Advertisement
ಲಸಿಕೆ ಗುರಿ ತಲುಪಲು ಜಿಲ್ಲಾಡಳಿತ ನಾನಾ ಪ್ರಯಾಸ ಪಟ್ಟಿದ್ದನ್ನು ನೋಡಿದ್ದೇವೆ. ಗ್ರಾಮೀಣ ಭಾಗದಲ್ಲಿ ಲಸಿಕೆ ಪಡೆಯಲು ಜನ ಅಸಹಕಾರ ತೋರಿದ್ದರಿಂದ ಜಿಲ್ಲಾಡಳಿತಕ್ಕೆ ತಲೆ ನೋವಾಗಿತ್ತು. ಇ ದಕ್ಕಾಗಿ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಲಸಿಕೆ ಪಡೆಯುವಂತೆ ಮನವೊಲಿಸುವ ಪರಿಸ್ಥಿತಿ ಬಂದರೆ, ಹೊಲಗಳಿಗೆ ತೆರಳಿ ಅಲ್ಲಿಯೇ ಲಸಿಕೆ ನೀಡಿದ ಘಟನೆಗಳು ನಡೆದವು.
Related Articles
ಅಕ್ಕಪಕ್ಕದ ಜಿಲ್ಲೆಗಳಲ್ಲಿ 3ನೇ ಅಲೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಿದ್ದರೆ, ಜಿಲ್ಲೆಯಲ್ಲಿ ಮಾತ್ರ ಯಾವುದೇ ಮುನೆಚ್ಚರಿಕೆ ವಹಿಸಿರಲಿಲ್ಲ. ಆರೋಗ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅನಿಲ್ ಕುಮಾರ್ ಅಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿದ್ದು, ಕೂಡಲೇ ಕಟ್ಟೆಚ್ಚರ ವಹಿಸಲು ನಿರ್ದೇಶನ ನೀಡಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಗಡಿ ಭಾಗದ ಏಳು ಚೆಕ್ ಪೋಸ್ಟ್‌ಗಳನ್ನು ಮತ್ತೆ ಕಾರ್ಯೋನ್ಮುಖಗೊಳಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಅಲ್ಲದೇ, ಎರಡು ಡೋಸ್ ಲಸಿಕೆ ಪಡೆದಿದ್ದು, ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಟ್ಟವರಿಗೆ ಮಾತ್ರ ಪ್ರವೇಶ ನೀಡಲು ಸೂಚಿಸಿದ್ದು, ರೋಗ ಲಕ್ಷಣಗಳಿದ್ದಲ್ಲಿ ತಪಾಸಣೆ ಮಾಡುವಂತೆ ತಿಳಿಸಲಾಗಿದೆ. ಇನ್ನೂ ವಿವಿಧ ವಸತಿ ನಿಲಯಗಳಲ್ಲಿ ವಾಸಿಸುವ, ಕಾಲೇಜುಗಳಲ್ಲಿ ಓದುತ್ತಿರುವ ಕೇರಳ, ಮಹಾರಾಷ್ಟ್ರದ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
Advertisement
ಕೋವಿಡ್ 19 ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳದವರಿಗೆ ನಾವೆ ಕರೆ ಮಾಡಿ ತಿಳಿಸುತ್ತಿದ್ದೇವೆ. ಆದರೆ, ಕೆಲವರಿಗೆ ಸಕ್ಸಸ್‌ಫುಲ್ ಸಂದೇಶಗಳು ಹೋಗುತ್ತಿರುವ ದೂರುಗಳು ಬಂದಿವೆ. ಇಂಟರ್‌ನೆಟ್ ಪೋರ್ಟಲ್ ಸಮಸ್ಯೆಯಿಂದ ಈ ರೀತಿ ಸಂದೇಶಗಳು ಹೋಗುತ್ತಿವೆ. ಸಂದೇಶ ಬಂದವರು ಆತಂಕ ಪಡೆದೆ ಸಮೀಪದ ಆರೋಗ್ಯ ಕೇಂದ್ರಗಳಿಗೆ ಹೋಗಿ 2ನೇ ಡೋಸ್ ಲಸಿಕೆ ಪಡೆಯಬಹುದು. ಇನ್ನೂ 84 ದಿನಗಳಾಗಿದ್ದರೆ ಕೂಡಲೇ ಲಸಿಕೆ ಪಡೆಯಬೇಕು.∙ಡಾ| ರಾಮಕೃಷ್ಣ,
ಜಿಲ್ಲಾ ಆರೋಗ್ಯಾಧಿಕಾರಿ *ಸಿದ್ಧಯ್ಯಸ್ವಾಮಿ ಕುಕನೂರು