Advertisement
ಹೃದಯ ಸ್ತಂಭನ ಎಂದರೆ ಏನು? ಹೃದಯ ಸ್ತಂಭನ ಅಥವಾ ಹಠಾತ್ ಕಾರ್ಡಿಯಾಕ್ ಅರೆಸ್ಟ್ (Sudden Cardiac Arrest) ಎಂದರೆ ಹೃದಯವು ಇದ್ದಕ್ಕಿದ್ದಂತೆ ನಿಲ್ಲುವುದು ಅಥವಾ ಹೃದಯದ ಕಾರ್ಯಚಟುವಟಿಕೆಯನ್ನು ಹಠಾತ್ತನೆ ಕಳೆದುಕೊಳ್ಳುವುದು. ಇದು ಇದ್ದಕ್ಕಿದ್ದಂತೆ ಅಥವಾ ಇತರ ರೋಗಲಕ್ಷಣಗಳ ಹಿನ್ನೆಲೆಯಲ್ಲಿ ಉಂಟಾಗಬಹುದು. ಸರಿಯಾದ ಕ್ರಮಗಳನ್ನು ತತ್ ಕ್ಷಣವೇ ತೆಗೆದುಕೊಳ್ಳದಿದ್ದರೆ ಹೃದಯ ಸ್ತಂಭನವು ಸಾಮಾನ್ಯವಾಗಿ ಮಾರಣಾಂತಿಕವಾಗಬಹುದು.
Related Articles
Advertisement
ಇದಕ್ಕೆ ವಿರುದ್ಧವಾಗಿ ಹೃದಯದ ವಿದ್ಯುತ್ ವ್ಯವಸ್ಥೆಯು ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿದಾಗ ಹೃದಯ ಸ್ತಂಭನ ಉಂಟಾಗುತ್ತದೆ. ಹೃದಯದ ಬಡಿತ ನಿಲ್ಲುತ್ತದೆ. ಹೃದಯದ ಪಂಪ್ ಮಾಡುವ ಕಾರ್ಯವು ಸ್ಥಗಿತಗೊಳ್ಳುತ್ತದೆ.
ಹೃದಯ ಸ್ತಂಭನವಾದಲ್ಲಿ ಸರಿಯಾದ ಕ್ರಮಗಳನ್ನು ತತ್‌ಕ್ಷಣವೇ ತೆಗೆದುಕೊಳ್ಳದಿದ್ದರೆ ಸಾವು ತ್ವರಿತವಾಗಿ ಉಂಟಾಗುತ್ತದೆ. ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್ (ಸಿಪಿಆರ್)ನಡೆಸಿದರೆ ಮತ್ತು ಡಿಫಿಬ್ರಿಲೇಟರ್ ಬಳಸಿ ಕೆಲವು ನಿಮಿಷಗಳಲ್ಲಿ ಸಾಮಾನ್ಯ ಹೃದಯದ ಲಯವನ್ನು ಮರುಸ್ಥಾಪಿಸಿದರೆ ಹೃದಯ ಸ್ತಂಭನವನ್ನು ತಡೆಯಬಹುದು.
ಹೃದಯ ಸ್ತಂಭನಕ್ಕೆ ಏನು ಕಾರಣಗಳು? ಹೃದಯ ಸ್ತಂಭನವು ಯಾವುದೇ ಹೃದಯ ಸಂಬಂಧಿ ಕಾಯಿಲೆ ಅಥವಾ ಆಘಾತ, ಪಾರ್ಶ್ವ ವಾಯು (ಸ್ಟ್ರೋಕ್), ಮುಳುಗುವಿಕೆ, ವಿಷ ಸೇವನೆಯಂತಹ ಹಲವಾರು ಕಾರಣಗಳಿಂದ ಸಂಭವಿಸಬಹುದು. ಅರ್ಹೆತ್ಮಿಯಾಸ್ (Arrythmias) ಎಂದು ಕರೆಯಲ್ಪಡುವ ಅನಿಯಮಿತ ಹೃದಯ ಬಡಿತದಿಂದ ಹೃದಯ ಸ್ತಂಭನ ಉಂಟಾಗಬಹುದು. ಹೃದಯ ಸ್ತಂಭನಕ್ಕೆ ಸಂಬಂಧಿಸಿದ ಸಾಮಾನ್ಯ ಅರ್ಹೆತ್ಮಿಯಾವೆಂದರೆ ಕುಹರದ ಕಂಪನ (Ventricular fi brillation).
-ಮುಂದಿನ ವಾರಕ್ಕೆ
-ಡಾ| ಸುಷ್ಮಾ ಪ್ರಭಾತ್, ಅಸಿಸ್ಟೆಂಟ್ ಪ್ರೊಫೆಸರ್
ಡಾ| ಆ್ಯನ್ ಡಿ’ಸೋಜಾ, ಅಸೋಸಿಯೇಟ್ ಪ್ರೊಫೆಸರ್, ಅಂಗರಚನಾಶಾಸ್ತ್ರ ವಿಭಾಗ
-ಡಾ| ಪೃಥ್ವಿಶ್ರೀ ರವೀಂದ್ರ, ಅಸೋಸಿಯೇಟ್ ಪ್ರೊಫೆಸರ್, ತುರ್ತು ವೈದ್ಯಕೀಯ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಡಿಪಾರ್ಟ್‌ಮೆಂಟ್ ಆಫ್ ಎಮರ್ಜೆನ್ಸಿ ಮೆಡಿಸಿನ್, ಕೆಎಂಸಿ, ಮಾಹೆ, ಮಣಿಪಾಲ