Advertisement
ಈ ಕುರಿತು ಪ್ರಕಟಣೆ ನೀಡಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ, ಕೋವಿಡ್ 19 ಮಹಾಮಾರಿಯ ಸಂದರ್ಭ ಬಳಸಿಕೊಂಡು, ಪ್ರಜಾತಾಂತ್ರಿಕ ಚರ್ಚೆಗಳಿಗೆ ಅವಕಾಶ ನೀಡದೆ ಸಂಸತ್ತು, ವಿಧಾನಮಂಡಲಗಳಲ್ಲಿ ಚರ್ಚೆ ನಡೆಸದೆ ತರಾತುರಿಯಲ್ಲಿ ಈ ಕಾಯ್ದೆಗಳನ್ನು ಅಂಗೀಕರಿಸುತ್ತಿರುವುದು ಸರಿಯಲ್ಲ. ಈ ಕಾಯ್ದೆಗಳ ಜಾರಿಯಿಂದ ಕೃಷಿ ಉತ್ಪಾದನೆ ಮತ್ತು ಮಾರುಕಟ್ಟೆಯ ಕ್ಷೇತ್ರದಲ್ಲಿ ಕಾರ್ಪೊರೇಟ್ ಕುಳಗಳು ಲಗ್ಗೆ ಇಟ್ಟು ಸಣ್ಣ- ಮಧ್ಯಮ ರೈತರು ಸರ್ವನಾಶವಾಗಲಿದ್ದಾರೆ. ಸಾಮಾನ್ಯ ಗ್ರಾಹಕರು ಕೂಡ ಬೆಲೆ ಏರಿಕೆಯಿಂದ ಕಂಗಾಲಾಗಲಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ತಳ್ಳಲ್ಪಟ್ಟಿರುವ ರೈತರು ತಮ್ಮ ಕೃಷಿ ಭೂಮಿಯನ್ನು ಮಾರಿ ಬೀದಿಪಾಲಾಗಲಿದ್ದಾರೆ. ಇಂತಹ ವಿನಾಶಕಾರಿ ಕಾಯ್ದೆಗಳ ವಿರುದ್ಧ ದೇಶದಾದ್ಯಂತ 200ಕ್ಕೂ ಹೆಚ್ಚು ರೈತ ಸಂಘಟನೆಗಳು ಒಂದಾಗಿ ಹೋರಾಟ ಕಟ್ಟುತ್ತಿರುವುದು ಚೇತೋಹಾರಿ ಬೆಳವಣಿಗೆಯಾಗಿದೆ. ರೈತದ್ರೋಹಿ ಸರ್ಕಾರಗಳನ್ನು ಮಣಿಸಲು ದೇಶದ ಎಲ್ಲ ಜನವಿಭಾಗಗಳು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ. Advertisement
ರೈತ-ಕಾರ್ಮಿಕರ ಹೋರಾಟಕ್ಕೆ ಎಸ್‌ಯುಸಿಐ ಬೆಂಬಲ
07:27 PM Sep 25, 2020 | Suhan S |
Advertisement
Udayavani is now on Telegram. Click here to join our channel and stay updated with the latest news.