ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲ ದೇಗುಲಗಳು ಮುಂದಿನ ಜನವರಿ 30 ರೊಳಗೆ ಲೆಕ್ಕಪತ್ರ ತಪಾಸಣೆ ವರದಿ ಸಲ್ಲಿಸಬೇಕು. ಇಲ್ಲವಾದರೆ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ, ಹಜ್,ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ವಿಕಾಸಸೌಧಲ್ಲಿ ನಡೆದ “ಎ’ ಮತ್ತು “ಬಿ’ ವರ್ಗದ ದೇಗುಲಗಳ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ರಾಜ್ಯದ ಮುಜರಾಯಿ ದೇಗುಲಗಳ ಅಭಿವೃದ್ದಿ ಕಾರ್ಯ ಎದುರಿಸುತ್ತಿರುವ ಸಮಸ್ಯೆಗಳ ವರದಿ ಪಡೆದು ಮಾತನಾಡಿ, ಇಲಾಖೆ ವ್ಯಾಪ್ತಿಯ ಕೆಲ ದೇಗುಲಗಳಲ್ಲಿ ಹಲವು ವರ್ಷಗಳಿಂದ ಲೆಕ್ಕಪತ್ರ ತಪಾಸಣೆ ಮಾಡದಿ ರುವುದು ದೇಗುಲದ ಆಡಳಿತದ ವಿಷಯದಲ್ಲಿ ಜನರಲ್ಲಿ ಸಂಶಯ ಮೂಡಿಸುತ್ತಿದೆ.
ಬಾಕಿ ಇರುವ ಎಲ್ಲ ವರ್ಷಗಳ ಲೆಕ್ಕಪತ್ರ ತಪಾಸಣೆಯ ವರದಿ ಸಲ್ಲಿಸಬೇಕು ಎಂದು ಹೇಳಿದರು. ರಾಜ್ಯದಲ್ಲಿ 207ಎ ದರ್ಜೆ, 139ಬಿ ದರ್ಜೆ ದೇಗುಲ ಗಳಿವೆ. ಆದಾಯ ಕಡಿಮೆ 34217ಸಿ ದರ್ಜೆ ದೇಗುಲಗಳಿವೆ. ಇವುಗಳಲ್ಲಿ ಚಾಮುಂಡೇಶ್ವರಿ, ಯಡಿ ಯೂರು ಸಿದ್ದಲಿಂಗೇಶ್ವರ, ಘಾಟಿ ಸುಬ್ರಮಣ್ಯ ಮತ್ತು ಬೆಂಗಳೂರಿನ ಬನಶಂಕರಿ ದೇಗುಲ ಪ್ರತಿವರ್ಷ ಲೆಕ್ಕ ತಪಾಸಣಾ ವರದಿ ನೀಡುತ್ತಿವೆ. ಕೆಲ ದೇಗುಲಗಳಲ್ಲಿ 2 ದಶಕಗಳ ಲೆಕ್ಕಪತ್ರ ತಪಾಸಣೆ ಬಾಕಿಯಿದೆ ಎಂದು ತಿಳಿಸಿ ದರು.
ಇದನ್ನೂ ಓದಿ:- ದುರಂತ: ರಸ್ತೆ ಅಪಘಾತದಲ್ಲಿ ನಟ ಸುಶಾಂತ್ ಸಿಂಗ್ ಕುಟುಂಬದ ಐವರು ಸ್ಥಳದಲ್ಲೇ ಸಾವು
ರಾಜ್ಯದ ಸಮಗ್ರ ದೇಗುಲಗಳ ಇಂಟಿಗ್ರೇ ಟೆಡ್ ವೆಬ್‌ಸೈಟ್ ಕಾರ್ಯ ತೀವ್ರಗತಿಯಲ್ಲಿ ನಡೆಯು ತ್ತಿದೆ. ದೇಗು ಲದ ಇತಿಹಾಸ, ಐತಿಹ್ಯ, ಮಹತ್ವವನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಲು ಅಗತ್ಯ ವಿರುವ ಮಾಹಿತಿ ಕ್ರೋಢೀ ಕರಿಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಮುಜರಾಯಿ ಇಲಾಖೆಗೆ ಸೇರಿದ ದೇಗುಲಗಳ ಮೇಲೆ ಕಡ್ಡಾಯವಾಗಿ ಮುಜರಾಯಿ ಇಲಾಖೆಯ ನಾಮಫಲಕ ಗಳನ್ನು ಅಳವಡಿಸಬೇಕು. ಈ ನಿಟ್ಟಿನಲ್ಲಿ ದೇಗುಲದ ಇಒ ಹಾಗೂ ಆಡಳಿತಾಧಿ ಕಾರಿಗಳು ತಪ್ಪದೇ ಕ್ರಮ ಕೈಗೊಳ್ಳು ವಂತೆ ಸೂಚನೆ ನೀಡಿದರು.
ರಾಜ್ಯದ ಸ್ವತ್ಛತೆ ಕಾಪಾಡದೇ ಇರುವ ಕಲ್ಯಾಣಿಗಳ ಪಟ್ಟಿಯನ್ನು ನೀಡುವಂತೆ ಆಯುಕ್ತರಿಗೆ ಸೂಚನೆ ನೀಡಿದರು. ಸ್ವತ್ಛತೆಯನ್ನು ಕಾಪಾಡದೇ ಇರುವ ಕಲ್ಯಾಣಿಗಳ ಪುನರುಜ್ಜೀವನಕ್ಕೆ ಪಂಚಾಯತ್ ಇಲಾಖೆ ಸಹಯೋಗದಲ್ಲಿ ನರೆಗಾ ಮತ್ತು ಸ್ವಯಂ ಸೇವಾ ಸಂಘಟನೆಗಳನ್ನು ಬಳಸಿಕೊಳ್ಳುವಂತೆ ಸೂಚಿಸಿ ದರು.