್ಸುಲಿನ್ ಅಂಶವನ್ನು ಇಳಿಸುತ್ತದೆ. ಸಕ್ಕರೆ ಕಾಯಿಲೆಗೆ ರಾಮಬಾಣ ಕಡಿಮೆ ಕ್ಯಾಲೊರಿ ಇರುವ ತರಕಾರಿಗಳನ್ನು ಉಪಯೋಗಿಸುವುದು.