Advertisement

ಉಂಗುರ ನುಂಗಿದ ಮಗುವಿಗೆ ಯಶಸ್ವಿ ಚಿಕಿತ್ಸೆ

06:26 AM Jul 01, 2020 | Lakshmi GovindaRaj |

ಬೆಂಗಳೂರು: ಉಂಗುರ ನುಂಗಿದ ಪರಿಣಾಮ ಗಂಟಲಿನಲ್ಲಿ ಸಿಲುಕಿ ಉಸಿರಾಟದ ಸಮಸ್ಯೆಗೆ ತುತ್ತಾಗಿದ್ದ ವರ್ಷದ ಮಗುವನ್ನು ಎಂಡೋನ್ಪೋಪ್‌ ಮೂಲಕ ನಗರದ ಖಾಸಗಿ ಆಸ್ಪತ್ರೆಯ ವೈದ್ಯರು ರಕ್ಷಣೆ ಮಾಡಿದ್ದಾರೆ. ಮಗುವು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಉಂಗುರ ನುಂಗಿತ್ತು.

Advertisement

ಪೋಷಕರು ಮಗುವಿನ ಗಂಟಲಿನಲ್ಲಿ ಸಿಲುಕಿದ್ದ ಉಂಗುರವನ್ನು ಹೊರತೆಗೆಯಲು ಮಾಡಿದ ಪ್ರಯತ್ನಗಳೆಲ್ಲ ವಿಫಲಗೊಂಡವು. ಇದರಿಂದ ಆತಂಕಕ್ಕೊಳಗಾದ ಪೋಷಕರು  ಮಗುವನ್ನು ಕೂಡಲೇ ಬನ್ನೇರುಘಟ್ಟ ರಸ್ತೆಯಲ್ಲಿರುವ ರೈನ್‌ಬೋ ಮಕ್ಕಳ ಆಸ್ಪತ್ರೆಗೆ ಕರೆತಂದರು. ಕೂಡಲೇ ಆಸ್ಪತ್ರೆಯ ಅರವಳಿಕೆ ತಂಡ ಉಂಗುರ ಗಂಟಲಿನಿಂದ ಕೆಳಭಾಗಕ್ಕೆ ಇಳಿಯದಂತೆ ತಡೆದರು.

ಎಂಡೋಸ್ಕೋಪಿಕ್‌ ಮೂಲಕ  ವಿಶುವಲೈಸೇಷನ್‌ ಸಹಾಯದಿಂದ ಉಂಗುರವನ್ನು ಹೊರತೆಗೆಯಲು ಸಾಧ್ಯವಾಯಿತು. ಸದ್ಯ ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಕೆಲಗಂಟೆಗಳ ನಂತರ ಡಿಸಾcರ್ಜ್‌ ಮಾಡಲಾಗಿದೆ ಎಂದು ಶಿಶುತಜ್ಞರಾದ ಬಿ.ಜಿ.ಶಂಕರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next