Advertisement

ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಗೆ ಯಶಸ್ಸು: ನಿಗಾ ಇರಲಿ

06:00 AM May 09, 2018 | Team Udayavani |

ಉಗ್ರರನ್ನು ಸದೆಬಡೆಯುವ ಜೊತೆಯಲ್ಲೇ, ಯುವಕರನ್ನು ಸರಿದಾರಿಗೆ ತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇರಬೇಕು. ಆ ರಾಜ್ಯದ ಶಿಕ್ಷಣ ಸಂಸ್ಥೆಗಳು ಉಗ್ರಗಾಮಿಗಳ ಹೊಸ ಉಗಮಸ್ಥಾನಗಳಾಗದಂತೆ ಎಚ್ಚರ ವಹಿಸುವ ಅಗತ್ಯವಿದೆ.

Advertisement

ಕಳೆದ ಕೆಲವು ತಿಂಗಳಿಂದ ನಮ್ಮ ಭದ್ರತಾ ಪಡೆಗಳು ಕಾಶ್ಮೀರ ಕಣಿವೆಯಲ್ಲಿ ಉಗ್ರವಾದಿಗಳನ್ನು ಹುಡುಕಾಡಿ ಹೊಸಕಿ ಹಾಕುವ ಕಾರ್ಯದಲ್ಲಿ ನಿರತ ವಾಗಿವೆ. ಸೇನೆಯ ಕಾರ್ಯಾಚರಣೆಯಲ್ಲಿ ಅನೇಕ ಉಗ್ರರು ಹತರಾಗಿದ್ದಾರೆ. ಕಳೆದ ಮೂರು ದಿನದಲ್ಲಿ ಭಾರತೀಯ ಸೇನೆ ಶೋಪಿಯಾನ್‌ನಲ್ಲಿ ಹಿಬ್ಜುಲ್‌ ಮುಜಾಹಿದ್ದೀನ್‌ನ ಐವರು ಮತ್ತು ಛತ್ತಬಾಲ್‌ನಲ್ಲಿ ಲಷ್ಕರ್‌ ಎ ತೈಯಬಾದ ಮೂವರು ಆತಂಕವಾದಿಗಳನ್ನು ಹೊಡೆದುರುಳಿಸಿದೆ. ಶೋಪಿ ಯಾನ್‌ ಕಾರ್ಯಾಚರಣೆಯಲ್ಲಿ ಹಿಜ್ಬುಲ್‌ನ ಸ್ಥಾನೀಯ ಕಮಾಂಡರ್‌ ಸದ್ದಾಮ್‌ ಪೈದರ್‌ ಕೂಡ ಸತ್ತಿದ್ದಾನೆ. ಈ ವ್ಯಕ್ತಿ ಬುರ್ಹನ್‌ ವಾನಿಯ ಆಪ್ತವಲಯದಲ್ಲಿ ಒಬ್ಬನಾಗಿದ್ದ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿಯೇ ಸೇನೆಯ ಈ ಕಾರ್ಯಾಚರಣೆ ಕಾಶ್ಮೀರ ಕಣಿವೆಯ ಕ್ರೂರ ಸಂಘಟನೆಗಳ ಬೆನ್ನೆಲುಬಿಗೆ ಮತ್ತೂಮ್ಮೆ ಬಲವಾದ ಪ್ರಹಾರ ಮಾಡಿದೆ ಎನ್ನಬಹುದು. ಇದನ್ನು ನಿಸ್ಸಂದೇಹವಾಗಿ ಸುರಕ್ಷಾ ದಳಗಳ ದೊಡ್ಡ ಗೆಲುವು ಎಂದೂ ಕರೆಯಬಹುದು. ಆದರೆ ಕಾಶ್ಮೀರ ಕಣಿವೆಯಲ್ಲಿ ಯಾವೆಲ್ಲ ಆಯಾಮದಲ್ಲಿ ನಮ್ಮ ಸೈನಿಕರು ಆತಂಕವಾದಿಗಳನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ನೋಡಿದಾಗ, ಉಗ್ರ ಸಂಘಟನೆಗಳಿಗೆ ಸಿಗುತ್ತಿರುವ ಆರ್ಥಿಕ ಮತ್ತು ಇತರೆ ಸಂಪನ್ಮೂಲಗಳ ಪೂರೈಕೆಯನ್ನು ತಡೆಯುವಲ್ಲಿ ನಿರೀಕ್ಷಿಸಿದಷ್ಟು ಯಸಶು ನಮಗಿನ್ನೂ ಸಿಕ್ಕಿಲ್ಲ ಎನ್ನುವುದು ಅರ್ಥವಾಗುತ್ತದೆ. ಬುರ್ಹಾನ್‌ ವಾನಿಯ ಹತ್ಯೆಯ ನಂತರ ವಂತೂ ಕಾಶ್ಮೀರ ಕುದಿಯ ಲಾರಂಭಿಸಿತ್ತು. ತಿಂಗಳುಗಟ್ಟಲೇ ನಮ್ಮ ಸೇನೆ ಕಲ್ಲು ತೂರಾಟ ಗಾರರನ್ನು ಎದುರಿಸಬೇಕಾ ಯಿತು. ಆ ಹೊತ್ತಲ್ಲೇ ಅನೇಕ ಧರ್ಮಾಂಧ ಯುವಕರು ಹಿಬುjಲ್‌ ಸಂಘಟ ನೆ ಯನ್ನು ಹೆಚ್ಚಿನ ಸಂಖ್ಯೆಯಲ್ಲಿ  ಸೇರಿದ್ದರು ಎನ್ನಲಾಗು ತ್ತದೆ. ಇದನ್ನೆಲ್ಲ ತಡೆ ಯುವುದ ಕ್ಕಾಗಿಯೇ ಪ್ರತ್ಯೇಕ ತಾವಾದಿ ಸಂಘಟನೆಗಳಿಗೆ ಸೀಮೆಯಾಚೆ ಗಿರುವ ಸಂಬಂಧ ಮತ್ತು ಅವುಗಳ ಹಣದ ವಹಿವಾಟಿನ ಮೇಲೆ ಗಮನ ವಿಡಲಾಗಿತ್ತು. ಉಗ್ರ ಸಂಘಟನೆಗಳ ಬಲ ಕುಸಿಯಬೇಕೆಂದರೆ ಅವುಗಳಿಗೆ ಸಿಗುತ್ತಿರುವ ಆರ್ಥಿಕ ಬೆಂಬಲಕ್ಕೆ ಕೊಡಲಿಯೇಟು ಕೊಡಬೇಕು, ಆದರೆ ಇದೊಂದರಿಂದಲೇ ಸಮಸ್ಯೆ ಬಗೆಹರಿಯುತ್ತದೆ ಎನ್ನುವಂತಿಲ್ಲ. 

ಶೋಪಿಯಾನ್‌ ಕಾರ್ಯಾಚರಣೆಯಲ್ಲಿ ಮೃತಪಟ್ಟ ಉಗ್ರರಲ್ಲಿ ಕಾಶ್ಮೀರ ವಿಶ್ವವಿದ್ಯಾಲಯದ ಒಬ್ಬ ಸಹಾಯಕ ಪ್ರೊಫೆಸರ್‌ ಕೂಡ ಇದ್ದ. ಉಗ್ರನಾದ 36 ಗಂಟೆಗಳಲ್ಲೇ ಈ ವ್ಯಕ್ತಿಯ ಹತ್ಯೆಯಾಗಿದೆ. ಉಗ್ರ ಸಂಘಟನೆಗಳು ತಮ್ಮ ಶಕ್ತಿ ಹೆಚ್ಚಿಸಿಕೊಳ್ಳಲು ಯಾವೆಲ್ಲ ಸಂಸ್ಥಾನಗಳಲ್ಲಿ ತಮ್ಮ ವ್ಯಕ್ತಿಗಳನ್ನು ಸೇರಿಸುತ್ತಿವೆ ಅಥವಾ ಸೃಷ್ಟಿಸುತ್ತಿವೆ ಎನ್ನುವುದಕ್ಕೆ ಇದು ನಿದರ್ಶನ. ಇಂಥ ಮತಾಂಧ ಪ್ರೊಫೆಸರ್‌ಗಳು ತಮ್ಮ ಎಷ್ಟು ವಿದ್ಯಾರ್ಥಿಗಳ ಬ್ರೇನ್‌ವಾಶ್‌ ಮಾಡಿರುತ್ತಾರೋ? ಅವಿದ್ಯಾವಂತ ಉಗ್ರನಿಗಿಂತ ವಿದ್ಯಾವಂತ ಉಗ್ರ ಬಹಳ ಅಪಾಯಕಾರಿ ಎನ್ನುವ ಮಾತು ಸುಳ್ಳೇನೂ ಅಲ್ಲ. ಇದು ಸಾಲದೆಂಬಂತೆ ನಿರುದ್ಯೋಗದ ಸಮಸ್ಯೆಯೂ ಕಣಿವೆಯಲ್ಲಿ ಕಾಡುತ್ತಿದೆ. ಪ್ರವಾಸೋದ್ಯಮದ ಮೇಲೆಯೇ ಕಾಶ್ಮೀರ ಹೆಚ್ಚು ಅವಲಂಬಿತವಾಗಿದೆ. ಆದರೆ ಉಗ್ರರ ಉಪಟಳ, ಕಲ್ಲು ತೂರಾಟಗಾರರ ಗದ್ದಲದಿಂದಾಗಿ ಪ್ರವಾಸೋದ್ಯಮಕ್ಕೂ ಪೆಟ್ಟು ಬೀಳುತ್ತಿದೆ. ಈ ಎಲ್ಲಾ ಸಂಗತಿಗಳೂ ಕೆಲಸವಿಲ್ಲದ ಯುವಕರ ಸಂಖ್ಯೆಯನ್ನು ಹೆಚ್ಚಿಸುತ್ತಿವೆ. 

ಅಂದರೆ ಇವರೆಲ್ಲ ತಮ್ಮ ಕಾಲ ಮೇಲೆ ತಾವೇ ಕಲ್ಲು ತೂರಿಕೊಳ್ಳುತ್ತಿದ್ದಾರೆ ಎಂದಾಯಿತು! ಉಗ್ರ ಸಂಘಟನೆಗಳು ಇಂಥ ಯುವಕರನ್ನೇ ಟಾರ್ಗೆಟ್‌ ಮಾಡಿ ಅವರಲ್ಲಿ ಆಕ್ರೋಶ ತುಂಬುತ್ತಿವೆ. ಗಡಿ ಭದ್ರತಾ ಪಡೆಗಳನ್ನು ಬಲಿಷ್ಠಗೊಳಿಸುವ ಮೂಲಕ ಗಡಿ ಆಚೆ ಯಿಂದ, ಅಂದರೆ, ಪಾಕಿಸ್ತಾನದಿಂದ ಉಗ್ರರಿಗೆ- ಪ್ರತ್ಯೇಕತಾವಾದಿಗಳಿಗೆ ಸಿಗುತ್ತಿರುವ ಸಹಾಯವನ್ನು  ಸಂಪೂರ್ಣವಾಗಿ ನಿಲ್ಲಿಸಬೇಕಿದೆ. ಆದರೆ ಇದೇ ವೇಳೆಯಲ್ಲೇ ಕಾಶ್ಮೀರದಲ್ಲಿ ಮಡುಗಟ್ಟಿರುವ ಆಕ್ರೋಶವನ್ನು ಶಾಂತಗೊಳಿಸಲು, ಯುವಕರನ್ನು ಅಡ್ಡದಾರಿ ಹಿಡಿಯದಂತೆ ಮಾಡಲು ಸಂಪೂರ್ಣವಾಗಿ ಭಿನ್ನ ಮಾರ್ಗದ ಅಗತ್ಯವೂ ಇದೆ. ಆಶಾದಾಯಕ ಸಂಗತಿಯೆಂದರೆ ಕಾಶ್ಮೀರಿಗಳೊಂದಿಗೆ ಮಾತುಕತೆಯಲ್ಲಿ ತೊಡಗುವ, ಅವರನ್ನು ಮುಖ್ಯವಾಹಿನಿಯಲ್ಲಿ ತರುವ ಕೆಲಸ ಮೋದಿ ಸರ್ಕಾರದಡಿಯಲ್ಲಿ ತುಸು ವೇಗಪಡೆದಿದೆ. ಈ ಮಾತುಕತೆ ಯಾವುದೇ ಕಾರಣಕ್ಕೂ ನಿಲ್ಲದಂತೆ ನೋಡಿಕೊಳ್ಳಬೇಕು. ಉಗ್ರರನ್ನು ಸದೆಬಡೆಯುವ ಜೊತೆಯಲ್ಲೇ, ಯುವಕರನ್ನು ಸರಿದಾರಿಗೆ ತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇರಬೇಕು. ಆ ರಾಜ್ಯದ ಶಿಕ್ಷಣ ಸಂಸ್ಥೆಗಳು ಉಗ್ರರ ಹೊಸ ಉಗಮಸ್ಥಾನಗಳಾಗದಂತೆ ಎಚ್ಚರ ವಹಿಸುವ ಅಗತ್ಯವೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next