Advertisement

Subramanya: ಆಟೋ ರಿಕ್ಷಾ ಪಲ್ಟಿ – ಚಾಲಕ ಸಾವು

11:03 AM Mar 04, 2024 | Team Udayavani |

ಸುಬ್ರಹ್ಮಣ್ಯ: ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ ಘಟನೆ ಸುಬ್ರಹ್ಮಣ್ಯದಲ್ಲಿ ಭಾನುವಾರ (ಮಾ.3ರಂದು) ರಾತ್ರಿ ಸಂಭವಿಸಿದೆ.

Advertisement

ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಿವೇಕಾನಂದ ದೇವರಗದ್ದೆ ಮೃತರು. ವಿವೇಕಾನಂದ ಅವರು ಮಾ.3 ರಾತ್ರಿ ಗಂಟೆ 9 ಗಂಟೆ ಸುಮಾರಿಗೆ  ಸುಬ್ರಹ್ಮಣ್ಯದ ಇಂಜಾಡಿ ಬಳಿ ಆಟೋದಲ್ಲಿ ಹೋಗುತ್ತಿರುವಾಗ ಲೋ ಬಿ.ಪಿ ಆಗಿ ರಿಕ್ಷಾ ರಸ್ತೆ ಬದಿ ಚಲಿಸಿ ಪಲ್ಟಿಯಾಗಿ ಬಿದ್ದು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಇದನ್ನೂ ಓದಿ: ಮುಸುಕುಧಾರಿಯಿಂದ ಶಾಲಾ ಆವರಣದಲ್ಲೇ ಆ್ಯಸಿಡ್ ದಾಳಿ… ಮೂವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

ಸಿಗದ ಚಿಕಿತ್ಸೆಗೆ ಆಕ್ರೋಶ; ಘಟನೆಯಲ್ಲಿ ಗಾಯಗೊಂಡಿದ್ದ ವಿವೇಕಾನಂದ ಅವರನ್ನು ಸುಬ್ರಹ್ಮಣ್ಯದ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ ಅಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ಸಿಗಲಿಲ್ಲ. ಬಳಿಕ ಕಡಬದ ಆಸ್ಪತ್ರೆಗೆ ಅಂಬ್ಯುಲೆನ್ಸ್ ನಲ್ಲಿ ಕರೆದೊಯ್ಯಲಾಯಿತಾದರೂ ಅದಾಗಲೇ ಅವರು ಮೃತರಾಗಿದ್ದರು. ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ 24X7 ಆಸ್ಪತ್ರೆ ಇಲ್ಲದೇ ಸಮರ್ಪಕ ಚಿಕಿತ್ಸೆ ಸಿಗದೇ ಸಾವನ್ನಪ್ಪುವ ಘಟನೆಗಳು ನಡೆಯುತ್ತಲೇ ಇದ್ದು ಇದರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದು, ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಆಸ್ಪತ್ರೆ ಆರಂಭಿಸುವಂತೆ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next