Advertisement

ಸುಡಾನ್‌ನಲ್ಲಿ 30 ವರ್ಷಗಳ ಇಸ್ಲಾಮಿಕ್‌ ಆಡಳಿತ ಅಂತ್ಯ

12:50 AM Sep 09, 2020 | mahesh |

ಖಾರ್ತೋಮ್‌: ಐತಿಹಾಸಿಕ ನಿರ್ಧಾ­ರವೊಂದರಲ್ಲಿ ಆಫ್ರಿಕಾ ಖಂಡದ ಉತ್ತರ ಭಾಗದ ದೇಶವಾಗಿರುವ ಸುಡಾನ್‌ನಲ್ಲಿ 30 ವರ್ಷಗಳ ಇಸ್ಲಾಮಿಕ್‌ ಆಡಳಿತಕ್ಕೆ ಅಂತ್ಯ ಹಾಡಲಾಗಿದೆ. ಧರ್ಮ ಮತ್ತು ಸರಕಾರದ ವ್ಯವಸ್ಥೆಯನ್ನು ಪ್ರತ್ಯೇಕಗೊಳಿ­ಸಲು ಸರಕಾರ ಒಪ್ಪಿಗೆ ನೀಡಿದ್ದು, ಮೂವತ್ತು ವರ್ಷಗಳಿಂದ ಇಸ್ಲಾಮಿಕ್‌ ತತ್ವಗಳ ಆಧಾರದಲ್ಲಿದ್ದ ಆಡಳಿತ ವ್ಯವಸ್ಥೆಗೆ ವಿದಾಯ ಹೇಳಲಾಗಿದೆ.

Advertisement

ಮುಂದಿನ ದಿನಗಳಲ್ಲಿ ದೇಶ ಪ್ರಜಾ­ಸತ್ತಾತ್ಮಕ ಮೌಲ್ಯಗಳ ಆಧಾರದ ಸರಕಾರಿ ವ್ಯವಸ್ಥೆ ಹೊಂದಲು ತೀರ್ಮಾನಿಸಿದೆ. ಇಥಿಯೋಪಿಯಾ ರಾಜಧಾನಿ ಅಡ್ಡಿಸ್‌ ಅಬಾಬದಲ್ಲಿ ಕಳೆದ ಗುರುವಾರ ಸುಡಾನ್‌ ಪ್ರಧಾನಿ ಅಬ್ದಲ್ಲಾ ಹಮ್‌ದೊಕ್‌ ಮತ್ತು ಸುಡಾನ್‌ ಪೀಪಲ್ಸ್‌ ಲಿಬರೇಷನ್‌ ಮೂವ್‌ಮೆಂಟ್‌ನ ನಾಯಕ ಅಬ್ಧೆಲ್‌ ಅಜೀಜ್‌ ಅಲ್‌- ಹಿಲು ಈ ಬಗೆಗಿನ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಹೊಸ ಒಪ್ಪಂದದಿಂದಲಾಗಿ ದೇಶದ ಎಲ್ಲ ಪ್ರಜೆಗಳಿಗೆ ಸಮಾನ ಹಕ್ಕುಗಳು ಲಭಿಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next