Advertisement
ಈ ಸಂದರ್ಭದಲ್ಲಿ ಮಟ್ಟುಗುಳ್ಳದ ಗದ್ದೆಗಿಳಿದ ವಿದ್ಯಾರ್ಥಿಗಳ ತಂಡವು ಮಾರ್ಗದರ್ಶಕರಲ್ಲಿ ಮತ್ತು ಬೆಳೆಗಾರರಲ್ಲಿ ಮಟ್ಟುಗುಳ್ಳವು ಪಡೆದಿರುವ ಜಿ.ಐ. ಮಾನ್ಯತೆ, ರಫ್ತಾಗುವ ಮಾರುಕಟ್ಟೆ, ಗ್ರಾಮೀಣ ಮಾರುಕಟ್ಟೆ, ಬ್ರಾಂಡಿಂಗ್, ಗ್ರೇಡಿಂಗ್, ಮಾರುಕಟ್ಟೆ ಸ್ಟ್ರಾ ಟಜಿ, ಬೀಜ ತಯಾರಿ, ಬಿತ್ತನೆ, ಗಿಡ ತಯಾರಿ, ಬೆಳೆಸುವ ವಿಧಾನ, ನಾಟಿ, ಮಾರುಕಟ್ಟೆಗೆ ದರ ನಿಗದಿ, ಪ್ರಮೋಶನ್, ಲೇಬಲಿಂಗ್, ಮಟ್ಟುಗುಳ್ಳಕ್ಕಿರುವ ಕಲ್ಚರಲ್ ಹೆರಿಟೇಜ್ ಸಹಿತ ಮಟ್ಟುಗುಳ್ಳದ ಬೆಳೆ ಮತ್ತು ಮಾರುಕಟ್ಟೆಯ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದರು.
ಗ್ರಾಮೀಣ ಭಾಗದ ಬೆಳೆಗಾರರ ಬಗ್ಗೆ ಅಧ್ಯಯನಕ್ಕೆ ಅವಕಾಶ ಲಭಿಸಿತು. ಬಹು ಬೇಡಿಕೆಯುಳ್ಳ ಮಟ್ಟುಗುಳ್ಳದ ಮಾರುಕಟ್ಟೆ ಪದ್ಧತಿ ಬಗ್ಗೆ, ಜಿಯೋಗ್ರಾಫಿಕಲ್ ಐಡೆಂಟಿμಕೇಶನ್ ಪಡೆದ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ಸ್ಥಳೀಯ ಮಾರುಕಟ್ಟೆ, ರಫ್ತು ಬಗ್ಗೆ ತಿಳಿದುಕೊಳ್ಳಲಾಯಿತು. ಪ್ರಾಡಕ್ಟ್, ಪ್ರೈಸ್, ಪ್ರೊಮೋಶನ್, ಪ್ಲೇಸಸ್ ಬಗ್ಗೆ ಸಮಗ್ರ ವಿಷಯಗಳನ್ನು ಅಧ್ಯಯನ ನಡೆಸಿದ್ದು, ಇಲ್ಲಿನ ಮಣ್ಣಿನ ಗುಣದಿಂದ ಪಡೆದಿರುವ ಸ್ವಾದದ ಬಗ್ಗೆ ಕುತೂಹಲಕಾರಿ ಅಂಶ ಗ್ರಹಿಸಿಕೊಂಡಿರುವೆನು.
–ತನುಶ್ರೀ ಶಿವರಾಮ್, ಬೆಂಗಳೂರು
Related Articles
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಮಟ್ಟುಗುಳ್ಳದ ಬಿತ್ತನೆ ಬೀಜದಿಂದ ಬೆಳೆ ಬೆಳೆಯುವ ಬಗ್ಗೆ ಮಾಹಿತಿ ಲಭ್ಯವಾಯಿತು. ಇಲ್ಲಿನ ಬೆಳೆಗಾರರ ಸಂಘದ ಮುಖಾಂತರ ನಡೆಸುವ ಮಾರುಕಟ್ಟೆ ವಿಧಾನದ ಬಗ್ಗೆ ಪರಿಶೀಲಿಸಲಾಯಿತು. ಬೆಳೆಗಾರರು ಸ್ವಂತವಾಗಿ ಅಭಿವೃದ್ಧಿ ಹೊಂದುವ ರೀತಿಯ ಬಗ್ಗೆ ಅಧ್ಯಯನ ನಡೆಸಲಾಯಿತು.
– ಆಕಾಶ್ ಎಂ. ನಥಾನಿ, ಉಡುಪಿ
Advertisement