ಶ್ರೀನಗರ: ಆನ್‌ಲೈನ್‌ನಲ್ಲಿ ತರಗತಿ ವೀಕ್ಷಿಸಲು ನೆಟ್‌ವರ್ಕ್ ಅಡ್ಡಿಯಾಗುತ್ತಿದೆ. ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲ ಎನ್ನುವುದು ಈಗ ವಿದ್ಯಾರ್ಥಿ ಸಮೂಹ ಮತ್ತು ಹೆತ್ತವರ ಅಳಲು. ಅದನ್ನೆಲ್ಲ ಮೆಟ್ಟಿ ನಿಂತು ಸಾಧಿಸಿದ ವಿದ್ಯಾರ್ಥಿಯೊಬ್ಬನಿದ್ದಾನೆ.
ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಅನ್ರೋಹ್ ಗ್ರಾಮದ ಮನ್‌ದೀಪ್ ಸಿಂಗ್ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಮೊಬೈಲ್ ಫೋನ್, ಆನ್‌ಲೈನ್ ಕ್ಲಾಸ್ ಇಲ್ಲದೆ ಶೇ.98.06 ಅಂಕಗಳನ್ನು ಪಡೆದುಕೊಂಡಿದ್ದಾನೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ವರ್ಷ ಶಾಲೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಆನ್‌ಲೈನ್ ಕ್ಲಾಸ್‌ಗೆ ಮೊಬೈಲ್, ಕಂಪ್ಯೂಟರ್ ವ್ಯವಸ್ಥೆ ಇರಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಅಧ್ಯಾಪಕರು ಮತ್ತು ಸ್ನೇಹಿತರ ಸಹಾಯದಿಂದ ಶ್ರದ್ಧೆಯಿಂದ ಕಲಿತೆ ಎಂದು “ಎಎನ್‌ಐ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾನೆ. ರೈತ ಕುಟುಂಬಕ್ಕೆ ಸೇರಿದವನಾಗಿರುವ ಆತ ಕೆಲವೊಮ್ಮೆ ಕೆಲಸವನ್ನೂ ಮಾಡುತ್ತಿದ್ದ. ತಂದೆ ಶ್ಯಾಮ್ ಸಿಂಗ್ ರೈತ ಮತ್ತು ತಾಯಿ ಸಂಧ್ಯಾ ದೇವಿ ಮನೆ ವಾರ್ತೆ ನೋಡಿಕೊಳ್ಳುತ್ತಿದ್ದಾರೆ. ಅಂದ ಹಾಗೆ ಆತ ಕಲಿತದ್ದು ಸರ್ಕಾರಿ ಶಾಲೆಯಲ್ಲಿ.
ಇದನ್ನೂ ಓದಿ : ಫಿಲಿಪ್ಪೀನ್ಸ್ ನಲ್ಲಿ ವಾಯುಪಡೆ ವಿಮಾನ ಪತನ: 31 ಯೋಧರು ಜೀವಂತ ದಹನ
ಪದವಿ ಪೂರ್ವ ತರಗತಿ ಪರೀಕ್ಷೆ ಬಳಿಕ ನೀಟ್‌ನಲ್ಲಿ ಉತ್ತೀರ್ಣನಾಗಿ ಎಂಬಿಬಿಎಸ್‌ಗೆ ಸೇರ್ಪಡೆಯಾಗಬೇಕು ಎಂಬ ಆಶಯ ಆತನದ್ದು. ಆತನ ಸಹೋದರ ಜಮ್ಮುವಿನಲ್ಲಿರುವ ಶೇರ್-ಇ-ಕಾಶ್ಮೀರ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕಲಿಯುತ್ತಿರುವ ಸಹೋದರ ಕೂಡ ನೆರವಾಗಿದ್ದ. ಎಲ್ಲರ ಸಹಾಯದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದಿದ್ದಾನ್ ಮನ್‌ದೀಪ್ ಸಿಂಗ್.