Advertisement
ದೆಹಲಿಯಲ್ಲಿ ಈಚೆಗೆ ನಡೆದ ಕೇಂದ್ರ ಭಾರೀ ಕೈಗಾರಿಕಾ ಇಲಾಖೆ ನಡೆಸಿದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಮಾತ್ರ ಸಬ್ಸಿಡಿ ನೀಡಲು ಸೂಚಿಸಲಾಗಿತ್ತು. ಗುತ್ತಿಗೆ ಆಧಾರದ ಮೇಲೆ ರಸ್ತೆಗಿಳಿಸುವುದಾದರೆ, ಈ ಅನುದಾನ ಅನ್ವಯ ಆಗುವುದಿಲ್ಲ. ಆ ಹಣವನ್ನು ಆಯಾ ಸಾರಿಗೆ ಸಂಸ್ಥೆಗಳೇ ಭರಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಪರಿಸರ ಸ್ನೇಹಿ ಸಮೂಹ ಸಾರಿಗೆ ವಾಹನಗಳನ್ನು ರಸ್ತೆಗಿಳಿಸುವ ಮಹದಾಸೆಗೆ ಡೋಲಾಯಮಾನವಾಗಿದೆ.
Related Articles
Advertisement
ಗುತ್ತಿಗೆ ಆಧಾರದ ಮೇಲೆ ಪೂರೈಸಲಾಗುವ ಬಸ್‌ಗಳು ಹತ್ತು ವರ್ಷ ಮಾತ್ರ ನಿಗಮದ ಸುಪರ್ದಿಯಲ್ಲಿ ಇರುತ್ತವೆ. ನಂತರದಲ್ಲಿ ಗುತ್ತಿಗೆ ಪಡೆದ ಕಂಪೆನಿಗಳು ವಾಪಸ್ ಪಡೆಯುತ್ತವೆ. ಇದರಿಂದ ಏನು ಬಂತು? ಹಣವೂ ಹೋಯ್ತು; ಬಸ್‌ಗಳೂ ಬರುವುದಿಲ್ಲ. ಆದ್ದರಿಂದ ಈ ಪದ್ಧತಿ ಬೇಡ ಎನ್ನುವುದು ಕೇಂದ್ರದ ವಾದ.
ಗುತ್ತಿಗೆಯಿಂದ ರಿಸ್ಕ್ ಇಲ್ಲ: ಬಸ್ ಖರೀದಿಯು ಬಿಎಂಟಿಸಿಗೆ ಹೊರೆಯಾಗಿ ಪರಿಣಮಿಸಲಿದೆ. ಈಗಾಗಲೇ ಸಂಸ್ಥೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಈಗ ನೂರಾರು ಕೋಟಿ ರೂ. ಹೂಡಿಕೆ ಕಷ್ಟಸಾಧ್ಯ. ಹಾಗೊಂದು ವೇಳೆ, ಇಷ್ಟೊಂದು ಹಣ ನೀಡಿ ಖರೀದಿಸಿದರೂ, ಮುಂದಿನ ದಿನಗಳಲ್ಲಿ ಈ ಮಾದರಿ ಬಸ್‌ಗಳು ಅಪ್ರಸ್ತುತವಾಗಬಹುದು. ಗುತ್ತಿಗೆ ಪಡೆದರೆ ಈ ರಿಸ್ಕ್ ಇರುವುದಿಲ್ಲ. ನಿರ್ವಹಣಾ ವೆಚ್ಚವೂ ಬರುವುದಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಸಾಮಾನ್ಯವಾಗಿ ಖರೀದಿ ಮಾಡುವ ಬಸ್‌ಗಳ ಆಯಸ್ಸು ಇರುವುದೇ 9ರಿಂದ 10 ವರ್ಷ. ನಂತರ ಅವು ಗುಜರಿಗೇ ಸೇರುತ್ತವೆ ಎಂಬುದು ಬಿಎಂಟಿಸಿ ಅಧಿಕಾರಿಗಳ ವಾದ.
ಈ ಮಧ್ಯೆ ಟೆಂಡರ್‌ನಲ್ಲಿ ಭಾಗವಹಿಸಿ ಕಾರ್ಯಾದೇಶ ಪಡೆದ ಕಂಪನಿಗಳು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಈ ರೀತಿಯ ಗೊಂದಲದಿಂದ ಬಸ್ ತಯಾರಿಕೆ ಮತ್ತು ಪೂರೈಕೆ ಕಂಪನಿಗಳು ವಿಶ್ವಾಸ ಕಳೆದುಕೊಳ್ಳುತ್ತವೆ. ಮುಂದಿನ ದಿನಗಳಲ್ಲಿ ಟೆಂಡರ್ ಕರೆದಾಗ, ಭಾಗವಹಿಸಲು ಹಿಂದೇಟು ಹಾಕುವ ಸಾಧ್ಯತೆ ಇರುತ್ತದೆ.
ಎಲ್ಲೆಲ್ಲಿ ಗುತ್ತಿಗೆ?-ಬೆಂಗಳೂರು- 60 ಎಸಿ (12 ಮೀ. ಉದ್ದ), 20 ನಾನ್‌ಎಸಿ (9 ಮೀ. ಉದ್ದ)
-ಹೈದರಾಬಾದ್- 100 ಎಸಿ (12 ಮೀ. ಉದ್ದ)
-ಮುಂಬೈ- 80 ಎಸಿ ಮತ್ತು ನಾನ್‌ಎಸಿ ಖರೀದಿ ಎಲ್ಲೆಲ್ಲಿ?
ಲಖನೌ, ಜಮ್ಮು, ಇಂಧೋರ್, ಗುವಾಹಟಿ, ಜೈಪುರ ಗೊಂದಲದ ಹಿಂದೆ ಲಾಭಿ?: ಗುತ್ತಿಗೆ ಪದ್ಧತಿಗೆ ಸಬ್ಸಿಡಿ ನೀಡದಿರುವುದರ ಹಿಂದೆ ಕಂಪನಿಗಳು ಅಥವಾ ಪ್ರಭಾವಿಗಳ ಲಾಬಿ ಇರುವ ಸಾಧ್ಯತೆಯೂ ಇದೆ. ಗುತ್ತಿಗೆ ಪಡೆದರೆ, ಖರೀದಿಸುವ ಅಗತ್ಯ ಇರುವುದಿಲ್ಲ. ಇದು ತಯಾರಿಕೆ ಕಂಪನಿಗಳು ಮತ್ತು ಅವುಗಳಿಂದ ಅನುಕೂಲ ಪಡೆಯುವ ಲೆಕ್ಕಾಚಾರದಲ್ಲಿದ್ದ ಪ್ರಭಾವಿಗಳಿಗೆ ಹಿನ್ನಡೆ ಆಗಲಿದೆ. ಆದ್ದರಿಂದ ಪ್ರಭಾವ ಬಳಸಿ, ಈ ತಂತ್ರ ರೂಪಿಸಿರುವ ಸಾಧ್ಯತೆ ಇದೆ ಎಂದು ನಿಗಮದ ಉನ್ನತ ಮೂಲಗಳು ತಿಳಿಸಿವೆ. * ವಿಜಯಕುಮಾರ್ ಚಂದರಗಿ