Advertisement

ಸುಬ್ಬು-ಶಾಲಿನಿ ಪ್ರಕರಣಂ-6

06:00 AM May 06, 2018 | |

ಎರಡು ವಾರದಿಂದ ಕಂಡಾಗಲೆಲ್ಲ ಚಡ್ಡಿ ದೋಸ್ತ್ ಸುಬ್ಬು ಕೇಳುತ್ತಿದ್ದ ಪ್ರಶ್ನೆ ಒಂದೇ, “”ಇವತ್ತು ಕಸದವನು ಬಂದಿದ್ನಾ?”
ಆ ಪ್ರಶ್ನೆಗೆ ನನ್ನ ಉತ್ತರ, “”ಬಂದಿಲ್ಲ. ಬರೋ ಲಕ್ಷಣಗಳೂ ಇಲ್ಲ.” ಉತ್ತರ ಹೇಳಿ ನನಗೆ ಸಾಕಾಗಿತ್ತು.
ಇಂದು ಅದು ತಾರಕಕ್ಕೇರಿತ್ತು. ಬಾಸು ಬಿಶ್ವಾಸು ಫ್ಯಾಕ್ಟ್ರೀಲಿ ಮೀಟಿಂಗು ಕರೆದಿದ್ದ. ಸುಬ್ಬು ಕೂಡ ಅಲ್ಲಿದ್ದ. ನಮ್ಮ ಮೆಷಿನ್ನೊಂದು ಕಸ್ಟಮರ್‌ ಸೈಟಲ್ಲಿ ಕೈಕಾಲು ಮುರಿದುಕೊಂಡಿದ್ದಕ್ಕೆ ಬಾಸು ಎಲ್ಲರ ಮೇಲೂ ಬುಸುಗುಟ್ಟುತ್ತಿದ್ದ. ಅಂಥ ಕೆಟ್ಟ ಸನ್ನಿವೇಶ‌ದಲ್ಲಿ ಸುಬ್ಬು ಮಾತನಾಡಲಾಗದೆ ತನ್ನ ಡೈರಿಯಲ್ಲಿ ಬರೆದು ತೋರಿಸಿದ. “”ಅದರಲ್ಲಿ ಕಸದವನು ಬಂದಿದ್ನಾ?” ನನಗೂ ರೇಗಿ ಹೋಯಿತು.

Advertisement

“”ತಲೆ ತುಂಬಾ ಕಸಾನೇ ತುಂಬಿಕೊಂಡಿದ್ದೀಯ. ಅದನ್ನ ಮೊದಲು ಆಚೆ ಹಾಕು” ಎಂದು ನನ್ನ ಡೈರಿಯಲ್ಲಿ ಬರೆದು ಉತ್ತರಿಸಿದೆ. 
“”ಏನ್ರೀ ಅದು? ಸ್ವಲ್ಪಾನೂ ಸೀರಿಯಸ್‌ನೆಸ್‌ ಇಲ್ಲ. ಪ್ರಾಡಕ್ಟ್ ರಿಜೆಕ್ಟ್ ಆಗದೆ ಇನ್ನೇನಾಗುತ್ತೆ?” ಬಾಸು ಬುಸ್‌ ಅಂದ.
“”ಸಾರಿ ಸರ್‌…” ನಾನು ಕ್ಷಮೆ ಕೋರಿದೆ. ಸುಬ್ಬು ಫೈಲು ಮರೆ ಮಾಡಿಕೊಂಡು ಕೈಯನ್ನೇ ರಿವಾಲ್ವರ್‌ ಥರ ಮಾಡಿಕೊಂಡು ಬಾಸ್‌ಗೆ ಗುಂಡು ಹಾರಿಸಿದ. ನಾನು ಉಗುಳು ನುಂಗಿದೆ. ಮೀಟಿಂಗು ಮುಗಿಯುತ್ತಲೇ ಅವನನ್ನು ತರಾಟೆಗೆ ತೆಗೆದುಕೊಳ್ಳಬೇಕೆಂದುಕೊಂಡೆ.

ಮೀಟಿಂಗು-ಫೈರಿಂಗು ಮುಗಿದು ಈಚೆ ಬರುವಷ್ಟರಲ್ಲಿ ಸುಬ್ಬು ಮಂಗಮಾಯ. ಡಿಪಾರ್ಟ್‌ ಮೆಂಟಿಗೆ ಫೋನಿಸಿದರೆ ಅರ್ಜೆಂಟು ಮನೆಗೆ ಹೋದರು ಎಂಬ ಮಾಹಿತಿ. ಏನಾಗಿರಬಹುದು. ಟೈಮಿನ್ನೂ ಹನ್ನೆರಡು. ಲಂಚ್‌ಗೆ ಇನ್ನೂ ಒಂದು ಗಂಟೆ ಬಾಕಿಯಿತ್ತು. ಸುಬ್ಬುಗೆ ಫೋನಾಯಿಸುವ‌ ಯೋಚನೆ ಬಂತು. ಆದರೆ ಅದು ಅಪಾಯ. ಸುಬ್ಬುಗೆ ತಲೆ ಕೊಟ್ಟರೆ ಇಂದಿನ ಕೆಲಸ ಚೊಂಬಾಗುತ್ತೆ. ಸಂಜೆ ವಿಚಾರಿಸಿಕೊಳ್ಳೋಣ ಎನಿಸಿತು. ಆದರೂ ನಿಂತೇಟಿಗೆ ಫ್ಯಾಕ್ಟ್ರಿ ಕೆಲಸ ಬಿಟ್ಟು ಮನೆಗೆ ಹೋಗುವಂಥ ಅರ್ಜೆಂಟು ಸುಬ್ಬುಗೆ ಏನಿದ್ದೀತು ಎಂಬ ಹುಳ ಕೊರೆಯಲಾರಂಭಿಸಿತು.

ಫ್ಯಾಕ್ಟ್ರಿಯ ಕೆಲಸ ಲಂಚ್‌ತನಕ ಫಾಸ್ಟಾಗಿರುತೆೆ¤. ಆ… ಊ… ಎನ್ನುವುದರಲ್ಲಿ ಲಂಚ್‌ ಟೈಮು ಬಂದಿತ್ತು. ಕ್ಯಾಂಟೀನಿಗೆ ಊಟಕ್ಕೆ ಹೊರಟಾಗ ವಿಶ್ವನ ಬಾಲ್ಡಿ ಬಾಸು ಬಿಶ್ವಾಸ್‌ ಫೋನು.
“”ಸುಬ್ಬೂನ ಪೊಲೀಸ್‌ ಅರೆಸ್ಟ್‌ ಮಾಡಿಕೊಂಡು ಹೋದ್ರಂತಲ್ಲ? ನಿಮಗೆ ಗೊತ್ತಾಯ್ತ?”
ಆ ವಿಲಕ್ಷಣ ಸುದ್ದಿಗೆ ಜೀವ ಬಾಯಿಗೆ ಬಂತು.

“”ಇಲ್ಲಾ ಸಾರ್‌… ಬೆಳಿಗ್ಗೆ ನನ್ನ ಜೊತೇಲೇ ಮೀಟಿಂಗೂ ಅಟೆಂಡ್‌ ಮಾಡಿದ. ಆಮೇಲೆ ಅವನು ಮನೆಗೆ ಹೋದಾಂತ ಗೊತ್ತಾಯ್ತು”
“”ಅರೆಸ್ಟ್‌ ಆಗೋ ಅಂತಾ ಮನುಷ್ಯನೇನ್ರೀ ನಿಮ್ಮ ಫ್ರೆಂಡು?” 
“”ಛೆ! ಅಂಥಾದ್ದೆಲ್ಲಾ ಮಾಡೋವನಲ್ಲ! ಏನಾಗಿದೆಯೋ ಗೊತ್ತಿಲ್ಲ?”
“”ಮೊದು ಹೋಗಿ ನೋಡ್ರೀ. ಹೆಲ್ಪ್ ಏನಾದ್ರೂ ಬೇಕಾಗಿರಬಹುದು”
“”ಸಾರ್‌, ಈ ಸುದ್ದಿ ನಿಮಗೆ ಹೇಳಿದ್ಯಾರು ಸಾರ್‌?”
“”ಫೋರ್ಮನ್‌ ಪಳನಿ. ಯಾರಾದ್ರೂ ಹೇಳಿರಲಿ ಮೊದ್ಲು ಹೋಗಿ ನೋಡಿ”
ಬಾಸ್‌ ಬಿಶ್ವಾಸ್‌ಗೂ ಸುಬ್ಬೂಗೂ ಎಣ್ಣೆ- ಸೀಗೇಕಾಯಿ. ಸದಾ ಬಿಶ್ವಾಸ್‌ನ ಬೆನ್ನ ಹಿಂದೆ ಬೈತಾ ಇರ್ತಾನೆ ಸುಬ್ಬು. ಇದು ಬಿಶ್ವಾಸ್‌ಗೂ ಗೊತ್ತು. ಆಗಾಗ್ಗೆ ಸುಬ್ಬೂನ ಬಿಶ್ವಾಸ್‌ ಅಟಕಾಯಿಸ್ತಿರ್ತಾನೆ. ಬಿಶ್ವಾಸ್‌ ಸುಳ್ಳು ಹೇಳಿರಬಹುದು ಅನ್ನೋ ಅನುಮಾನ ಬಂತು. ಕನ್‌ಫ‌ರ್ಮ್ ಮಾಡ್ಕೊಳ್ಳೋಕೆ ಪಳನಿಯನ್ನು ಹುಡುಕಿಕೊಂಡು ಹೋದೆ. 

Advertisement

“”ಸುಬ್ಬು ಅರೆಸ್ಟಾಗಿದ್ದು ನಿಮಗೆ ಹೇಗೆ ಗೊತ್ತಾಯ್ತು?” ಪಳನಿಯನ್ನು ಕೇಳಿದೆ.
“”ಇವತ್ತು ಫ್ಯಾಕ್ಟ್ರಿಗೆ ಲೇಟಾಗಿ ಬಂದೆ. ಬರ್ತಿದ್ದಾಗ ಸುಬ್ಬು ಮನೆಕೆಲಸದ ಹೆಂಗಸು ಸಿಕ್ಕಿ ನನ್ನ ಬೈಕು ನಿಲ್ಲಿಸಿ ಹೇಳಿದಳು. ತುಂಬ ಗಾಬರಿಯಿಂದ ಇದ್ಳು. ಯಾಕೆ? ಏನೂಂತ ಕೇಳಿದೆ. ಅದೆಲ್ಲಾ ಗೊತ್ತಿಲಾಂದ್ರು. ನಿಮಗೇನಾದ್ರೂ ಗೊತ್ತಾ ಸಾರ್‌? ಸುಬ್ಬು ಯಾಕೆ ಅರೆಸ್ಟಾಗಿದ್ದು?”
“”ಅದನ್ನೇ ಗೊತ್ಮಾಡ್ಕೊಳ್ಳೋಕೆ ಹೋಗ್ತಿದ್ದೀನಿ” ಅವಸರದಲ್ಲಿ ಫ್ಯಾಕ್ಟ್ರಿ ಗೇಟ್‌ ಹತ್ರ ಬಂದೆ. 
“”ಸುಬ್ಬು ಮನೆಗಾ ಸಾರ್‌? ಅವರನ್ನು ಪೊಲೀಸ್ನೋರು ಅರೆಸ್ಟ್‌ ಮಾಡಿದರಂತೆ? ಯಾಕೇಂತ ನಿಮಗೆ ಗೊತ್ತಾ?” ಸೆಕ್ಯೂರಿಟಿ ಮುತ್ತಯ್ಯ ಕೇಳಿದ ಪ್ರಶ್ನೆಗೆ ಬೆಚ್ಚಿದೆ.

ಸುಬ್ಬು ಅರೆಸ್ಟಾಗಿರೋ ವಿಷಯ ಇಡೀ ಫ್ಯಾಕ್ಟ್ರಿಗೇ ಗೊತ್ತಾದಂತಿತ್ತು. ಇನ್ನು ತಡಮಾಡಬಾರದು ಎಂದು ಸುಬ್ಬು ಮನೆಯತ್ತ ಬೈಕಲ್ಲಿ ಧಾವಿಸಿದೆ.
ಅರ್ಧ ದಾರಿಯಲ್ಲೇ ಅರ್ಧಾಂಗಿ ಫೋನು.
“”ವಿಷಯ ಗೊತ್ತಾಯ್ತ? ಸುಬ್ಬು ಅವರನ್ನ ಪೊಲೀಸ್‌ ಅರೆಸ್ಟ್‌ ಮಾಡಿಸ್ಕೊಂಡು ಹೋದ್ರಂತೆ” ಮನೆಯವಳ ಮಾತಿಗೆ ತಬ್ಬಿಬ್ಟಾದೆ!
“”ಏನು ಸುಬ್ಬು ಅರೆಸ್ಟ್‌ ಆದ್ನಾ? ಯಾತಕ್ಕೆ? ನಿನಗೆ ಹೇಗೆ ಗೊತ್ತಾಯ್ತು?”
“”ಸಾವಿತ್ರಿ ಬಂದು, ಅಯೊರನ್ನ ಪೊಲೀಸ್ನೋರು ಹಿಡ್ಕೊಂಡು ಹೋದ್ರೂಂತ ಹೇಳಿದಳು. ಪೊಲೀಸ್‌ ಕಂಡು ಹೆದ್ರಿಕೊಂಡು ಅವಳು ಮನೆಯಿಂದ ಈಚೆ ಬಂದಿºಟ್ಲಂತೆ” ಹೆಂಡತಿ ಹೇಳಿದಳು.

ಅಯ್ಯೋ ದೇವರೆ? ನಿಜವಾಗ್ಲೂ ಸುಬ್ಬು ಅರೆಸ್ಟಾದನೆ? ಫ್ಯಾಕ್ಟ್ರಿಯಿಂದ ಸುಬ್ಬು ಗಾಯಬ್‌ ಆದಾಗ್ಲೆ ಅಂದ್ಕೊಂಡೆ. ಸುಬ್ಬು ಮನೆಗೆ ಹೋಗಿ ನೋಡ್ಕೊಂಡು ಬರ್ತೀನಿ ಎಂದುಕೊಂಡು ಆತುರದಲ್ಲಿ ಸುಬ್ಬು ಮನೆ ತಲುಪಿದೆ. ಮನೆ ಬಾಗಿಲು ತೆರೆದೇ ಇತ್ತು. ಒಳಗೆ ಕಾಲಿಡುತ್ತಲೇ ಸುಬ್ಬು ದನಿ ಕೇಳಿತು.
“”ನೀನೊಬ್ಬ ಕಮ್ಮಿಯಾಗಿದ್ದೆ. ಬಾ. ನನ್ನ ಕತೆ ಕೇಳಿ ಆನಂದಪಡುವಿಯಂತೆ” ಎಂದಿನ ಸುಬ್ಬು ವ್ಯಂಗ್ಯ ಕೇಳಿಸಿತು. ಅಂದರೆ ಆಗಲೇ ಸುಬ್ಬೂನ ಪೊಲೀಸರು ರಿಲೀಸ್‌ ಮಾಡಿದರೆ?
ಡ್ರಾಯಿಂಗ್‌ ರೂಮಲ್ಲಿ ಸುಬ್ಬು ಶೇಷಶಯನನಂತೆ ಸೋಫಾದಲ್ಲಿ ಅಡ್ಡಾಗಿದ್ದ. ಇನ್ನೊಂದು ಸೋಫಾದಲ್ಲಿ ಶಾಲಿನಿ ಅತ್ತಿಗೆ. ಸುಬ್ಬು ಮುಖದಲ್ಲಿ ದಟ್ಟವಾದ ಚಿಂತೆ. ಶಾಲಿನಿ ಅತ್ತಿಗೆ ಮೊಬೈಲಲ್ಲಿ ವಾಟ್ಸಾಪ್ಪೋ, ಫೇಸುºಕ್ಕೋ ನೋಡುತ್ತಿದ್ದಂತಿತ್ತು. 

“”ಏನೋ? ಅದೇನೋ… ಪೊಲೀಸರೂಂತ” ತೊದಲುತ್ತ ಕೇಳಿದೆ.
“”ಸಾವಿತ್ರಿ ಹೇಳಿದಳಾ? ಇಡೀ ಬೀದಿಗೆಲ್ಲಾ ಟಾಂಟಾಂ ಹೊಡೆದಿದ್ದಾಳೆ. ಅವಳು ಸಿಕ್ಕರೆ ಕೊಂದು ಹಾಕ್ತೀನಿ” ಸುಬ್ಬು ರುದ್ರತಾಂಡವ ಆಡಿದ.
“”ನಿಜವಾಗ್ಲೂ ಏನಾಯ್ತು ? ಪೊಲೀಸ್‌ ಸುದ್ದಿ ಏನು?”
“”ಎಲ್ಲಾ ಹೇಳ್ತೀನಿ. ಇದನ್ನೇ ಕೊರೆಯೋಕೆ ನಿನಗೂ ಚಾನ್ಸ್‌ ಸಿಕ್ಕಿತಲ್ಲ. ಆನಂದಪಡು”
“”ಅತ್ತೆ ಮೇಲಿನ ಕೋಪ ಕೊತ್ತಿ ಮೇಲಂತೆ, ಅವರ ಮೇಲ್ಯಾಕೆ ತೀರಿಸ್ಕೊಳ್ತೀರಾ?” ಸುಬ್ಬು ಸಹಧರ್ಮಿಣಿ, ಸಹಕರ್ಮಿಣಿ ಶಾಲಿನಿ ಪತಿಯ ಕೋಪಶಮನ ಮಾಡಲೆತ್ನಿಸಿದಳು, “”ನಿಮ್ಮ ಬಿಪಿ ಪೆಟ್ರೋಲ್‌, ಡೀಸೆಲ್‌ ರೇಟ್‌ ತರಾ ರೈಸ್‌ ಆಗುತ್ತೆ. ಅದಕ್ಕೆ ನಾನೇ ಎಲ್ಲಾ ಹೇಳ್ತಿನಿ. ಕಾರ್ಪೊರೇಷನ್ನಿನವರು ಕಸ ವಿಲೇವಾರಿ ವ್ಯವಸ್ಥೆ ಮಾಡಿ, ಇನ್ನು ಕಸಾನ ಎಲ್ಲೆಲ್ಲೋ ಸುರೀಬಾರ್ದು. ಮನೆ ಮುಂದೆ ಡಬ್ಬದಲ್ಲಿಡಿ. ನಾವೇ ಕಸ ಕಲೆಕ್ಟ್ ಮಾಡ್ತೀವೀಂತ ಹೇಳಿದ್ರಲ್ಲ?” 

“”ಪ್ರಧಾನಿಗಳ ಸ್ವತ್ಛ ಭಾರತ್‌ ಅಭಿಯಾನದ ಅಡಾಪ್ಟೆàಶನ್ನು”
“”ಅದರ ಪ್ರಕಾರ ಎಲ್ಲಾ ಕಸಾನ ಡಬ್ಬದಲ್ಲಿಡೋಕೆ ಶುರು ಮಾಡಿದೊ… ಹದಿನೈದು ದಿನ ನಿಯತ್ತಾಗಿ ಕಸ ತುಂಬ್ಕೊಂಡು ಹೋದ್ರು. ಇನ್ಮುಂದೆ ನಮ್ಮದು ಸ್ವತ್ಛ ದೇಶ ಅನ್ನೋ ಖುಷಿಯಾಗಿತ್ತು. ಮಧ್ಯೆ ಹಬ್ಬ ಬಂತು. ಕಸ ತಗೊಂಡು ಹೋಗೋ ಹುಡುಗ್ರಿಗೆ ಭಕ್ಷೀಸು ಅಂತ ಬೀದಿಯವರೆಲ್ಲಾ ಐವತ್ತೈವತ್ತು ಕೊಟ್ಟೊ” ಶಾಲಿನಿ ಅತ್ತಿಗೆ ವಿವರಿಸಿದರು.
“”ನ‌ಮ್ಮ ಬೀದೀಲೂ” ವಾಲಗ ಊದಿದೆ.
“”ಬಾಯುಚ್ಕೊಂಡು ಕೇಳ್ಳೋ” ಗದರಿದ ಸುಬ್ಬು.
“”ಆಮೇಲೆ ಇದ್ದಕ್ಕಿದ್ದ ಹಾಗೆ ಕಸದ ವ್ಯವಸ್ಥೆ ಸ್ತಬ್ಧವಾಗೋಯ್ತು! ಏನೋ ಹಬ್ಬದ ಗುಂಗಿಂದ ಹುಡುಗರು ಈಚೆ ಬಂದಿಲ್ಲ ಅಂದ್ಕೊಂಡೊ. ಮೂರ್ನಾಲ್ಕು ದಿನ ಬಿಟ್ಟು ಬಂದು ಕಸ ತಗೊಂಡು ಹೋದರು. ಅಷ್ಟೊತ್ತಿಗೆ ಕಸದ ಡಬ್ಬ ತುಂಬಿ ತುಳುಕ್ತಿತ್ತು! ಅದಾದ್ಮೇಲೆ ವಾರಕ್ಕೊಂದು ದಿನ ಬರ್ತಿದ್ದರು. ಕೊನೆಗೆ ಬರೋದೇ ನಿಲ್ಲಿಸಿಬಿಟ್ರಾ”

“”ಅದು ಗೊತ್ತು. ಈ ಪೊಲೀಸ್‌ ಸುದ್ದಿ ಏನು? ಅವರು ನಿನ್ನನ್ನ ಅರೆಸ್ಟ್‌ ಮಾಡಿದ್ರಂತೆ? ” ಆತಂಕದಿಂದ ಕೇಳಿದೆ.
“”ಅದನ್ನೂ ಹೇಳ್ತೀನಿ. ಅಲ್ಲೀತನಕ ಉಸಿರು ಬಿಗಿಹಿಡ್ಕೊ. ಮನೆ ಮುಂದಿನ ಕಸದಿಂದ ಕಿರಿಕಿರಿಯಾಗ್ತಿತ್ತು. ರಾತ್ರಿ ನಿದ್ರೆ ಬರ್ತಿರಲಿಲ್ಲ. ಜೊತೆಗೆ ಡಬ್ಬ ತುಂಬಿ ತುಳುಕ್ತಿತ್ತು. ಒಂದರ ಜೊತೆಗೆ ಇನ್ನೊಂದು ಡಬ್ಬ ಇಟ್ಟೊ. ಅದೂ ತುಂಬಿತು. ಇದ್ರ ಜೊತೆಗೆ ಬೀದಿ ನಾಯಿಗಳು ಡಬ್ಬ ಬೀಳಿಸಿ ಕಸದಲ್ಲಿ ರಂಗೋಲಿ ಹಾಕ್ತಿ¨ªೊ. ಕೊನೆಗೆ ಬೇರೆ ದಾರಿ ಕಾಣದೆ ಮಾಮೂಲಿನಂತೆ ಕಸಾನ ಮೋರೀಲಿ ಸುರಿಯೋಕೆ‌ ಸಾವಿತ್ರಿಗೆ ಹೇಳಿದೊ. ದಾರೀಲಿ ಹೋಗೋರು ಸಾವಿತ್ರೀನ, ಬೀದಿ ಗಲೀಜು ಮಾಡ್ತಿದ್ದೀಯ, ಕಾರ್ಪೊರೇಶನ್ನಿಂದ ದಂಡ ಹಾಕಿಸ್ತೀವಿ ಅಂತ ಗಲಾಟೆ ಮಾಡಿದಾರೆ” ಸುಬ್ಬು ಮುಂದುವರಿಸಿದ.

“”ಹೌದೌದು! ಕಸದ್ದೇ ದೊಡ್ಡಾ ಸಮಸ್ಯೆ” ಲೊಚಗುಟ್ಟಿದೆ.
“”ಅಕಸ್ಮಾತ್‌ ನಿಮ್ಮ ಬೀದಿಗೆ ಕಸದವರು ಬಂದಿದಾರೇನೋಂತ ದಿನಾ ನಿನ್ನನ್ನ ಕೇಳ್ತಿದ್ದಿ. ನೀನೋ ಪರಮ ಚಂಡಾಲ. ಮೀಟಿಂಗಲ್ಲಿ ನಿನ್ನ ತಲೆ ತುಂಬಾ ಕಸ ತುಂಬಿಕೊಂಡಿದ್ದೀಯ- ಅಂತ ಹಂಗಿಸಿದೆ. ಇವತ್ತು ಕಾರ್ಪೊರೇಶನ್ನಿನವರು ಮನೆಗೆ ಬಂದು ಶಾಲಿನೀನ ಹೆದರಿಸಿ ಫೈನ್‌ ಹಾಕ್ತೀವೀಂದ್ರಂತೆ. ತಪ್ಪು ನಿಮುª, ನಾವ್ಯಾಕೆ ಫೈನ್‌ ಕಟೆºàಕೂಂತ ಶಾಲಿನಿ ದಬಾಯಿಸಿದಳಂತೆ. ಅದಕ್ಕೆ ಅವರು ವಾರ್ನಿಂಗ್‌ ಲೆಟರ್‌ ಕೊಟ್ಟು ಹೋದ್ರಂತೆ”
ಶಾಲಿನ ಅತ್ತಿಗೆ ಮುಂದುವರಿಸಿದರು, “”ಆಗ್ಲೆ ಇವರಿಗೆ ಫೋನು ಮಾಡಿ ಹೇಳಿದೆ. ಇವರು ಬಂದು ಕಾರ್ಪೊರೇಶನ್ನಿಗೆ ಪೋನ್‌ ಮಾಡಿ ಹಿಗ್ಗಾಮುಗ್ಗಾ ಬೈದುಬಿಟ್ಟರು. ಅದಕ್ಕೇ ಕಾರ್ಪೊರೇಶನ್ನಿನ ಒಂದಿಬ್ಬರು ಬಂದು ಸಾರಿ ಹೇಳಿ ಹೋದ್ರು. ಅವರಲ್ಲೊಬ್ಬ ಡ್ರೈವರ್‌. ಖಾಕಿ ಡ್ರೆಸ್ಸಲ್ಲಿದ್ದ. ಅವರಿಗೆ ಗೇಟಾಚೆ ನಾಯಿಗಳು ಅಂಗಳದಲ್ಲೆಲ್ಲ ಹರಡಿದ ಕಸ ತೋರಿಸೋಕೆ ಹೋದೆ. ಅವರನ್ನ ನೋಡ್ತಲೇ ಸಾವಿತ್ರಿ ಪೊಲೀಸೂಂತ ಹೆದರಿ ಮನೆಯಿಂದ ಓಡಿಹೋಗಿದಾಳೆ. ಹೋಗ್ತಾ ಸುಮ್ನೆ ಹೋದಳಾ? ಸಿಕ್ಕವರಿಗೆಲ್ಲಾ ಪೊಲೀಸಿನವರು ಬಂದು ಇವರನ್ನ ಹಿಡ್ಕೊಂಡು ಹೋಗಿದಾರೆ ಅಂತ ಹೇಳ್ಕೊಂಡು ಹೋಗಿದ್ದಾಳೆ” 
“”ಹೀಗೋ ಸಮಾಚಾರ? ಮಜಬೂತು ಕಲೈಮಾಕ್ಸ್‌ ಟುಸ್ಸಾಯ್ತಲ್ಲೋ?”
“”ಪಾಪಿ! ನಾನು ಅರೆಸ್ಟಾಗಿದ್ರೆ ನಿನಗೆ ಸಂತೋಷವಾಗ್ತಿತ್ತೇನೋ?” ಸುಬ್ಬು ರೇಗಿದ.
“”ಸಾರಿ ಸುಬ್ಬು. ಅಂಥಾದ್ದೇನೂ ಆಗಿಲ್ಲವಲ್ಲ? ಸಮಾಧಾನವಾಯ್ತು. ನಾನು ಫ್ಯಾಕ್ಟ್ರಿಗೋಗ್ತಿàನಿ” ಎನ್ನುತ್ತ ನಾನು ಆಚೆ ಜಾರಿದೆೆ.

ಎಸ್‌. ಜಿ. ಶಿವಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next