Advertisement

ಸಂಧಾನ ಸಭೆ ಯಶಸ್ವಿ : ಅನಿರ್ದಿಷ್ಟ ಧರಣಿ ಹಿಂದಕ್ಕೆ

06:13 PM Jan 21, 2021 | Team Udayavani |

ಯಾದಗಿರಿ: ಸ್ಲಂ ಘೋಷಣೆ, ಹಕ್ಕುಪತ್ರ ವಿತರಣೆ ಹಾಗೂ ನಿವೇಶನ ರಹಿತರಿಗೆ ವಸತಿ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ  ಧರಣಿ ಹಿಂಪಡೆಯಲಾಗಿದೆ. ನಗರದ ಜಿಲ್ಲಾಡಳಿತ ಭವನ ಎದುರು ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ವತಿಯಿಂದ ಹಮ್ಮಿಕೊಂಡ ಧರಣಿಗೆ ಜಿಲ್ಲಾಡಳಿತ ಸ್ಪಂದಿಸಿದೆ. ಜಿಲ್ಲಾಧಿಕಾರಿಗಳು ಮತ್ತು ನಗರಾಭಿವೃದ್ಧಿ ಯೋಜನಾ ನಿರ್ದೇಶಕರ ಕಚೇರಿ ಅಧಿಕಾರಿಗಳು ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಹಾಗೂ ಸ್ಥಳೀಯ ಮುಖಂಡರೊಂದಿಗೆ ಮಂಗಳವಾರ ಸಂಜೆ ಸಂಧಾನ ಸಭೆ ನಡೆಸಿದ್ದಾರೆ.

Advertisement

ಯಾದಗಿರಿ ಜಿಲ್ಲೆಯಲ್ಲಿ ಸರ್ಕಾರಿ ಜಾಗ ಲಭ್ಯವಿಲ್ಲದ ಕಾರಣ ಖಾಸಗಿ ಜಮೀನು ಸರ್ವೇ ನಂ. 29/3, 29/7, 29/8, 30/3, 30/6 ಮತ್ತು 31/3ರಲ್ಲಿ ಒಟ್ಟು 18 ಎಕರೆ 28 ಗುಂಟೆ ಜಮೀನು (ಯಾದಗಿರಿ ನಗರದಿಂದ 2.5 ಕಿ.ಮೀ. ಅಂತರದಲ್ಲಿ) ನಗರ ಸಭೆ ಆಯುಕ್ತರು ಮತ್ತು ತಹಶೀಲ್ದಾರ್‌ ನಿವೇಶನ ರಹಿತರಿಗೆ ಖಾಸಗಿ ಜಮೀನನ್ನು ಖರೀದಿಸಲು ಪ್ರಸ್ತಾವನೆಯನ್ನು ಅರ್ಹ ಫಲಾನುಭವಿಗಳ ವರದಿಯನ್ನು ಗುರುತಿಸಿ ನಿವೇಶನ ಮಂಜೂರು ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಸ್ಲಂ ಘೋಷಣೆ ಹಾಗೂ ಹಕ್ಕು ಪತ್ರಕ್ಕೆ ಸಂಬಂಧಪಟ್ಟಂತೆ ಜ.29ರಂದು ಜಿಲ್ಲಾ ನಗರಾಭಿವೃದ್ಧಿ ಕೋಶ ಕಚೇರಿಯಲ್ಲಿ ಯಾದಗಿರಿ ನಗರದ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳು ಕುರಿತು ಚರ್ಚಿಸಲು ಸಭೆ ಕರೆಯುವುದಾಗಿ ಲಿಖಿತ ರೂಪದಲ್ಲಿ ಯೋಜನಾ ನಿರ್ದೇಶಕರು ಭರವಸೆ ನೀಡಿದ್ದರಿಂದ ಧರಣಿ ಹಿಂಪಡೆಯಲಾಗಿದೆ. ಈ ವೇಳೆ ಅಧ್ಯಕ್ಷ ಹಣಮಂತ ಶಹಾಪುರಕರ್‌, ಸಂಘಟನಾ ಸಂಚಾಲಕಿ ರೇಣುಕಾ ಸರಡಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next