ಕಲಬುರಗಿ: ಬ್ರಿಟಿಷರು ಭಾರತ ಬಿಟ್ಟು ತೊಲಗಲು ಪ್ರಬಲ ಹೋರಾಟ ರೂಪಿಸಿ ದವರು ನೇತಾಜಿ ಸುಭಾಶ್ಚಂದ್ರ ಭೋಸ್ ಎಂದು ಡಾ| ಅಲ್ಲಮಪ್ರಭು ಗುಡ್ಡಾ ಹೇಳಿದರು.
ನಗರದ ದೊಡ್ಡಪ್ಪ ಅಪ್ಪ ವಸತಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನೇತಾಜಿ ಸುಬಾಶ್ಚಂದ್ರ ಬೋಸ್‌ರ 125ನೇ ಜಯಂತಿ ಉದ್ದೇಶಿಸಿ ಅವರು ಮಾತನಾಡಿದರು.
ಭೋಸ್ ಭಾರತ ಕಂಡ ಅಪ್ರತಿಮ ವೀರರಾಗಿದ್ದರು. ಇಂಗ್ಲೆಂಡ್‌ನ ವಿರೋಧಿ ರಾಷ್ಟ್ರಗಳ ಗೆಳೆತನ ಬೆಳೆಸಿ ಅವೆಲ್ಲವುಗಳನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಹೋರಾಡಿ ಭಾರತ ಸ್ವಾತಂತ್ರ್ಯಾಕ್ಕಾಗಿ ಶ್ರಮಿಸಿದರು. ಐಎನ್‌ಎ ಕೇಂದ್ರ ಕಚೇರಿಯನ್ನು ಸಿಂಗಾಪುರದಲ್ಲಿ ತೆರೆದರು. 30,000 ಭಾರತೀಯ ಸೈನಿಕರನ್ನು ಒಗ್ಗೂಡಿಸಿ ಶಸ್ತ್ರಸಜ್ಜಿತರನ್ನಾಗಿದರು. ಪರ್ಯಾಯ ಭಾರತ ಸರ್ಕಾರ ರಚಿಸಿ, ವಿದೇಶಿಗರು ಒಪ್ಪಿಕೊಳ್ಳುವಂತೆ ಮಾಡಿದ್ದರು. ಐಸಿಎಸ್ ಪಾಸಾಗಿದ್ದ ಸುಭಾಶ್ಚಂದ್ರ ಭೋಸ್ ಭಾರತೀಯ ಯುವಕರಿಗೆ ಮಾದರಿಯಾಗಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ವಿನೋದಕುಮಾರ ಪತಂಗೆ ಮಾತನಾಡಿ, ಯುವಕರು ಶ್ರಮಜೀವಿಗಳಾಗಿ ಉತ್ತಮ ವ್ಯಕ್ತಿತ್ವ ಹೊಂದಬೇಕು. ನಾಡು, ನುಡಿ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ವಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಅನ್ನಪೂರ್ಣ. ಖುಷಿ, ಈಶ್ವರಿ, ಶಿವಾನಿ ಸುಭಾಶ್ಚಂದ್ರ ಬೋಸ್ ಕುರಿತು ತಮ್ಮ ಅನುಭವ ಹಂಚಿ ಕೊಂಡರು. ಡಾ| ಆನಂದ ಸಿದ್ಧಾಮಣಿ ನಿರೂಪಿಸಿದರು. ಕಾಲೇಜಿನ ಸಿಬ್ಬಂದಿ ಇದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.