Advertisement

ಶತಾಯುಷಿಗೆ ಯಶಸ್ವಿ ಪಾಶ್ವವಾಯು ಚಿಕಿತ್ಸೆ

12:28 PM Aug 02, 2018 | |

ಬೆಂಗಳೂರು: ಪಾರ್ಶ್ವವಾಯುಗೆ ತುತ್ತಾಗಿದ್ದ ಶತಾಯುಷಿಯೊಬ್ಬರಿಗೆ ವೈಟ್‌ಫೀಲ್ಡ್‌ನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಥ್ರೋಬೊಲೈಸಿಸ್‌ ವಿಧಾನದ ಮೂಲಕ ಯಶಸ್ವಿ ಚಿಕಿತ್ಸೆ ನಡೆಸಿದ್ದಾರೆ.

Advertisement

102 ವರ್ಷದ ತರಕಾಡ್‌ ಆರ್‌.ರಾಮಸ್ವಾಮಿಯವರು ಎರಡು ವರ್ಷದ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದರು. ಇದರಿಂದ ಅವರ ಎಡಗೈ, ಎಡಗಾಲು ಸೇರಿದಂತೆ ದೇಹದ ಎಡಭಾಗ ಸಂಪೂರ್ಣ ಸ್ವಾಧೀನ ಕಳೆದುಕೊಂಡಿತ್ತು.

ಇತ್ತೀಚೆಗೆ ಅವರನ್ನು ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯ ನರರೋಗ ತಜ್ಞ ಡಾ.ಎನ್‌.ದೀಪಕ್‌ ಅವರ ತಂಡವು ರಾಮಸ್ವಾಮಿಯವರ ಮಿದುಳಿನ ಭಾಗ ಸ್ಕ್ಯಾನ್‌ ಮಾಡಿದ್ದಾಗ ರಕ್ತ ಹೆಪ್ಪುಗಟ್ಟಿರುವುದು ಕಂಡು ಬಂದಿತ್ತು.

ಚುಚ್ಚುಮದ್ದು(ಇಂಜೆಕ್ಷನ್‌) ನೀಡಿ ಸರಿಪಡಿಸಬಹುದಾದ ಥ್ರೋಂಬೊಲೈಸಿಸ್‌ ವಿಧಾನದ ಮೂಲಕ ಪಾರ್ಶ್ವವಾಯುಗೆ ಚಿಕಿತ್ಸೆ ನೀಡಿದ್ದಾರೆ. ಈ ಸಂಬಂಧ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಎನ್‌. ದೀಪಕ್‌, ಹೃದಯಾಘಾತದಿಂದ ಹೆಚ್ಚು ಮಂದಿ ಸಾವನ್ನಪ್ಪುತ್ತಾರೆ.

ಇದಾದ ನಂತರದ ಸ್ಥಾನ ಪಾರ್ಶ್ವವಾಯು ಪಡೆದಿದೆ. ಪಾರ್ಶ್ವವಾಯುವಿನಿಂದ ವರ್ಷಕ್ಕೆ 67 ಲಕ್ಷಕ್ಕೂ ಅಧಿಕ ಜನರು ಸಾಯುತ್ತಿದ್ದಾರೆ ಇದರ ಬಗ್ಗೆ ಅರಿವು ಅಗತ್ಯ ಎಂದರು. ನಗರ ಪ್ರದೇಶದ ಯುವ ಜನರಲ್ಲಿ ಪಾರ್ಶ್ವವಾಯು ಹೆಚ್ಚಾಗಿದೆ. ಜೀವನ ಕ್ರಮದಲ್ಲಿ ಬದಲಾವಣೆಯಾಗಿರುವುದೇ ಇದಕ್ಕೆ ಮೂಲ ಕಾರಣ.

Advertisement

ಪಾರ್ಶ್ವವಾಯು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಬೇಕು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವುದು. ಇನ್ನೊಂದು ಮೆದುಳಿನಲ್ಲಿ ರಕ್ತ ಶ್ರಾವ ಉಂಟಾಗುವ ಎರಡು ವಿಧವಿದೆ. ರಕ್ತಹೆಪ್ಪುಗಟ್ಟಿರುವ ಸ್ಥಿತಿಯಲ್ಲಿದ್ದರೆ ಚುಚ್ಚುಮದ್ದು ಚಿಕಿತ್ಸೆ ನೀಡಬಹುದು. ರಕ್ತಶ್ರಾವವಾದರೆ ಚಿಕಿತ್ಸೆ ಕಷ್ಟವಾಗುತ್ತದೆ ಎಂದು ವಿವರಿಸಿದರು.

ಶತಯುಷಿ ರಾಮಸ್ವಾಮಿ ಮಾತನಾಡಿ, ಮುಂಬೈನಲ್ಲಿ ವಿವಿಧ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದೆ. 100 ವರ್ಷದ ವರೆಗೂ ಆರೋಗ್ಯಪೂರ್ಣನಾಗಿದ್ದೆ. 85ನೇ ವಯಸ್ಸಿನಲ್ಲಿ ರಕ್ತದೊತ್ತಡ ಕಾಣಿಸಿಕೊಂಡಿತ್ತು. ನಿತ್ಯ ವ್ಯಾಯಾಮದಿಂದ ಅದು ನಿಯಂತ್ರಣದಲ್ಲಿತ್ತು.

ಎರಡು ವರ್ಷದಿಂದ ಪಾರ್ಶ್ವವಾಯುಗೆ ತುತ್ತಾಗಿದ್ದೆ. ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಉತ್ತಮ ಚಿಕಿತ್ಸೆ ನೀಡಿ, ಮೊದಲಿನಂತೆ ಮಾಡಿದ್ದಾರೆ ಎಂದು ಖುಷಿಪಟ್ಟರು. ಆಸ್ಪತ್ರೆಯ ಹಿರಿಯ ಅಧಿಕಾರಿಗಳಾದ ಡಾ.ವಿಜಯ್‌ ಸಿಂಗ್‌, ಡಾ.ದತ್ತಾತ್ರೇಯ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next