Advertisement

ಸ್ಟಟ್‌ಗಾರ್ಟ್‌ ಟೆನಿಸ್‌ : ಶರಪೋವಾಗೆ ಸೋಲು

03:58 PM Apr 30, 2017 | |

ನವದೆಹಲಿ: 15 ತಿಂಗಳ ನಿಷೇಧದ ನಂತರ ಅಂತಾರಾಷ್ಟ್ರೀಯ ಟೆನಿಸ್‌ಗೆ ಮರಳಿರುವ ರಷ್ಯಾದ ಮಾಜಿ ವಿಶ್ವ ನಂ.1 ಆಟಗಾರ್ತಿ ಮರಿಯಾ ಶರಪೋವಾ ಸ್ಟಟ್‌ಗಾರ್ಟ್‌ ಓಪನ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್  ಪಂದ್ಯದಲ್ಲಿ ಸೋತಿದ್ದಾರೆ.

Advertisement

ಮಹಿಳೆಯರ ಸಿಂಗಲ್ಸ್‌ನಲ್ಲಿ ಶರಪೋವಾ 6ಧಿ-3, 5-7, 4-6 ರಿಂದ ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲಾಡೆನೊವಿಚ್‌ ವಿರುದ್ಧ ಸೋಲುಂಡರು. ಮೊದಲ ಸೆಟ್‌ ಗೆದ್ದ ಶರಪೋವಾ ನಂತರ 2 ಸೆಟ್‌ ಕಳೆದುಕೊಂಡರು. ಇದಕ್ಕೂ ಮುನ್ನ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಶರಪೋವಾ 6-3, 6-4 ನೇರ ಸೆಟ್‌ನಲ್ಲಿಯೇ ವಿಶ್ವ ನಂ.73 ಶ್ರೇಯಾಂಕಿತ ಆಟಗಾರ್ತಿ ಆನೆಟ್‌ ಕೊಂಟಾವೈಟ್‌ ವಿರುದ್ಧ ಜಯಸಾಧಿಸಿದರು. ಪಂದ್ಯದ ಆರಂಭದಿಂದಲೇ ಶರಪೋವಾ ಭರ್ಜರಿ ಪ್ರದರ್ಶನ ನೀಡಿದರು. ಯಾವುದೇ ಹಂತದಲ್ಲಿ ಎದುರಾಳಿಗೆ ತಿರುಗೇಟು ನೀಡಲು ಅವಕಾಶ ನೀಡಲಿಲ್ಲ. ಉದ್ದೀಪನ ಮದ್ದು ಸೇವನೆಯಿಂದ 15 ತಿಂಗಳ ನಿಷೇಧ ಪೂರೈಸಿರುವ ಶರಪೋವಾಗೆ ಶರಪೋವಾಗೆ ಸೋಲು ಸ್ಟಟ್‌ಗಾರ್ಟ್‌ ಓಪನ್‌ಗೆ ವೈಲ್ಡ್‌ ಕಾರ್ಡ್‌ ಪ್ರವೇಶ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next