Advertisement

ಆದಿವಾಸಿಗಳ ಅಭಿವೃದ್ಧಿಗೆ ಭರಪೂರ ಅನುದಾನ

05:54 PM Nov 16, 2021 | Team Udayavani |

ಹುಬ್ಬಳ್ಳಿ: ಕೇಂದ್ರ ಸರಕಾರ ಪರಿಶಿಷ್ಟ ಜಾತಿ, ಪಂಗಡ ಹಾಗೂ ಆದಿವಾಸಿಗಳ ಕಾನೂನಾತ್ಮಕ ರಕ್ಷಣೆ ಹಾಗೂ ಅವರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಅನುದಾನ ಮೂರು ಪಟ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ಹಲವು ಸೌಲಭ್ಯಗಳನ್ನು ನೀಡಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸರಬರಾಜು ಸಚಿವ ಪಿಯೂಷ್‌ ಗೋಯಲ್‌ ಹೇಳಿದರು.

Advertisement

ಸೋಮವಾರ ಇಲ್ಲಿನ ಬೈರಿದೇವರಕೊಪ್ಪದ ಭಾರತೀಯ ಆಹಾರ ನಿಗಮದ ಆವರಣದಲ್ಲಿ ನೂತನ ವಿಭಾಗೀಯ ಕಚೇರಿಯನ್ನು ವರ್ಚುವಲ್‌ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಆದಿವಾಸಿಗಳು ಹಾಗೂ ಬುಡಕಟ್ಟು ಜನರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ. 75ನೇ ಸ್ವಾತಂತ್ರÂ ಮಹೋತ್ಸವ ಸಂದರ್ಭದಲ್ಲಿ ಇವರನ್ನು ಸ್ಮರಿಸುವುದು ಅಗತ್ಯ. ನವೆಂಬರ್‌ 15 ಆದಿವಾಸಿ ಸ್ವಾತಂತ್ರ್ಯ
ಹೋರಾಟಗಾರ ಬಿರ್ಸಾ ಮುಂಡಾ ಜನ್ಮದಿನವಾಗಿದ್ದು, ಇದನ್ನು ಕೇಂದ್ರ ಸರಕಾರ ಜನ ಜಾತಿ ಗೌರವ ದಿವಸ್‌ ಎಂದು ಘೋಷಿಸಲಾಗಿದೆ ಎಂದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಏಳೂವರೆ ವರ್ಷದಲ್ಲಿ ಎಸ್ಸಿ, ಎಸ್ಟಿ ಹಾಗೂ ಆದಿವಾಸಿಗಳ ಕಲ್ಯಾಣ ಕಾರ್ಯಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದೆ. ಮೀಸಲಾತಿಯಿಂದ ಹಿಡಿದು ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. 21 ಸಾವಿರ ಕೋಟಿ ರೂ. 78 ಸಾವಿರ ಕೋಟಿ ರೂ. ಗೆ ಹೆಚ್ಚಿಸಲಾಗಿದೆ. ಹೊಸದಾಗಿ 400 ಕ್ಕೂ ಹೆಚ್ಚು ಏಕಲವ್ಯ ಶಾಲೆಗಳನ್ನು ಮಂಜೂರು ಮಾಡಲಾಗಿದೆ. ವಿದ್ಯಾರ್ಥಿ ವೇತನ ಹೆಚ್ಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎಸ್ಸಿ, ಎಸ್ಟಿ ಹಾಗೂ ಆದಿವಾಸಿಗಳಿಗೆ ಕಾನೂನು ರಕ್ಷಣೆ ನೀಡಿದ್ದಾರೆ ಎಂದರು.

ಕೃಷಿ ಉತ್ಪನ್ನಗಳ ರಫ್ತಿನಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ 5ನೇ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ದೇಶ ಆಹಾರ ಧಾನ್ಯಗಳ ಪೂರೈಕೆಯಲ್ಲಿ ಹಬ್‌ ಆಗಿ ಪರಿವರ್ತನೆಯಾಗಲಿದೆ. ಕೋವಿಡ್‌ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ 15 ತಿಂಗಳು ಕಾಲ ದೇಶದ 80 ಕೋಟಿ ಜನರಿಗೆ 5 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸಲಾಗಿದೆ. ಯಾವೊಬ್ಬ ವ್ಯಕ್ತಿಯ ಕೂಡ ಹಸಿವಿನಿಂದ ಬಳಲಬಾರದು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸರಕಾರದ ಯೋಜನೆ ತಲುಪಿಸಲು ಅ ಧಿಕಾರಿಗಳು ಪ್ರಯತ್ನಿಸಬೇಕು ಎಂದರು.

ಹಿಂದಿನ ಸರಕಾರದ ಅವಧಿಗೆ ಹೋಲಿಸಿದರೆ ಆಹಾರ ಧಾನ್ಯ ಖರೀದಿ ಹಾಗೂ ಸಂಗ್ರಹದಲ್ಲಿ ಎರಡು ಪಟ್ಟು ಹೆಚ್ಚಳವಾಗಿದೆ. ಇದಕ್ಕೆ ಪೂರಕವಾರ ರೈತರ ಆದಾಯ ದ್ವಿಗುಣಗೊಳಿಸಲು ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕೋವಿಡ್‌ ನಂತರ ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ. ಪ್ರಪಂಚದಲ್ಲಿ ಕೊವಿಡ್‌ಗಿಂತ ಆಹಾರ ಕೊರತೆಯಿಂದ ಹೆಚ್ಚು ಜನರು ಮೃತರಾಗಿದ್ದಾರೆ. ಈ ಸಂದರ್ಭದಲ್ಲಿ ಭಾರತ ವಿಶ್ವದ ಬಡ ರಾಷ್ಟ್ರಗಳಿಗೆ ಸಹಾಯದ ಹಸ್ತ ಚಾಚಿದೆ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಆಹಾರ ಭದ್ರತೆ ಕಾಯ್ದೆ ರಚನೆ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.

Advertisement

ಆಹಾರ ಮತ್ತು ಸರಬರಾಜು ಇಲಾಖೆ ರಾಜ್ಯ ಖಾತೆ ಸಚಿವೆ ನಿರಂಜನ ಜ್ಯೋತಿ ಮಾತನಾಡಿ, ಆಹಾರ ಸಂಗ್ರಹಣೆ ಹಾಗೂ ವಿತರಣೆಯಲ್ಲಿನ ಲೋಪ ಸರಿಪಡಿಸಿ ಜನರಿಗೆ ಆಹಾರ ವಿತರಿಸಲಾಗುತ್ತಿದೆ. ಆಹಾರ ಸಂಗ್ರಹಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುತ್ತಿದೆ. ಆಹಾರ ನಿಗಮದಿಂದ ಬ್ಲಾಕ್‌ ಮಟ್ಟದಲ್ಲಿ ಸಂಗ್ರಹಾಲಯ ನಿರ್ಮಿಸಿದರೆ ಸರಬರಾಜಿನಲ್ಲಿ ಸೋರಿಕೆ ತಡೆಗಟ್ಟಬಹುದಾಗಿದೆ ಎಂಬ ಅಭಿಪ್ರಾಯ ತಿಳಿಸಿದರು.

ಆಹಾರ ಮತ್ತು ಸರಬರಾಜು ಇಲಾಖೆ ರಾಜ್ಯ ಖಾತೆ ಸಚಿವ ಅಶ್ವಿ‌ನಿ ಕುಮಾರ ಚೌಬೇ ಮಾತನಾಡಿ, ಸರಕಾರ ಕೋವಿಡ್‌ ಸಂದರ್ಭದಲ್ಲಿ ದೇಶದ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ಒದಗಿಸಲಾಗಿದೆ. ಬಡ ಜನರಿಗಾಗಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಜನರು ಸೇವಿಸುವ ಆಹಾರ ಪೌಷ್ಟಿಕವಾಗಿದ್ದು ಆರೋಗ್ಯ ವೃದ್ಧಿಸುವ ಹಾಗಿರಬೇಕು ಎಂದರು. ಆಹಾರ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅತೀಶ ಚಂದ್ರ, ಕಾರ್ಯ ನಿರ್ವಾಹಕ ನಿರ್ದೇಶಕ ರವೀಂದ್ರ ಅಗರವಾಲ, ಕರ್ನಾಟಕ ರಾಜ್ಯ ಪ್ರಧಾನ ವ್ಯಸ್ಥಾಪಕ ಜಿ.ನರಸಿಂಹರಾಜು ಸೇರಿದಂತೆ
ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next