ಸಿಡ್ನಿ: ಹುಟ್ಟಿನಿಂದಲೇ ತನಗೆ ಕಿಡ್ನಿ ಸಂಬಂಧಿಸಿದ ಕಾಯಿಲೆಯಿದ್ದು, ಅದು ಗುಣಪಡಿಸಲಾಗದ್ದು ಎಂದು ಆಸ್ಟ್ರೇಲಿಯಾ ತಂಡದ ಮತ್ತು ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದ ಸ್ಟಾರ್ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಹೇಳಿದ್ದಾರೆ.
7ಕ್ರಿಕೆಟ್‌ಗೆ ನೀಡಿದ ಸಂದರ್ಶನದಲ್ಲಿ, ಗ್ರೀನ್ ಅವರು ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದರು. ಆದರೆ ಅದು ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ ಎಂದರು.
“ನಾನು ಜನಿಸಿದಾಗ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಇದೆ ಎಂದು ನನ್ನ ಹೆತ್ತವರಿಗೆ ಹೇಳಲಾಗಿತ್ತು. ಮೂಲತಃ, ಯಾವುದೇ ರೋಗಲಕ್ಷಣಗಳಿರಲಿಲ್ಲ. ಮೂತ್ರಪಿಂಡಗಳು ಉತ್ತಮಗೊಳ್ಳಲು ಸಾಧ್ಯವಿಲ್ಲ. ಇದು ಬದಲಾಯಿಸಲಾಗದು” ಎಂದು ಗ್ರೀನ್ ಹೇಳಿದರು.
ಇದನ್ನೂ ಓದಿ:Explainer: ಬಾಂಗ್ಲಾ ವಿಮೋಚನೆಯ ಕೂಗಿಗೆ ದನಿಯಾಯಿತು ಐಎಎಫ್: ಜನ್ಮತಾಳಿತು ಬಿಎಎಫ್!
ಗ್ರೀನ್ ನ ತಂದೆ ಗ್ಯಾರಿ ಬಳಿ ವೈದ್ಯರು, ಕ್ಯಾಮರೂನ್ ಅವರ ಸ್ಥಿತಿಯಿಂದಾಗಿ 12 ವರ್ಷಕ್ಕಿಂತ ಮೇಲ್ಪಟ್ಟು ಬದುಕುವುದಿಲ್ಲ ಎಂದು ಹೇಳಿದ್ದರಂತೆ.
ಸ್ಟಾರ್ ಆಲ್ ರೌಂಡರ್ ಆಗಿರುವ ಕ್ಯಾಮರೂನ್ ಗ್ರೀನ್ ಅವರನ್ನು ಇತ್ತೀಚೆಗೆ ಮುಂಬೈ ಇಂಡಿಯನ್ ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಟ್ರೇಡ್ ಮಾಡಲಾಗಿತ್ತು. ಐಪಿಎಲ್ 2023 ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡವು 17.50 ಕೋಟಿ ರೂ ಬೆಲೆಗೆ ಗ್ರೀನ್ ಅವರನ್ನು ಖರೀದಿ ಮಾಡಿತ್ತು.