Advertisement
ಮಧೂರು ಪಟ್ಲ ಕುಂಜಾರು ಕೋಟೆಕಣಿ ನಸ್ರಿನ ಮಂಜಿಲ್‌ನ ಅಬ್ದುಲ್ ಖಾದರ್ ಕೆ.ಎಂ. ಯಾನೆ ಖಾದರ್(26) ಮತ್ತು ಕುದ್ರೆಪ್ಪಾಡಿ ನಿವಾಸಿ ಅಬ್ದುಲ್ ಅಸೀಸ್ ಟಿ. ಅಲಿಯಾಸ್ ಬಾವಾ ಅಸೀಸ್(23)ನನ್ನು ಬಂಧಿತರು. ಮನೆಯಿಂದ ಕಳವು ಮಾಡಿದ ಐದೂವರೆ ಪವನ್ ಚಿನ್ನಾಭರಣ ಮತ್ತು ಎರಡು ಕಾರುಗಳನ್ನು ಪತ್ತೆಹಚ್ಚಲಾಗಿದೆ.
ಕೊಲೆಯ ಹಿಂದೆ ದರೋಡೆ ಉದ್ದೇಶ ಮಾತ್ರ ಅಡಗಿದೆಯೇ ಅಥವಾ ಬೇರೆ ಏನೇದರೂ ಇತ್ತೇ ಎಂಬುದು ಇತರ ಇಬ್ಬರನ್ನು ಬಂಧಿಸಿದ ಬಳಿಕವಷ್ಟೇ ಸ್ಪಷ್ಟಗೊಳ್ಳಬಹುದೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ ತಂಡದಲ್ಲಿ ಹೊಸದುರ್ಗ ಡಿವೈಎಸ್‌ಪಿ ದಾಮೋದರನ್ ಕೆ., ಸಿ.ಐ.ಗಳಾದ ವಿ.ಕೆ.ವಿಶ್ವಂಭರನ್, ಸಿ.ಕೆ.ಸುನೀಲ್ ಕುಮಾರ್, ಅಬ್ದುಲ್ ರಹೀಂ, ಎಸ್.ಐ.ಗಳಾದ ವಿಪಿನ್ ಎಸ್., ಮಧುಮದನನ್ ಮತ್ತು ಇತರ ಅಧಿಕಾರಿಗಳಾದ ಜಯರಾಜ್, ನಾರಾಯಣನ್, ಬಾಲಕೃಷ್ಣನ್, ಬಾಲಚಂದ್ರನ್, ಮೋಹನನ್, ಲಕ್ಷ್ಮೀನಾರಾಯಣನ್, ಪ್ರಕಾಶನ್, ಅಬೂಬಕ್ಕರ್ ಕೆ., ಸುರೇಶ್, ಶಿವಕುಮಾರ್, ಶ್ರೀಜಿತ್, ಅಗಸ್ಟಿನ್ ತಂಬಿ, ಗೋಕುಲ್, ದೀಪಕ್, ಹರಿಪ್ರಸಾದ್ ಮೊದಲಾದವರಿದ್ದರು.
Related Articles
ಆರೋಪಿಗಳು ಜ. 6ರಂದು ಕಾಸರಗೋಡಿನಿಂದ ಬಾಡಿಗೆಗೆ ಪಡೆದ ಐ 20 ಆಸ್ಟ್ರ ಕಾರಿನಲ್ಲಿ ಸುಬೈದಾ ಅವರ ಮನೆ ಪಕ್ಕದ ಚೆಕ್ಕಿಪಳ್ಳದ ಉಂಬು ಅಲಿಯಾಸ್ ಮಹಮ್ಮದ್ ಕುಂಞಿ ಅವರು ನಡೆಸುತ್ತಿರುವ, ಕುವೈತ್‌ನ ಕುಂಞಿ ಮಹಮ್ಮದ್ ಅವರ ಮಾಲಕತ್ವದ ಕ್ವಾರ್ಟರ್ಸ್ ಅನ್ನು ಬಾಡಿಗೆಗೆ ಪಡೆಯುವ ಸೋಗಿನಲ್ಲಿ ಬಂದು ಸುಬೈದಾ ಅವರಲ್ಲಿ ಮಾತುಕತೆ ನಡೆಸಿದ್ದರು. ಅಂದು ಮನೆಯ ಪರಿಸರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದರು. ಮರುದಿನ, ಅಂದರೆ ಜ.7ರಂದು ಮಧ್ಯಾಹ್ನ 12.30ಕ್ಕೆ ಆರೋಪಿಗಳು ಸ್ವಿಫ್ಟ್ ಕಾರಿನಲ್ಲಿ ಸುಬೈದಾ ಮನೆಗೆ ಬಂದಿದ್ದು, ಆಗ ಬೀಗ ಹಾಕಲಾಗಿತ್ತು. ಆರೋಪಿಗಳು ಹಿಂದಿರುಗುತ್ತಿದ್ದಾಗ ಸುಬೈದಾ ಅವರು ಪೆರಿಯ ಪೇಟೆಯಿಂದ ಬಸ್ಸಿನಿಂದ ಇಳಿದು ಬರುತ್ತಿರುವುದನ್ನು ಕಂಡು ಆಕೆಯನ್ನು ಹಿಂಬಾಲಿಸಿ ಆಕೆಯ ಮನೆಗೆ ಬಂದು ಕುಡಿಯಲು ನೀರು ಕೇಳಿದರು. ಸುಬೈದಾ ಅಡುಗೆ ಕೋಣೆಗೆ ಹೋಗಿ ಶರ್ಬತ್ ತಯಾರಿಸಿ ಬರುತ್ತಿದ್ದ ವೇಳೆ ಆರೋಪಿಗಳು ಆಕೆಯ ಮೂಗಿಗೆ ಕ್ಲೋರೋಫೋಮ್‌ಯುಕ್ತ ಬಟ್ಟೆ ಬಿಗಿದು ಪ್ರಜ್ಞಾಹೀನಗೊಳಿಸಿ ಉಸಿರುಗಟ್ಟಿಸಿ ಕೊಲೆಗೈದರೆಂದು ಪೊಲೀಸರು ತಿಳಿಸಿದ್ದಾರೆ.
Advertisement