Advertisement

ಸಾಧನೆಯ ಹಾದಿಯಲ್ಲಿ ಯಶಸ್ಸು ನಮ್ಮದೇ…

03:33 PM Apr 30, 2018 | |

ಬದುಕಿನಲ್ಲಿ ನಡೆಯುವ ಘಟನೆ, ಯಾರದೋ ಆಗಮನ ನಮ್ಮ ಬದುಕಿನ ಪಥವನ್ನೇ ಬದಲಿಸಿಬಿಡುತ್ತದೆ. ಅದು ಸಾಧನೆಯ ಶಿಖರವನ್ನೇರುವ ಪ್ರೇರಣೆಯಾಗಬಹುದು ಅಥವಾ ಬದುಕಿನ ಅಂತ್ಯಕ್ಕೆ ನಾಂದಿಯೂ ಆಗಬಹುದು. ಸಾಧನೆಯ ಹಾದಿ ಸುಲಭವಾಗಿರುವುದಿಲ್ಲ. ಅಲ್ಲಿ ಸಾಲು ಸಾಲು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸೋತಾಗ ಮತ್ತೆ ಮುನ್ನುಗ್ಗುವ ಛಲವಿರಬೇಕಾಗುತ್ತದೆ.

Advertisement

ಉನ್ನತ ಶಿಕ್ಷಣ ಕನಸು ಕಾಣುತ್ತಿದ್ದೆ. ಆದರೆ ಹೇಗೆ, ಏನು ಎಂಬುದರ ಅರಿವಿರಲಿಲ್ಲ. ಉಪನ್ಯಾಸಕರಿಬ್ಬರು ಬೇರೆ ಬೇರೆ ದಾರಿಯನ್ನು ತೋರಿದರು. ಅಲ್ಲೂ ಗೊಂದಲ ಸೃಷ್ಟಿಯಾಯಿತು. ಗೆಳತಿಯ ಒತ್ತಾಯಕ್ಕೆ ಮಣಿದು ಉಪನ್ಯಾಸಕ ಹುದ್ದೆಯ ಸಂದರ್ಶನಕ್ಕೆ ಹೋದೆ. ವಿವಿಧ ಪರೀಕ್ಷೆ ಎದುರಿಸಿ ಆಯ್ಕೆಯೂ ಆದೆ. ಆದರೆ ಮನಸ್ಸಿಗೇಕೋ ಒಪ್ಪಲಿಲ್ಲ. ನನ್ನ ದಾರಿ, ಕನಸು ಇದಲ್ಲ ಎಂದು ಪಿಸುಗುಟ್ಟಿತು. ಸಿಕ್ಕಿದ ಕೆಲಸವನ್ನು ತಿರಸ್ಕರಿಸಿ ಮರಳಿ ಬಂದಾಗ ಮನೆಯವರೆಲ್ಲ ನಮ್ಮ ತೀರ್ಮಾನಕ್ಕೆ ಸಹ ಮತ ಕೊಡಲಿಲ್ಲ. ಆದರೆ ಮುಂದೆ ಹೆಚ್ಚು ಓದುವ, ಕಂಪೆನಿಯೊಂದರಲ್ಲಿ ಪ್ರಮುಖ ಹುದ್ದೆಯನ್ನು ಅಲಂಕರಿಸುವ ಅವಕಾಶ ಸಿಕ್ಕಿತು.

ಎಷ್ಟೋ ಬಾರಿ ಯಾರದೋ ಒತ್ತಾಯಕ್ಕೆ ಮಣಿದು ನಾವು ಕೈಗೊಳ್ಳುವ ತೀರ್ಮಾನಗಳು ಆ ಕ್ಷಣದಲ್ಲಿ ನಮಗೆ ಜಯ ದೊರಕಿಸಿಕೊಡಬಹುದು. ಆದರೆ ಅದು ಶಾಶ್ವತ ಸಂತೋಷ ನಮಗೆ ಕೊಡಲಾರದು.

ಕ್ಷಣಿಕ ಸುಖಕ್ಕಾಗಿ ನಮಗಿರುವ ಇನ್ನೊಂದು ಅವಕಾಶವನ್ನು ಬಿಟ್ಟು ಬಿಡುತ್ತೇವೆ. ಮುಂದೆ ಸಿಕ್ಕಿದ ಅವಕಾಶ ಕೈಚೆಲ್ಲಿದೆವು ಎಂದು ಮರುಗುತ್ತೇವೆ. ಇದರ ಬದಲು ಅವಕಾಶವನ್ನು ಬಾಚಿ ಕೊಂಡರೆ, ನಿರಂತರ ಶ್ರಮ ಪಟ್ಟು ಸಾಧನೆಯ ಹಾದಿಯಲ್ಲಿ
ಮುಂದುವರಿದರೆ ಒಂದಲ್ಲ ಒಂದು ದಿನ ಯಶಸ್ಸು ನಮ್ಮನ್ನೆ ಹುಡುಕಿಕೊಂಡು ಬರುವುದು ಮಾತ್ರ ಸುಳ್ಳಲ್ಲ. ಸೋತಾಗ ಎದೆಗುಂದದೆ ಮುನ್ನಡೆಯುವ ಛಲ ನಮ್ಮದಾಗಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ಸಿನ ಶಿಖರವೇರಲು ಸಾಧ್ಯವಿದೆ. ಆಗ ಅಂದುಕೊಳ್ಳುತ್ತೇವೆ, ‘ಆವತ್ತು ನಾನು ಕೈಗೊಂಡ ನಿರ್ಧಾರ ಸರಿಯಾಗಿತ್ತು.’

Advertisement

Udayavani is now on Telegram. Click here to join our channel and stay updated with the latest news.

Next