Advertisement
ಆರಂಭಿಕ ಹಂತದ ಕೆಲಸಗಳಿಗೆ ಗುರುವಾರ ಚಾಲನೆ ದೊರಕಿದೆ. ಮುಂದಿನ ಐದು ವರ್ಷದಲ್ಲಿ ಹಂತ-ಹಂತವಾಗಿ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್ ಸಿದ್ಧವಾಗಲಿದೆ. 5 ಕೋಟಿ ರೂ. ವೆಚ್ಚದಲ್ಲಿ ವೃಕ್ಷೋದ್ಯಾನವನ ನಿರ್ಮಾಣವಾಗಲಿದೆ. ಅರಣ್ಯ ಇಲಾಖೆ ಮೀಸಲು ಅರಣ್ಯದಲ್ಲಿ ಸ್ಥಳದ ಗಡಿ ಗುರುತು ಮಾಡಿದೆ. ಗಡಿ ಗುರುತು ಬಳಿಕ 17 ಲಕ್ಷ ರೂ. ವೆಚ್ಚದಲ್ಲಿ ಬೇಲಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದೆ. ಹಂತಹಂತವಾಗಿ ಅನುದಾನ ಬಳಸಿಕೊಂಡು ಉದ್ಯಾನವನ ನಿರ್ಮಿಸಲಾಗುತ್ತದೆ. ಕುಮಾರಧಾರೆ ಸ್ನಾನ ಘಟ್ಟದ ಮೂರು ಪಾರ್ಶ್ವಕ್ಕೆ ಹೊಂದಿಕೊಂಡು ಈ ಉದ್ಯಾನವನ ತಲೆಎತ್ತಲಿದೆ.
Related Articles
ಕುಮಾರಧಾರೆ ಸ್ನಾನ ಘಟ್ಟದಲ್ಲಿ ಪ್ರವಾಸಿಗರಿಗಾಗಿ ಬೋಟಿಂಗ್ ವ್ಯವಸ್ಥೆ ಇರುತ್ತದೆ. ವಿಶಾಲ ನೀರಿನ ಅಶ್ರಯದ ಜಾಗದಲ್ಲಿ ಬೋಟಿಂಗ್ ಮೂಲಕ ಸಂಚರಿಸಿ ಖುಷಿ ಪಡೆಯಬಹುದು. ಕ್ಷೇತ್ರದ ಮಹಿಮೆ, ಇತಿಹಾಸ ಸಾರುವ ಸ್ಟಾ ್ಯಚ್ಯುಗಳನ್ನು ಉದ್ಯಾನವನದ ಒಳಗೆ ಸ್ಥಾಪಿಸಲಾಗುತ್ತದೆ. ಅವಿಸ್ಮರಣೀಯ ಘಟನೆಗಳು ಹಾಗೂ ಸುತ್ತಮುತ್ತಲ ಪರಿಸರದ ಪ್ರೇಕ್ಷಣೀಯ ಸ್ಥಳಗಳ ಕುರಿತು ಮಾಹಿತಿ ನೀಡುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.
Advertisement
ಆವಶ್ಯವಾಗಿತ್ತುಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರು, ಯಾತ್ರಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಅವರು ಬಿಡುವಿನ ವೇಳೆಯಲ್ಲಿ ಸಮಯ ಕಳೆಯಲು ಪ್ರೇಕ್ಷಣೀಯ ಸ್ಥಳಗಳು, ವಿಶ್ರಾಂತಿ ಧಾಮಗಳು ಇಲ್ಲಿಲ್ಲ. ದಿನವಿಡೀ ಕೊಠಡಿಗಳಲ್ಲಿಯೇ ಕಾಲ ಕಳೆಯಬೇಕಾದ ಸ್ಥಿತಿ ಇದೆ. ಹೀಗಾಗಿ ಇಲ್ಲಿ ಪ್ರವಾಸಿ ಕೇಂದ್ರ ತೆರೆಯುವ ಆವಶ್ಯಕತೆ ಇತ್ತು. ಪ್ರಸ್ತುತ ಅದಕ್ಕೆ ಕಾಲ ಕೂಡಿಬಂದಿದೆ. ಸಂಪೂರ್ಣ ಪರಿಸರ ಸ್ನೇಹಿ
ಟ್ರೀ ಪಾರ್ಕ್ ಪರಿಸರ ಸ್ನೇಹಿಯಾಗಿ ಜಾರಿಗೊಳಿಸಲಾಗುತ್ತಿದೆ. ಮೀಸಲು ಅರಣ್ಯದಲ್ಲಿ ಇರುವ ಯಾವುದೇ ಗಿಡಮರಗಳಿಗೆ ಹಾನಿ ಮಾಡದೆ ಈಗಿನ ಸ್ಥಿತಿಯಲ್ಲಿರುವಂತೆಯೇ ಮೂಲ ಸ್ಥಿತಿಯನ್ನು ಉಳಿಸಿಕೊಂಡು ಸಸ್ಯ ರಾಶಿಗಳ ಮಧ್ಯೆ ಇತರೆ ವ್ಯವಸ್ಥೆ ಮಾಡಲಾಗುತ್ತದೆ. ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ವೃಕ್ಷೋದ್ಯಾನವನದಲ್ಲಿ ಏನೇನಿರಲಿದೆ?
ಇಲ್ಲಿ ಪಶ್ಚಿಮ ಘಟ್ಟದ ನಾನಾ ಅಮೂಲ್ಯ ಮರಗಿಡ, ಸಸಿ ಬೆಳೆಸಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಆಯುರ್ವೇದ ಸಸ್ಯಗಳು, ವಿವಿಧ ಜಾತಿಯ ಗಿಡ, ಮರಗಳನ್ನು ಬೆಳೆಸಲಾಗುತ್ತಿದೆ. ಮಕ್ಕಳಿಗೆ ಆಟವಾಡಲು ಅನುಕೂಲವಾದ ಆಟಿಕೆಗಳ ಪಾರ್ಕ್, ಮರದಿಂದ ಮರಕ್ಕೆ ಜೋಡಿಸಿ ಸಂಚರಿಸಲು ಅನುಕೂಲವಾಗುವಂತೆ ಪಥ, ಪಕ್ಷಿ ವೀಕ್ಷಣಾ ಪಥ, ನೈಸರ್ಗಿಕ ಪಥ, ರಾಶಿವನ, ನಕ್ಷತ್ರವನ, ಆಯುರ್ವೇದ ಸಸ್ಯವನ ಇರಲಿದೆ. ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪ್ರವಾಸಿಗರಿಗೆ ಕುಳಿತುಕೊಳ್ಳಲು ಬೆಂಚ್‌ಗಳ ವ್ಯವಸ್ಥೆ, ವಾಯು ವಿಹಾರಕ್ಕೆ ರಸ್ತೆ ಹಾಗೂ ಅಲ್ಲಲ್ಲಿ ಪ್ರವಾಸಿಗರು ಕುಳಿತು ವಿಶ್ರಾಂತಿ ಪಡೆಯಲು ಅತ್ಯಂತ ಆಕರ್ಷಣೀಯ ಗೋಪುರ ಮಾದರಿಯ ಸಭಾಂಗಣ, ವೀಕ್ಷಣಾ ಗೋಪುರ, ಥಿಯೇಟರ್, ಮುಕ್ತ ಸಭಾಂಗಣ ಉದ್ಯಾನವನದಲ್ಲಿರುತ್ತದೆ. ಚಾಲನೆ ದೊರಕಿದೆವೃಕ್ಷೋದ್ಯಾನವನದ ಮೊದಲ ಹಂತದ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಸರಕಾರದಿಂದ ಬಿಡುಗಡೆಗೊಂಡ ಅನುದಾನದಲ್ಲಿ ಹಂತ-ಹಂತವಾಗಿ ಕೆಲಸ ನಡೆಸಿ ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಸುವ ಗುರಿ ಇರಿಸಿಕೊಳ್ಳಲಾಗಿದೆ. -ತ್ಯಾಗರಾಜ್,
ಆರ್‌ಎಫ್ಒ, ಸುಬ್ರಹ್ಮಣ್ಯ ಅರಣ್ಯ ವಲಯ ಬಾಲಕೃಷ್ಣ ಭೀಮಗುಳಿ