Advertisement

ಆಲ್‌ರೌಂಡರ್‌ಗಳಿಂದ ಯಶಸ್ಸು: ರೂಟ್‌

03:26 PM Aug 09, 2017 | Team Udayavani |

ಮ್ಯಾಂಚೆಸ್ಟರ್‌: ಜೋ ರೂಟ್‌ ಇಂಗ್ಲೆಂಡಿನ ಟೆಸ್ಟ್‌ ನಾಯಕನಾಗಿ ಸ್ಮರ ಣೀಯ ಆರಂಭ ಕಂಡುಕೊಂಡಿದ್ದಾರೆ. ಬಲಿಷ್ಠ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 3-1ರಿಂದ ಸರಣಿ ಗೆದ್ದ ಹೆಗ್ಗಳಿಕೆ ರೂಟ್‌ ಅವರದಾಗಿದೆ. ಈ ಗೆಲುವಿನ ಬಹುಪಾಲು ಯಶಸ್ಸು ಆಲ್‌ರೌಂಡರ್‌ಗಳಿಗೆ ಸಲ್ಲುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

“ತಂಡದಲ್ಲಿ ಇಬ್ಬರು ಶ್ರೇಷ್ಠ ಆಲ್‌ರೌಂಡ ರ್‌ಗಳಿದ್ದರೆ ಅದು ನಿಜಕ್ಕೂ ಬೋನಸ್‌. ಮೊಯಿನ್‌ ಆಲಿ ಮತ್ತು ಬೆನ್‌ ಸ್ಟೋಕ್ಸ್‌ ಈ ಸರಣಿಯಲ್ಲಿ ನಮ್ಮ ತಂಡದ ಹೀರೋಗಳಾಗಿ ಮೂಡಿಬಂದರು. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಮೇಲುಗೈ ಸಾಧ್ಯವಾಯಿತು’ ಎಂದು ರೂಟ್‌ ಹೇಳಿದರು. 

ಮ್ಯಾಂಚೆಸ್ಟರ್‌ನ 4ನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯವನ್ನು 177 ರನ್ನುಗಳ ಭಾರೀ ಅಂತರದಿಂದ ಗೆದ್ದ ಬಳಿಕ ರೂಟ್‌ ಮಾಧ್ಯಮದವರೊಂದಿಗೆ ಮಾತಾಡು ತ್ತಿದ್ದರು. ಈ ಸರಣಿ ಪರಾಕ್ರಮದಿಂದ ಇಂಗ್ಲೆಂಡ್‌ ಐಸಿಸಿ ಟೀಮ್‌ ರ್‍ಯಾಂಕಿಂಗ್‌ನಲ್ಲಿ ನಾಲ್ಕರಿಂದ 3ನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.

ಇಂಗ್ಲೆಂಡಿನ ಯಶಸ್ವೀ ನಾಯಕರಾಗಿ ಗುರುತಿಸಲ್ಪಡುವ ಮೈಕ್‌ ಬ್ರೇಯರ್ಲಿ ಹಾಗೂ ಮೈಕಲ್‌ ವಾನ್‌ ಯಶಸ್ಸಿನಲ್ಲೂ ಸವ್ಯಸಾಚಿಗಳ ಪಾತ್ರ ಅತ್ಯಂತ ಮಹತ್ವ ದ್ದಾಗಿತ್ತು. ಬ್ರೇಯರ್ಲಿ ತಂಡದಲ್ಲಿ ಇಯಾನ್‌ ಬೋಥಂ ಇದ್ದರೆ, ವಾನ್‌ ಬಳಗ ದಲ್ಲಿ ಆ್ಯಂಡ್ರೂé ಫ್ಲಿಂಟಾಫ್ ಇದ್ದರು. ಇವರಿಗೆ ಹೋಲಿಸಿದರೆ ಜೋ ರೂಟ್‌ ಹೆಚ್ಚು ಅದೃಷ್ಟಶಾಲಿ ಎಂದು ಕ್ರಿಕೆಟ್‌ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಏಕೆಂದರೆ, ರೂಟ್‌ ತಂಡದಲ್ಲಿ ಇಬ್ಬರು ಅಮೋಘ ಆಲ್‌ರೌಂಡರ್‌ಗಳಿದ್ದಾರೆ. ಮೊಯಿನ್‌ ಅಲಿ ಮತ್ತು ಬೆನ್‌ ಸ್ಟೋಕ್ಸ್‌ ಜತೆಗೆ ಕ್ರಿಸ್‌ ವೋಕ್ಸ್‌ ಕೂಡ ಸೇರಿಕೊಂಡರೆ ಆಗ ಇಂಗ್ಲೆಂಡ್‌ ಇನ್ನಷ್ಟು ಬಲಾಡ್ಯವಾಗಲಿದೆ ಎಂಬುದೊಂದು ಲೆಕ್ಕಾಚಾರ.

ಈ ಯಶಸ್ಸಿನ ಹೊರತಾಗಿಯೂ ಆರಂಭ ಕಾರ ಜೆನ್ನಿಂಗ್ಸ್‌ ಮತ್ತು ನೂತನ ಆಟಗಾರ ಮಾಲನ್‌ ಅವಕಾಶ ಬಾಚಿಕೊಳ್ಳುವಲ್ಲಿ ವಿಫ‌ಲರಾದ ಬಗ್ಗೆ ರೂಟ್‌ಗೆ ಅಸಮಾಧಾನ ವಿದೆ. “ಆಸ್ಟ್ರೇಲಿಯಕ್ಕೆ ಆ್ಯಶಸ್‌ ಆಡಲು ತೆರಳುವುದಕ್ಕಿಂತ ಮೊದಲು ನಾವು ಇನ್ನೂ 3 ಟೆಸ್ಟ್‌ಗಳನ್ನು ಆಡಲಿಕ್ಕಿದೆ. ಇದು ಫಾರ್ಮ್ ಗೆ ಮರಳುವವರಿಗೆ ಸಹಕಾರಿಯಾಗಲಿದೆ’ ಎಂಬುದು ರೂಟ್‌ ನಂಬಿಕೆ. ಇಂಗ್ಲೆಂಡ್‌ 1998ರ ಬಳಿಕ ಮೊದಲ ಸಲ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿ ಗೆದ್ದಿತು. 2003ರ ಸರಣಿ ಡ್ರಾಗೊಂಡರೆ, 2008 ಮತ್ತು 2012ರಲ್ಲಿ ದಕ್ಷಿಣ ಆಫ್ರಿಕಾ ಸರಣಿ ವಶಪಡಿಸಿಕೊಂಡಿತ್ತು. 

Advertisement

1960ರ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯೊಂದರಲ್ಲಿ ಇಂಗ್ಲೆಂಡ್‌ 3 ಟೆಸ್ಟ್‌ ಪಂದ್ಯಗಳನ್ನು ಜಯಿಸಿತು. ಈ ಸರಣಿಯಲ್ಲಿ ಒಟ್ಟು 8 ಆಟಗಾರರು 250 ರನ್‌ ಹಾಗೂ 25 ವಿಕೆಟ್‌ ಸಂಪಾದಿಸಿದರು. ಇಂಥ ಸಾಧನೆ ಟೆಸ್ಟ್‌ ಸರಣಿಯೊಂದರಲ್ಲಿ ಕಂಡುಬಂದದ್ದು ಇದು 9ನೇ ಸಲ.

Advertisement

Udayavani is now on Telegram. Click here to join our channel and stay updated with the latest news.

Next