Advertisement

ಸಿರಿಧಾನ್ಯ ರಾಗಿ, ಜೋಳ ಬೆಳೆ ಸಾಲಕ್ಕೆ ಸಬ್ಸಿಡಿ

03:31 PM Aug 17, 2021 | Team Udayavani |

ಚಾಮರಾಜನಗರ: ಕೇಂದ್ರ ಸರ್ಕಾರ ಸಿರಿಧಾನ್ಯ ಬೆಳೆಯಲು ಆದ್ಯತೆ ನೀಡಿದ್ದು, 2023 ವರ್ಷವನ್ನು ಸಿರಿಧಾನ್ಯ ವರ್ಷ ಎಂದುಘೋಷಿಸಿದೆ ಎಂದು ಎಂದು ಕೇಂದ್ರ ಕೃಷಿ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ  ನಡೆದ ಬಿಜೆಪಿ ಜನಾಶೀರ್ವಾದ ಯಾತ್ರೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಗಿ, ಜೋಳಕ್ಕೆ
ಹೆಚ್ಚಿನ ಬೇಡಿಕೆಯಿದ್ದು, ಮಾರುಕಟ್ಟೆ ಅವಕಾಶವಿವೆ. ಈ ಬೆಳೆಗಳನ್ನು ಬೆಳೆಯಲು ರೈತರಿಗೆ ಸಾಲ ಸಬ್ಸಿಡಿ ನೀಡಲಾಗುತ್ತಿದೆ. ಹೆಚ್ಚಿನ ದರದಲ್ಲಿ ಮಾರಾಟ ಅವಕಾಶವಿದೆ. ಮುಸುಕಿನ ಜೋಳ ಬೆಳೆಗೂ ಅವಕಾಶವಿದೆ. ಆಹಾರ ಪದಾರ್ಥಗಳ ಬೆಳೆದ ಹೊರದೇಶಗಳಿಗೆ ಮಾರಾಟ ಮಾಡಬಹುದು ಎಂದರು.

ಹೈದರಾಬಾದ್‌ನ ಕೃಷಿ ಸಂಶೋಧನಾ ಸಂಸ್ಥೆಯ ಅಧ್ಯಯನ ಪ್ರಕಾರ, ಯಾವ ರೈತ ಕೃಷಿ ಜತೆಯಲ್ಲಿ ಕುಕ್ಕುಟೋದ್ಯಮ, ಪಶುಪಾಲನೆ, ಮೀನುಗಾರಿಕೆ ಮಾಡುವಂತಹ ರೈತರಲ್ಲಿ ಆತ್ಮಹತ್ಯೆ ಕಡಿಮೆ ಇದೆ ಎಂದು ಹೇಳಿದೆ ಎಂದರು.

ರಾಜ್ಯ ಸರ್ಕಾರ ಜತೆಯಲ್ಲಿ ನರೇಂದ್ರ ಮೋದಿ ಅವರ ಸಂಕಲ್ಪ ಈಡೇರಿಸುವ ಕೆಲಸ ಮಾಡಲಾಗುವುದು. ಜಿಲ್ಲೆಯ ಜನತೆಯ ಬೇಡಿಕೆಯಂತೆ ಮನವಿಯಂತೆ ಸರ್ಕಾರದಿಂದ ಕೋಲ್ಡ್‌ ಸ್ಟೋರೇಜ್‌ ನಿರ್ಮಾಣ ಮಾಡಲಾಗುವುದು ದೇಶ ಖಾದ್ಯ ತೈಲದಲ್ಲಿ ಸ್ವಾವಲಂಬಿಯಾಗಬೇಕೆಂಬುದು ಪ್ರಧಾನಮಂತ್ರಿನರೇಂದ್ರಮೋದಿಯವರ ಅಪೇಕ್ಷೆಯಾಗಿದೆ ಎಂದರು.

ಇದನ್ನೂ ಓದಿ:ಅಫ್ಘಾನ್ ನಲ್ಲಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಬದ್ಧವಾಗಿದೆ: ಪ್ರಹ್ಲಾದ ಜೋಶಿ

Advertisement

ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಟಿ.ಸೋಮಶೇಖರ್‌ ಮಾತನಾಡಿ, ಕೇಂದ್ರ ಸರ್ಕಾರ ಸಹಕಾರ ಸಚಿವಾಲಯವನ್ನು ಪತ್ಯೇಕ ಮಾಡಿ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರೈತ ಬೆಳೆದ ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಅಲ್ಲದೆ ತಮಗಿಷ್ಟ ಬಂದ ಕಡೆಗಳಲ್ಲಿ ಮಾರಾಟ ಅವಕಾಶ ಮಾಡಿಕೊಟ್ಟಿದ್ದಾರೆ.ಈ ಕೇಂದ್ರ ಸರ್ಕಾರದ ಐತಿಹಾಸಿಕ ತೀರ್ಮಾನವನ್ನು, ಆದೇಶವನ್ನು ರಾಜ್ಯ ಸರ್ಕಾರಅನುಷ್ಠಾನ ಮಾಡುತ್ತಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಸುಂದರ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು ಕಾರ್ಯಕ್ರಮದಲ್ಲಿ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಶಾಸಕರಾದ ಸಿ.ಎಸ್‌. ನಿರಂಜನ್‌ಕುಮಾರ್‌, ಮಾಜಿ ಶಾಸಕರಾದ ಕೆ.ಆರ್‌.ಮಲ್ಲಿಕಾರ್ಜುನಪ್ಪ, ಜಿ.ಎನ್‌. ನಂಜುಂಡಸ್ವಾಮಿ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ವಿಭಾಗೀಯ ಪ್ರಭಾರಿಮೈ. ವಿ.ರವಿಶಂಕರ್‌, ಜನಾಶೀರ್ವಾದ ಯಾತ್ರೆ ಸಂಚಾ ಲಕರಾದ ಎಲ್‌ ನಾಗೇಂದ್ರ, ತುಳಸಿಮುನಿರಾಜ್‌ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಂಗಲ ಶಿವಕುಮಾರ್‌, ನಾರಾಯಣಪ್ರಸಾದ್‌, ಎಸ್‌ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಜಯಸುಂದರ್‌, ನಗರ ಮಂಡಲ ಅಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಶಿವು,ತಾಲೂಕು ಅಧ್ಯಕ್ಷ ಬೇಡರಪುರ ಬಸವಣ್ಣ, ಜಿಲ್ಲಾ ಮಾಧ್ಯಮ ಪ್ರಮುಖ್‌ ಮಂಜುನಾಥ್‌, ಸಹ ಮಾಧ್ಯಮ್‌ ಪ್ರಮುಖ್‌ ಚಂದ್ರಶೇಖರ್‌ ಇತರರಿದ್ದರು.

ಮಿಶ್ರಬೆಳೆ ಬೆಳೆದ ರೈತನ ಮನೆಗೆ ಶೋಭಾ ಭೇಟಿ
ಚಾಮರಜನಗರ:
ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಾಲೂಕಿನ ಮಾದಾಪುರದಲ್ಲಿರುವ ರೈತ ನಟರಾಜು ಮನೆಗೆ ಭೇಟಿ ನೀಡಿ, ಯಾವ ಯಾವ ಬೆಳೆ ಬೆಳೆಯಲಾಗುತ್ತಿದೆ ಎಂಬ ಬಗ್ಗೆ ವಿಚಾರಿಸಿದರು.


ಇದೇ ವೇಳೆ ರೈತ ನಟರಾಜು ಅವರನ್ನು ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ರೈತರು ಹಲವು ಬೇಡಿಕೆಗಳು ಹಾಗೂ
ಮನವಿ ಪತ್ರವನ್ನು ಸಚಿವರಿಗೆ ಸಲ್ಲಿಸಿದರು. ಜನಾಶೀರ್ವಾದ ಯಾತ್ರೆಯಲ್ಲಿ ನಟರಾಜು ಕೃಷಿ ಕುರಿತು ಶೋಭಾ ಕರಂದ್ಲಾಜೆ ಮೆಚ್ಚುಗೆ ವ್ಯಕ್ತಪಡಿಸಿ
ದ್ದರು. ರೈತ ನಟರಾಜು 2 ಎಕರೆಯಲ್ಲಿ ಕಬ್ಬು, 4 ಎಕರೆಯಲ್ಲಿ ಮುಸುಕಿನಜೋಳ, ಉಳಿದ ಸ್ವಲ್ಪ ಜಮೀನಿನಲ್ಲಿ ಬಾಳೆ ಬೆಳೆದಿದ್ದಾರೆ. ಹೀಗೆ ಮಿಶ್ರ ಬೆಳೆ ಅನುಸರಿಸಿದರೆ ಒಂದಲ್ಲ ಒಂದು ಬೆಳೆಯು ಅವರ ಕೈ ಹಿಡಿಯುತ್ತದೆ. ಕೃಪಿಯಲ್ಲಿ ಎಲ್ಲ ರೈತರು ಇವರ ಮಾರ್ಗವನ್ನು ಅನುಸರಿಸಿದರೆ ಲಾಭ ಕಾಣಬಹುದು. ಕೃಷಿಯಲ್ಲಿ ಮಿಶ್ರ ಬೇಸಾಯ ಮಾಡಿದರೆ ರೈತರಿಗೆ ಲಾಭ ದೊರೆಯುತ್ತದೆ ಎಂದು ತಿಳಿಸಿದರು. ಈ ವೇಳೆ ಶಾಸಕ ನಿರಂಜನ್‌ ಕುಮಾರ್‌, ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ, ಎಸ್ಪಿ ದಿವ್ಯಾಸಾರಾ ಥಾಮಸ್‌, ಜಂಟಿ ಕೃಷಿ ನಿರ್ದೇಶಕಿ ಚಂದ್ರಕಲಾ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next