ಶಿರ್ವ: ಉಡುಪಿಯ ಅದಮಾರು ಮಠಾದೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಸೂಡ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಅಷ್ಟಬಂಧ ಬ್ರಹ್ಮಕುಂಭಾಭಿಷೇಕದ ಹಿನ್ನೆಲೆ ದೇಗುಲಕ್ಕೆ ಭೇಟಿ ಪೂಜೆ ಸಲ್ಲಿಸಿದರು.
ದೇವಸ್ಥಾನದ ವತಿಯಿಂದ ಅರ್ಚಕ ವಿಷ್ಣುಮೂರ್ತಿ ಭಟ್ ದಂಪತಿ ಪಾದಪೂಜೆ ನೆರವೇರಿಸಿದರು. ಅನುವಂಶಿಕ ಆಡಳಿತ ಮೊಕ್ತೇಸರ ಜಯಶೀಲ ಹೆಗ್ಡೆ ಪಾದ ಕಾಣಿಕೆ ಸಲ್ಲಿಸಿದರು.
ಶ್ರೀಗಳು ದೇವರ ಪೂಜೆ ನೆರವೇರಿಸಿ ಫಲ ಮಂತ್ರಾಕ್ಷತೆ ವಿತರಿಸಿದರು. ದೇವಸ್ಥಾನದ ತಂತ್ರಿ ಗಳಾದ ವೇ|ಮೂ|ಹಯವದನ ತಂತ್ರಿ, ಅರ್ಚಕ ವೇ|ಮೂ|ಸೂಡ ಶ್ರೀಶ ಭಟ್, ಅರ್ಚಕ ಶ್ರೀಧರ ಭಟ್ ಬೆಳ್ಮಣ್, ವೇ|ಮೂ|ನಾರಾಯಣ ಭಟ್ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿದರು.
ನಂದಳಿಕೆ ಚಾವಡಿ ಅರಮನೆಯ ಸುಹಾಸ್ ಹೆಗ್ಡೆ, ಶಿರ್ವ ಕೋಡು ಬಾಲಕೃಷ್ಣ ಹೆಗ್ಡೆ, ಬೋಳ ಪರಾರಿ ಪಟೇಲ್ ರಾಮದಾಸ್ ಶೆಟ್ಟಿ,, ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ನಡಿಬೆಟ್ಟು ನಿತ್ಯಾನಂದ ಹೆಗ್ಡೆ, ಪುಣೆಯ ಉದ್ಯಮಿ ಮಾಜಿ ಕಾರ್ಪೋರೇಟರ್ ಶಿರ್ವ ಕೋಡು ಜಗದೀಶ್ ಶೆಟ್ಟಿ, ನಂದಳಿಕೆ ಶ್ರೀ ಲಕ್ಷ್ಮೀಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ತುಕಾರಾಮ ಶೆಟ್ಟಿ, ಅಡ್ವೆ ಪರಾರಿ ಕೃಷ್ಣ ಶೆಟ್ಟಿ, ಬೆಳ್ಮಣ್‌ನ ಉದ್ಯಮಿ ಎಸ್.ಕೆ.ಸಾಲ್ಯಾನ್ ನಿವೃತ್ತ ಶಿಕ್ಷಕರಾದ ಶಿರ್ವ ನಡಿಬೆಟ್ಟು ಸೀತಾರಾಮ ಹೆಗ್ಡೆ, ಕೋಟೆ ಬೀಡು ರಘುರಾಮ ಶೆಟ್ಟಿ,ಉಪೇಂದ್ರ ಶೆಟ್ಟಿ ಬೆಂಗಳೂರು, ಸತ್ಯಶಂಕರ ಶೆಟ್ಟಿ ಸಚೇcರಿಪೇಟೆ, ಸಭಾ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ಶಿರ್ವ ಕೋಡು ದಿನೇಶ್ ಹೆಗ್ಡೆ, ಕಾರ್ಯದರ್ಶಿ ರಿತೇಶ್ ಶೆಟ್ಟಿ, ಕೋಶಾಧಿಕಾರಿ ಪ್ರಭಾಕರ ಶೆಟ್ಟಿ, ಶಿರ್ವ ಕೋಡು ಕುಟುಂಬಸ್ಥರು ಉಪಸ್ಥಿತರಿದ್ದರು.