Advertisement

ಕಬ್ಬಡಿ ಅಖಾಡದಲ್ಲಿ ಸುದೀಪ್

03:16 PM Mar 14, 2018 | |

ಈ ಹಿಂದೆ “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಅಂಬರೀಷ್‌ ಅವರ ವಿಭಿನ್ನ ಗೆಟಪ್‌ಗಳನ್ನುಳ್ಳ ಸುದ್ದಿಯನ್ನು ಇದೇ ಬಾಲ್ಕನಿಯಲ್ಲಿ ಓದಿರುತ್ತೀರಿ. ಈಗ ಸುದೀಪ್ ಸರದಿ. ಹೌದು ಈಗ ಸುದೀಪ್ “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದು, ಚಿರ ಯೌವ್ವನದ ಯುವಕನಾಗಿ ಮತ್ತು ಆ್ಯಂಗ್ರಿ ಯಂಗ್‌ ಮ್ಯಾನ್‌ ಲುಕ್‌ನಲ್ಲಿ ಕಿಚ್ಚ ಈಗ ಕಬ್ಬಡಿ ಆಡೋದಕ್ಕೆ ಅಖಾಡಕ್ಕಿಳಿದಿದ್ದಾರೆ.

Advertisement

ಅದು ಯಂಗ್ ರೆಬೆಲ್ ಸ್ಟಾರ್ ಆಗಿ ಅನ್ನೋದು ವಿಶೇಷ. ಇನ್ನು ಈ ಚಿತ್ರವನ್ನು ಗುರುದತ್‌ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಸುದೀಪ್‌ ಅವರ ಜೊತೆ ಸಹಾಯಕ ನಿರ್ದೇಶಕರಾಗಿದ್ದ ಗುರುದತ್‌ ಅವರಿಗೆ ನಿರ್ದೇಶಕರಾಗಿ ಇದು ಚೊಚ್ಚಲ ಸಿನಿಮಾ. ಚಿತ್ರವನ್ನು ಜಾಕ್‌ ಮಂಜು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅಂಬರೀಷ್‌ ಅವರು ಗಡ್ಡ ಬಿಟ್ಟಿದ್ದಾರೆ.

“ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರ ತಮಿಳಿನ “ಪವರ್‌ ಪಾಂಡಿ’ ಚಿತ್ರದ ರೀಮೇಕ್‌ ಆಗಿದ್ದು, ಅಂಬರೀಷ್‌ ಅವರ ಯೌವ್ವನದ ದಿನಗಳಲ್ಲಿ ಸುದೀಪ್‌ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಶ್ರುತಿ ಹರಿಹರನ್‌ ಕೂಡಾ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ, ಜೆಬಿನ್‌ ಜಾಕೋಬ್‌ ಛಾಯಾಗ್ರಹಣ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next