Advertisement

ಸ್ಟೈಲಿಶ್‌ ಪ್ಯಾಂಟುಗಳು

06:00 AM Jan 19, 2018 | |

ಮಹಿಳೆಯರ ಫ್ಯಾಷನ್‌ಪ್ರಿಯತೆಯ ಬಗೆಗೆ ಹೆಚ್ಚಿನ್ನೇನನ್ನೂ ಹೇಳಬೇಕಾಗಿಲ್ಲ. ತಾನು ಧರಿಸುವ ಪ್ರತಿಯೊಂದು ವಸ್ತುವೂ ಕೂಡ ಟ್ರೆಂಡಿಯಾಗಿರಬೇಕೆಂದು ಬಯಸುವುದು ಸಹಜವಾದುದಾಗಿದೆ. ಇತ್ತೀಚಿನ ಫ್ಯಾಷನ್‌ ರನ್ನಿಂಗ್‌ ಟ್ರೆಂಡ್‌ ಎಂದರೆ ಮಿಕ್ಸ್‌ ಅಂಡ್‌ ಮ್ಯಾಚ್‌. ಬಗೆ ಬಗೆಯ ಸ್ಟೈಲಿಶ್‌ ಕುರ್ತಾಗಳು, ಟ್ಯೂನಿಕ್ಸ್‌, ಅನಾರ್ಕಲಿ ಡ್ರೆಸ್ಸುಗಳು, ಟಾಕ್ಸ್‌ ಹೀಗೆ ಟಾಪ್‌ವೇರುಗಳಲ್ಲಿ ಹತ್ತು ಹಲವಾರು ಬಗೆಗಳನ್ನು ಕಾಣಬಹುದಾಗಿದೆ. ಕೇವಲ ಟಾಪ್‌ವೇರುಗಳಿಗಷ್ಟೇ ಪ್ರಾಮುಖ್ಯ ಕೊಟ್ಟರೆ ಸಾಲದು. ನಾವು ಧರಿಸುವ ಬಾಟಮ್‌ವೇರ್‌ ಅಥವಾ ಟ್ರಾಸರುಗಳ ಬಗ್ಗೆಯೂ ಮಾಹಿತಿ ತಿಳಿದಿರುವುದು ಅತ್ಯಂತ ಮುಖ್ಯವಾದುದಾಗಿದೆ. ಟಾಪ್‌ವೇರುಗಳಿಗೆ ಸೂಕ್ತವಾದ ಬಾಟಮ್‌ ವೇರ್‌ನ ಆಯ್ಕೆಯೂ ಅತ್ಯಂತ ಮಹತ್ವದ್ದಾಗಿರುತ್ತದೆ. ಇತ್ತೀಚೆಗಿನ ಟ್ರೆಂಡಿ ಟ್ರಾಸರುಗಳ ಬಗೆಗಳನ್ನು ಪ್ರಯೋಗಿಸಿ ಫ್ಯಾಷನೇಬಲ್‌ ಲುಕ್ಕನ್ನು ಪಡೆದುಕೊಳ್ಳುವುದರೊಂದಿಗೆ ಬದಲಾಗುತ್ತಿರುವ ಫ್ಯಾಷನ್‌ ಲೋಕಕ್ಕೆ ಅಪ್‌ಡೇಟ್‌ ಆಗುವುದು ಅತ್ಯಂತ ಮುಖ್ಯವಾದುದಾಗಿದೆ. ಕ್ಯಾಶುವಲ್‌ ವೇರ್‌ ಪ್ಯಾಂಟುಗಳು, ಟ್ರೆಡೀಶನಲ್‌ ಪ್ಯಾಂಟುಗಳು ಮತ್ತು ಫ್ಯೂಷನ್‌ ಎಂಬ ಬಗೆಗಳಲ್ಲಿ ಟ್ರಾಸರುಗಳು ದೊರೆಯುತ್ತವೆ.

Advertisement

1 ಪಟಿಯಾಲ ಪ್ಯಾಂಟುಗಳು: ಪಟಿಯಾಲ ಪ್ಯಾಂಟುಗಳು ಎವರ್‌ಗ್ರೀನ್‌ ಪ್ಯಾಂಟುಗಳು. ಧರಿಸಲು ಆರಾಮದಾಯಕ ಮತ್ತು ಸುಲಭವಾಗಿ ನಿರ್ವಹಣೆ ಮಾಡುವಂತಹುದಾಗಿದೆ. ಕ್ಯಾಷುವಲ್‌ ವೇರುಗಳಾಗಿ ಇವುಗಳನ್ನು ಬಳಸುವುದು ಸೂಕ್ತವಾದುದು. ಅಷ್ಟೇ ಅಲ್ಲದೆ ಪಂಜಾಬಿ ಸಲ್ವಾರ್‌ ಸೂಟುಗಳಲ್ಲಿ ಈ ಬಗೆಯ ಪಟಿಯಾಲ ಪ್ಯಾಂಟುಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಫ‌ುಲ್‌ 
ಪಟಿಯಾಲ ಮತ್ತು ಹಾಫ್ ಪಟಿಯಾಲ ಪ್ಯಾಂಟುಗಳು ಮಾರುಕಟ್ಟೆಯಲ್ಲಿ ಹಲವು ಮಾದರಿಗಳಲ್ಲಿ ದೊರೆಯುತ್ತವೆ. ಇವುಗಳೊಂದಿಗೆ ಟಾಪುಗಳು, ಟ್ಯೂನಿಕ್‌ಗಳು ಮತ್ತು ಶಾರ್ಟ್‌ ಕುರ್ತಿಗಳನ್ನು ಧರಿಸುವುದು ಉತ್ತಮವಾದ ಕಾಂಬಿನೇಶನ್‌ ಎನಿಸಿವೆ. 

2 ಧೋತಿ  ಪ್ಯಾಂಟುಗಳು: ಇವುಗಳು ಹೆಸರಿಗೆ ತಕ್ಕಂತೆ ಧೋತಿಯ ಲುಕ್ಕನ್ನು ಕೊಡುತ್ತವೆ. ಇವುಗಳೂ ಕೂಡ ಪಟಿಯಾಲ ಪ್ಯಾಂಟುಗಳಂತೆ ಫ್ಯೂಷನ್‌ ಲುಕ್ಕನ್ನು ನೀಡುವಂತಹ ಬಗೆಯಾಗಿದೆ. ಟಾಪುಗಳು, ಟ್ಯೂನಿಕ್‌ಗಳು ಮತ್ತು ಕುರ್ತಿಗಳೊಂದಿಗೆ ಧರಿಸಬಹುದು. ವಿವಿಧ ಬಟ್ಟೆಗಳಲ್ಲಿ ಮತ್ತು ಬಗೆ ಬಗೆಯ ಡಿಸೈನುಗಳಲ್ಲಿ ದೊರೆಯುವ ಇವುಗಳೂ ಕೂಡ ಎವರ್‌ಗ್ರೀನ್‌ ಸ್ಟೈಲ್‌ ಆಗಿವೆ. ಮತ್ತು ಕ್ಯಾಷುವಲ್‌ವೇರ್‌ಗೆ ಸೂಕ್ತವಾದುದಾಗಿದೆ. 

3 ಲೆಗ್ಗಿಂಗ್ಸ್‌: ಸದ್ಯದ ರನ್ನಿಂಗ್‌ ಟ್ರೆಂಡ್‌ ಇವಾಗಿದ್ದು  ದಿನದಿಂದ ದಿನಕ್ಕೆ ಹೊಸ ಪ್ರಯೋಗಗಳ ಫ‌ಲಶೃತಿಯಾಗಿ ಬಗೆ ಬಗೆಯ ಡಿಸೈನುಗಳಲ್ಲಿ ಮಾರುಕಟ್ಟೆಯಲ್ಲಿ ಬರುತ್ತವೆ. ಪ್ಲೆ„ನ್‌ ಮತ್ತು ಪ್ರಿಂಟೆಡ್‌ ಎರಡೂ ಬಗೆಗಳಲ್ಲಿ ದೊರೆಯುವ ಇವುಗಳು ಎಥಿಕ್‌ ಉಡುಗೆಗಳೊಂದಿಗೂ ಸೈ ಮತ್ತು ಟ್ಯೂನಿಕ್‌ಗಳಂತಹ ಸೆಮಿ ಎಥಿಕ್‌ ದಿರಿಸುಗಳೊಂದಿಗೂ ಕೂಡ ಸೈ ಎನಿಸಿಕೊಳ್ಳುತ್ತವೆ. ಜೀಬ್ರಾ ಪ್ರಿಂಟಿಂಗ್‌, ಲೆಪರ್ಡ್‌ ಪ್ರಿಂಟಿಂಗ್‌, ಫ್ಲೋರಲ್‌ ಪ್ರಿಂಟಿಂಗ್‌ ಹೀಗೆ ಹತ್ತು ಹಲವು ಬಗೆಗಳಲ್ಲಿ ದೊರೆಯುತ್ತವೆ. ಪ್ರಿಂಟಡ್‌ ಲೆಗ್ಗಿಂಗುಗಳೊಂದಿಗೆ ಪ್ಲೆ„ನ್‌ ಟಾಪ್‌ವೇರುಗಳು ಮ್ಯಾಚ್‌ ಆದರೆ ಪ್ಲೆ„ನ್‌ ಲೆಗ್ಗಿಂಗುಗಳಿಗೆ ಪ್ರಿಂಟೆಡ್‌ ಟಾಪ್‌ವೇರುಗಳು ಸುಂದರವಾಗಿ ಸಾಥ್‌ ಕೊಡುತ್ತವೆ.

4 ಪುಶ್‌ ಅಪ್‌ ಪ್ಯಾಂಟ್ಸ್‌: ಹೆಸರಿಗೆ ತಕ್ಕಂತೆ ಕಾಲಿನ ಆ್ಯಂಕಲ್‌ ಬಳಿಯಲ್ಲಿ ರಿಂಕಲ್ಸ… ಬರುವಂತಹ ಬಗೆಯ ಪ್ಯಾಂಟುಗಳಿವಾಗಿವೆ. ಇವುಗಳು ಅನಾರ್ಕಲಿ ಸಲ್ವಾರ್‌ನೊಂದಿಗೆ, ಎಥಿಕ್‌ ಕುರ್ತಾಗಳೊಂದಿಗೆ ಸುಂದರವಾಗಿ ಕಾಣುತ್ತವೆ. ಇವುಗಳು ಕಾಟನ್‌ಬಟ್ಟೆಗಳಿಗೆ ಹೆಚ್ಚು ಸೂಕ್ತವಾದುದಾಗಿದೆ. ಲೆಗ್ಗಿಂಗುಗಳ ಹಾವಳಿಗೆ ಸ್ವಲ್ಪಬದಿಗೊತ್ತಲ್ಪಟ್ಟ ಪ್ಯಾಂಟುಗಳಾಗಿದ್ದರೂ ಕೂಡ ಕೆಲವು ಆಯ್ದ ಸಲ್ವಾರುಗಳಿಗೆ ಈ ಬಗೆಯ ಪ್ಯಾಂಟುಗಳೇ ಹೆಚ್ಚು ಸೂಕ್ತವೆನಿಸುತ್ತವೆ.

Advertisement

1 ಜೆಗ್ಗಿಂಗ್ಸ್‌: ಲೆಗ್ಗಿಂಗುಗಳ ನಂತರ ಫ್ಯಾಷನ್‌ ಲೋಕಕ್ಕೆ ಬಂದ ಬಗೆಗಳು ಜೆಗ್ಗಿಂಗುಗಳು. ನೋಡಲು ಲೆಗ್ಗಿಂಗುಗಳಂತೆ ಕಾಣುವ ಇವುಗಳು ಜೀನ್ಸ್‌ ಪ್ಯಾಂಟುಗಳಂತೆ ದಪ್ಪವಾದ ಬಟ್ಟೆಗಳಿಂದ ತಯಾರಿಸಲ್ಪಟ್ಟಿರುತ್ತವೆ. ಲೆಗ್ಗಿಂಗುಗಳು ಸ್ಕಿನ್‌ ಟೈಟ್‌ ಮತ್ತು ತೆಳುವಾದ ಬಟ್ಟೆಯಿಂದಾಗಿರುವ ಕಾರಣದಿಂದ ಎಲ್ಲಾ ಬಗೆಯ ಟಾಪ್‌ ವೇರುಗಳೊಂದಿಗೆ ಒಪ್ಪುವುದಿಲ್ಲ. ಆದರೆ ಜೆಗ್ಗಿಂಗುಗಳು ಎಲ್ಲಾ ಬಗೆಯ ಟಾಪುಗಳೊಂದಿಗೂ ಸ್ಟೈಲಿಶ್‌ ಲುಕ್ಕನ್ನು ಕೊಡುತ್ತವೆ. ಬೇಕಾದ ಬಣ್ಣಗಳಲ್ಲಿ ದೊರೆಯುವುದರಿಂದ ಹಲವು ಬಗೆಯ ಟಾಪುಗಳೊಂದಿಗೆ ಮ್ಯಾಚ್‌ ಮಾಡಿಕೊಂಡು ಧರಿಸಬಹುದು. ಅಲ್ಲದೆ ಇವುಗಳಲ್ಲಿ ಪ್ರಿಂಟೆಡ್‌ ಮತ್ತು ಪ್ಲೆ„ನ್‌ ಎರಡೂ ಬಗೆಗಳೂ ಲಭಿಸುತ್ತವೆ.

6 ಜೀನ್ಸ್‌ ಪ್ಯಾಂಟ್ಸ…: ಜೀನ್ಸ್‌ ಅಥವಾ ಡೆನಿಮ್‌ ಪ್ಯಾಂಟುಗಳೂ ಕೂಡ ಎವರ್‌ಗ್ರೀನ್‌ ಪ್ಯಾಂಟುಗಳಾಗಿವೆ. ಕ್ಯಾಷುವಲ್‌ 
ವೇರುಗಳಾಗಿ ಹೆಚ್ಚಿನ ಜನರು ಬಳಸುವಂತಹ ಪ್ಯಾಂಟೂಗಳೇ ಈ ಡೆನಿಮ್‌ ಪ್ಯಾಂಟುಗಳು. ಇವುಗಳು ನೀಲಿಯ ಹಲವು ಶೇಡುಗಳಲ್ಲಿ ಕಾಣಸಿಗುತ್ತವೆ. ಅಷ್ಟೇ ಅಲ್ಲದೆ ಶೇಡೆಡ್‌ ಜೀನ್ಸ್‌,  ಜೀನ್ಸ್‌ ಆಂಕಲ್‌ ಲೆಂತ್‌ ಜೀನ್ಸ್‌, ಪುಶಪ್‌ ಜೀನ್ಸ್‌, ತ್ರೀಫೋರ್ಥ್ ಪ್ಯಾಂಟುಗಳು- ಹೀಗೆ ಹಲವು ಮಾದರಿಗಳಲ್ಲಿ ದೊರೆಯುತ್ತವೆ. ಸಾಮಾನ್ಯವಾಗಿ ಯಾರೂ ಕೂಡ ಧರಿಸಬಹುದಾದ ಈ ಪ್ಯಾಂಟುಗಳ ಧರಿಸುವಿಕೆಗೆ ಯಾವುದೇ ಮಿತಿಯಿರುವುದಿಲ್ಲ. ಕಲರ್‌ ಕಾಂಬಿನೇಶನನ್ನು ಗಮನಿಸಿಕೊಂಡು ಟಾಪುಗಳನ್ನು ಆಯ್ಕೆ ಮಾಡಿಕೊಳ್ಳ ಬಹುದು. ಅಷ್ಟೇ ಅಲ್ಲದೆ ಲಾಂಗ್‌ ಕುರ್ತಾಗಳು ಮತ್ತು ಮಾಕ್ಸಿ ಟ್ಯೂನಿಕ್‌ಗಳೊಂದಿಗೆ ಜೀನ್ಸುಗಳನ್ನು ಧರಿಸುವುದು ಸದ್ಯ ಹಾಟ್‌ ಟ್ರೆಂಡ್‌ ಆಗಿದೆ. ಜೀನ್ಸ್‌ಪ್ಯಾಂಟುಗಳ ತುದಿಗಳಲ್ಲಿ ಲೇಸುಗಳು ಅಥವಾ ಟ್ಯಾಸೆಲ್ಲುಗಳು- ಉಲ್ಲನ್‌ ಪಾಮ್‌  ಪಾಮ್‌ಗಳಿರುವ ಬಗೆಗಳೂ ದೊರೆಯುತ್ತವೆ. ಕಾಲೇಜ್‌ ಹುಡುಗಿಯರ  ಫೇವರೆಟ್‌ ದಿರಿಸಾಗಿ ಬಳಸಲ್ಪಡುತ್ತದೆ. ನಾನಾ ಬಗೆಯ ಟಾಪುಗಳು ಲಭ್ಯವಿರುವುದರಿಂದ ಜೀನ್ಸುಗಳೊಂದಿಗೆ ಧರಿಸಲು ಹಲವು ಆಯ್ಕೆಗಳಿರುತ್ತವೆ. ಎಷ್ಟೇ ಬಗೆಯ ಹೊಸ ಮಾದರಿಯ ಪ್ಯಾಂಟುಗಳ ನಡುವೆಯೂ ತನ್ನ ನವೀನತೆಯನ್ನು ಕಾಪಾಡಿಕೊಂಡು ಬಂದಿರುವ ಹೆಗ್ಗಳಿಕೆ ಈ ಜೀನ್ಸ್‌ ಪ್ಯಾಂಟುಗಳದ್ದು.

7 ಪಲಾಝೊ ಪ್ಯಾಂಟ್ಸ್‌: ಇವುಗಳು ಕೆಲ ಸಮಯದ ಹಿಂದೆ ಮಾರುಕಟ್ಟೆಗೆ ಬಂದು ಭಾರೀ ಸದ್ದು ಮಾಡುತ್ತಿರುವ ಸ್ಟೈಲಿಶ್‌ ಪ್ಯಾಂಟುಗಳಾಗಿವೆ. ಆದರೆ ಈ ಬಗೆಯ ಪ್ಯಾಂಟುಗಳ ಬಹಳ ಹಿಂದೆ ಇದ್ದಂತಹುದೇ ಸ್ಟೈಲ್‌ ಆಗಿದ್ದು ಪುನಃ ಫ್ಯಾಷನ್‌ ಲೋಕಕ್ಕೆ ತೆರೆದುಕೊಂಡಿರುವುದಾಗಿದೆ. ಇವುಗಳಲ್ಲಿ ಹಲವು ಮಾದರಿಗಳ ಪಲಾಝೊ ಪ್ಯಾಂಟುಗಳನ್ನು ಕಾಣಬಹುದು. ಹಲವು ವಿಧದ ಬಟ್ಟೆಗಳಲ್ಲಿ ದೊರೆಯುವ ಇವುಗಳು ಫ್ಲೇರ್ಡ್‌, ಸ್ಟೈಟ್‌  ಮತ್ತು  ಹಲವು ಬಣ್ಣಗಳಲ್ಲಿ ದೊರೆಯುವುದರಿಂದ ಆಯ್ಕೆಗೆ ವಿಫ‌ುಲ ಅವಕಾಶವಿದೆ. ಇವುಗಳೊಂದಿಗೆ ಎಲ್ಲಾ ಬಗೆಯ ಟಾಪುಗಳು, ಲಾಂಗ್‌ ಕುರ್ತಾಗಳು ಬಹಳ ಚೆನ್ನಾಗಿ ಮ್ಯಾಚ್‌ ಆಗುತ್ತವೆ. 

– ಪ್ರಭಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next