Advertisement
ರೈತ ಅನುವುಗಾರ ಕೆ. ಬೇವಿನಹಳ್ಳಿ ಕೆ.ಸಿ. ಪಟೇಲ್ ಮಾತನಾಡಿ, ರೈತ ಅನುವುಗಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ ಅನುವುಗಾರರ ಸೇವೆಬೇಡ ಎಂಬ ನಿರ್ಣಯವನ್ನು ಸರ್ಕಾರ ಕೈಗೊಂಡಿದೆ. ಈಗಿರುವ ಅನುವುಗಾರರ ಜಾಗದಲ್ಲಿ ಹೊಸಬರನ್ನು ನೇಮಿಸಿಕೊಳ್ಳುವುದಾಗಿ ಸರ್ಕಾರ ನಿರ್ಧರಿಸಿರುವುದು ಆಘಾತ ಮೂಡಿಸಿದೆ. ಹಲವು ವರ್ಷಗಳಿಂದ ಅತ್ಯಂತ ಕಡಿಮೆ ಸಂಬಳಕ್ಕೆ ಕನಿಷ್ಠ ಸೌಲಭ್ಯದೊಂದಿಗೆ ಹತ್ತಾರು ತರಬೇತಿಗಳನ್ನು ಪಡೆದ ಈಗಿನ ಅನುವುಗಾರರ ಕೃಷಿ ಕ್ಷೇತ್ರದ ಜ್ಞಾನ, ತ್ಯಾಗಕ್ಕೆ ಸರ್ಕಾರ ತಿಲಾಂಜಲಿ ಇಟ್ಟಂತಾಗಿದೆ. ಮಾಸಿಕ 10 ಸಾವಿರ ರೂ. ಸಂಬಳದೊಂದಿಗೆ ರಾಜ್ಯದಲ್ಲಿರುವ 6000 ಅನುವುಗಾರರನ್ನು ಕಾಯಂಗೊಳಿಸಬೇಕು ಎಂದರು.
Advertisement
ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಕೆ
07:45 AM Jun 13, 2020 | Suhan S |
Advertisement
Udayavani is now on Telegram. Click here to join our channel and stay updated with the latest news.