Advertisement

“ಶಿವಾಜಿ ಯಶೋಗಾಥೆ ಸೀಡಿ ಅಗತ್ಯವಿದೆ’

11:42 AM Jan 23, 2017 | |

ಬೆಂಗಳೂರು: ಛತ್ರಪತಿ ಶಿವಾಜಿಯ ಆದರ್ಶಗಳು ಇಂದಿನ ಯುವಪೀಳಿಗೆಗೆ ಮಾದರಿಯಾಗಿದ್ದು, ಅವರ ಹೋರಾಟದ ಹಾದಿ, ಧೈರ್ಯ, ಸಾಹಸ ಇತ್ಯಾದಿ ಮಾಹಿತಿಯುಳ್ಳ ಸೀಡಿ ಮತ್ತು ಡಿವಿಡಿಯನ್ನು ಕನ್ನಡದಲ್ಲಿ ಸಿದ್ಧಪಡಿಸಿ ಜನರಿಗೆ ವಿತರಿಸಬೇಕಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯಾ ಹೇಳಿದರು. 

Advertisement

“ವಿಜಯ್‌ ಭವಾನಿ ಕ್ಷೇಮಾಭಿವೃದ್ಧಿ ಸಂಘ’ ಮರಾಠ ಭವನದಲ್ಲಿ ಭಾನುವಾರ ಆಯೋಜಿಸಿದ್ದ “ಛತ್ರಪತಿ ಶಿವಾಜಿ ಮಹಾರಾಜ್‌ ಅವರ 389ನೇ ಜಯಂತಿ ಹಾಗೂ ಸಂಘದ 30ನೇ ವರ್ಷಾಚರಣೆ’ಯಲ್ಲಿ ಮಾತನಾಡಿದ ಅವರು, “ಶಿವಾಜಿ ಯಶೋಗಾಥೆ ಸಮಾಜದ ಏಳ್ಗೆಗೆ ಪೂರಕ. ಹೀಗಾಗಿ ಇಂದಿನ ಯುವಪೀಳಿಗೆ ಅವರ ಧೈರ್ಯ, ಸಾಹಸ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಈ ಮೂಲಕ ಸಮಾಜದ ಸುಧಾರಣೆಗೆ ಮುಂದಾಗಬೇಕು’ ಎಂದು ಕರೆ ನೀಡಿದರು.

“ಶಿವಾಜಿ ಹೋರಾಟಗಳನ್ನು ಎಂದಿಗೂ ತನಗಾಗಿ ಮಾಡಲಿಲ್ಲ. ರಾಜ್ಯದ ಹಿತಕ್ಕಾಗಿ ಶ್ರಮಿಸಿದರು. ರಾಜ್ಯವು ಸುಭಿಕ್ಷೆಯಿಂದರಲು ತನ್ನದೇ ಆದ ನೀತಿಯನ್ನು ರೂಢಿಸಿಕೊಂಡಿದ್ದರು. ಅದೇರೀತಿ ಜನತೆಯೂ ತಮಗಾಗಿ ಮಾತ್ರ ಎಂಬ ಕಲ್ಪನೆ ಬಿಟ್ಟು ಜನ ಸೇವೆಗೆ ಮುಂದಾಗಬೇಕು’ ಎಂದರು. “ಶಿವಾಜಿಯ ಜೀವನದ ಬಗ್ಗೆ ವಿವರಗಳನ್ನೊಳಗೊಂಡ ಸೀಡಿ ಮತ್ತು ಡಿವಿಡಿಗಳನ್ನು ಕನ್ನಡದಲ್ಲಿ ತಯಾರಿಸಿ ವಿತರಿಸುವ ಮೂಲಕ ಮತ್ತಷ್ಟು ಅರಿವು ಮೂಡಿಸಬೇಕಿದೆ. ಈ ಮೂಲಕ ಶಿವಾಜಿಗೆ ಗೌರವ ನೀಡಬೇಕು’ ಎಂದು ಹೇಳಿದರು.
 
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಸಂಪತ್‌ಕುಮಾರ್‌, ಗಣೇಶ್‌ ರಾವ್‌ ಮಾನೆ, ಕೆಎಸ್‌ಆರ್‌ಟಿಸಿ ನಿವೃತ್ತ ಅಧಿಕಾರಿ ನಾಗರಾಜ ರಾವ್‌ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು. ಕೆಕೆಎಪಿ ಕ್ರೆಡಿಕ್‌ ಕೋಅಪರೆಟಿವ್‌ ಸೊಸೈಟಿಯ  ಮಾಜಿ ಅಧ್ಯಕ್ಷ ಸಿ.ಎಚ್‌.ಸುಬ್ಬೊàಜಿ ರಾವ್‌ ಕರ್ಮೋರೆ , ಸಂಘದ ಮುಖಂಡರಾದ ವಿಠuಲ್‌ ರಾವ್‌, ಆರ್‌.ನಾಮದೇವ್‌ ರಾವ್‌ ನಿಕ್ಕಾಮ್‌ ಇತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next