Advertisement

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರಿಂದ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ

03:50 PM Jun 02, 2020 | keerthan |

ಹುಬ್ಬಳ್ಳಿ: ಕೋವಿಡ್-19 ಸೋಂಕು ಚಿಕಿತ್ಸಾ ಪ್ರಯೋಗವಾಗಿರುವ ಪ್ಲಾಸ್ಮಾ ಥೆರಪಿ ಚಿಕಿತ್ಸೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ಲಾಸ್ಮಾ ಥೆರಪಿ ಚಿಕಿತ್ಸೆಯಲ್ಲಿ ಕಿಮ್ಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ಸೋಂಕಿತ ಸಂಖ್ಯೆ 636 ವ್ಯಕ್ತಿಯಿಂದ ಪ್ಲಾಸ್ಮಾ ಪಡೆದು ಸೋಂಕಿತ ಸಂಖ್ಯೆ 2710 ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿದೆ. 64 ವರ್ಷದ ಸೋಂಕಿತನಿಗೆ ಎರಡು ಬಾರಿ ಪ್ಲಾಸ್ಮಾ ಥೆರಪಿ ನೀಡಲಾಗಿದೆ ಎಂದರು.

ಗಂಭಿರ ಸ್ಥಿತಿಯಲ್ಲಿದ್ದ ಸೋಂಕಿತನಿಗೆ 200 ಎಂಎಲ್ ನಂತೆ ವೈದ್ಯರು ಎರಡು ಬಾರಿ ಪ್ಲಾಸ್ಮಾ ಥೆರಪಿ ನೀಡಿದ್ದಾರೆ. ಮೇ 28 ಹಾಗೂ 29 ರಂದು ಈ ವ್ಯಕ್ತಿಗೆ ವೈದ್ಯರು ಪ್ಲಾಸ್ಮಾ ಚಿಕಿತ್ಸೆ ನೀಡಿದ್ದಾರೆ. ಪರಿಣಾಮವಾಗಿ ಕೋವಿಡ್-19 ಸೋಂಕಿತ ವ್ಯಕ್ತಿ ಗುಣಮುಖನಾಗಿದ್ದು, ಆತನ ಉಸಿರಾಟದ ತೊಂದರೆ ಸದ್ಯ ಸಂಪೂರ್ಣ ನಿಯಂತ್ರಕ್ಕೆ ಬಂದಿದೆ ಎಂದರು.

ಡಾ.ಈಶ್ವರ ಹಸಬಿ, ಡಾ. ಉದಯ ಬಾಂದೆ, ಡಾ.ರಾಮ ಕವಲಗುಡ್ಡ, ಡಾ. ಪುರುಷೋತ್ತಮರೆಡ್ಡಿ, ಡಾ.ಮಹೇಶಕುಮಾರ ತಂಡದಿಂದ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next