Advertisement
ಲಾಕ್‌ಡೌನ್ ವೇಳೆ ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ನೆರವಾಗಲಿ ಎಂಬ ಸದುದ್ದೇಶದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ತಲಾ 2 ಸಾವಿರ ರೂ. ಆರ್ಥಿಕ ಸಹಾಯ ಧನ ನೀಡಲು ಮುಂದಾಗಿತ್ತು. ಈ ಯೋಜನೆಯಡಿ ಸಹಾಯ ಧನ ಪಡೆಯಲು ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಸಹಾಯ ಧನ ಪಡೆಯುತ್ತಿರುವ ಕಲಾವಿದರು ಅರ್ಜಿ ಹಾಕುವ ಹಾಗಿಲ್ಲ ಎಂಬ ಷರತ್ತು ಕೂಡ ವಿಧಿಸಲಾಗಿತ್ತು.
Related Articles
Advertisement
ಇಲಾಖೆಯಿಂದ ಸಹಾಯ ಪಡೆಯದ ಹಲವು ಕಲಾವಿದರು ರಾಜ್ಯದ ನಾನಾ ಭಾಗದಲ್ಲಿದ್ದಾರೆ. ಅಂತಹವರಿಗೆ ನೆರವಾಗಲಿ ಎಂಬ ಮೂಲ ಉದ್ದೇಶದಿಂದ ಸರ್ಕಾರ 2 ಸಾವಿರ ರೂ. ಆರ್ಥಿಕ ಅನುದಾನ ನೀಡಲು ಮುಂದಾಗಿತ್ತು. ಅಂತಹ ಕಲಾವಿದರಿಗೆ ತಲುಪಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.
6 ಸಾವಿರ ಕಲಾವಿದರಿಗೆ ಬ್ಯಾಂಕ್ ಖಾತೆಗೆ ಹಣ: ಈಗಾಗಲೇ ಸುಮಾರು 10 ಸಾವಿರ ಅರ್ಹ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಈಗಾಗಲೇ ಸುಮಾರು 6 ಸಾವಿರ ಕಲಾವಿದರಿಗೆ ಬ್ಯಾಂಕ್ ಖಾತೆಯ ಮೂಲಕ ಸಹಾಯ ಧನ ನೀಡಲಾಗಿದೆ. ಇನ್ನೂ ನಾಲ್ಕು ಸಾವಿರ ಕಲಾವಿದರ ಬ್ಯಾಂಕ್ ಖಾತೆಯ ಮೂಲಕ ಹಣ ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ಆ ಕಲಾವಿದರಿಗೂ ಹಣ ತಲುಪಿಸುವ ಕಾರ್ಯ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಸಹಾಯ ಧನಕ್ಕಾಗಿ ಬರುವ ಅರ್ಜಿಗಳ ಪರೀಶಿಲನೆ ನಡೆಸಿ ಕಲಾವಿದರ ಮತ್ತೂಂದು ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಇಲಾಖೆ ನೀಡುವ ಆರ್ಥಿಕ ಸಹಾಯಧನಕ್ಕಾಗಿ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಪಿಂಚಣಿ ಪಡೆಯುತ್ತಿದ್ದ ಸುಮಾರು 15 ಸಾವಿರಕ್ಕೂ ಅಧಿಕ ಕಲಾವಿದರು ಅರ್ಜಿ ಸಲ್ಲಿಸಿದ್ದಾರೆ. ಅಂಥವರ ಅರ್ಜಿಯನ್ನು ಆಧಾರ್ ಸಂಖ್ಯೆ ಮೂಲಕ ಪತ್ತೆ ಹಚ್ಚಿ ತಿರಸ್ಕರಿಸಲಾಗಿದೆ.-ಎಸ್.ರಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ * ದೇವೇಶ ಸೂರಗುಪ್ಪ