Advertisement

ಆಳಂದ ಸಕ್ಕರೆ ಕಾರ್ಖಾನೆ ಮಹಾಸಭೆ

12:29 PM Nov 18, 2021 | Team Udayavani |

ಕಲಬುರಗಿ: ಭೂಸನೂರಿನ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರ ಹಾಗೂ ಷೇರು ಸದಸ್ಯರ ಸಮಸ್ಯೆಗಳ ಸ್ಪಂದನೆಗೆ ಆಡಳಿತ ಮಂಡಳಿ ಸದಾ ಸಿದ್ಧವಾಗಿದೆ ಎಂದು ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಲಿಂಗ ಜಂಗಮ ಪಾಟೀಲ ಹೇಳಿದರು.

Advertisement

ಇಲ್ಲಿನ ವಿಶ್ವಾರಾಧ್ಯ ಕಲ್ಯಾಣ ಮಂಟಪದಲ್ಲಿ ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆಯ 2020-21ನೇ ಸಾಲಿನ 40 ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಖಾನೆಯ ಆಡಳಿತ ಮಂಡಳಿಗೆ ವಾಸ್ತವ ಅರಿವಾಗಿದೆ ಎಂದರು. ನಂತರ ಅಧ್ಯಕ್ಷರು ರೈತರ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಉಪಾಧ್ಯಕ್ಷ ಸಿದ್ರಾಮ ಸಾಲಿಮನಿ, ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಎಸ್‌.ನಿಂಬಾಳ, ನಿರ್ದೇಶಕ ಧರ್ಮರಾಜ ಸಾಹು, ರೈತ ಕಲ್ಯಾಣರಾವ ಪಾಟೀಲ, ಶಿವಪುತ್ರಪ್ಪ ಗುತ್ತೇದಾರ ಸಭೆಯಲ್ಲಿ ಮಾತನಾಡಿದರು. ನಿರ್ದೇಶಕ ಶಿವರಾಜ ಮಹಾಗಾಂವ, ನೀಲಕಂಠರಾವ್‌ ಪಾಟೀಲ, ಹರ್ಷವರ್ಧನ ಗುಗ್ಗಳೆ, ಚನ್ನಬಸಪ್ಪ ಪಾಟೀಲ, ಪ್ರಕಾಶ ಸಣಮನಿ, ಶಿವರಾಜ ಪಾಟೀಲ, ಶಾಂತೇಶ್ವರ ಪಾಟೀಲ, ಶಿವಪುತ್ರಪ್ಪ ಕೊಟ್ಟರಕಿ, ಶಂಕರ ಸೋಮಾ, ಕಮಲಾಬಾಯಿ ಸಕ್ಕರಗಿ, ರೇಣುಕಾ ಹಾವನಳಿ, ಮುಖಂಡ ಅಶೋಕ ಗುತ್ತೇದಾರ, ಗುರು ಪಾಟೀಲ, ರಾಜಶೇಖರ ಪಾಟೀಲ ಚಿತಲಿ,ರಾಜಶೇಖರ ಮಲಶಟ್ಟಿ, ಶರಣಪ್ಪ ಮಲಶಟ್ಟಿ ಸೇರಿದಂತೆ ಆಳಂದ, ಅಫಜಲಪುರ, ಕಲಬುರಗಿ ವ್ಯಾಪ್ತಿಯ ಷೇರು ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸೂರ್ಯಕಾಂತ ಸಣಮನಿ ಸ್ವಾಗತಿಸಿದರು, ಶರಣಪ್ಪ ಧುಲಾಂಗೆ ವಾರ್ಷಿಕ ವರದಿ ವಾಚಿಸಿದರು, ಶ್ರೀಕಾಂತ ಹರಿಹರ ನಿರೂಪಿಸಿದರು, ಸುನೀಲ ಮಠ ವಂದಿಸಿದರು

Advertisement

Udayavani is now on Telegram. Click here to join our channel and stay updated with the latest news.

Next