Advertisement

ವಿದ್ಯಾರ್ಥಿಗಳೇ ಓದಿನತ್ತ ಗಮನ ಹರಿಸಿ: ಪಾಳಾ

11:37 AM Dec 12, 2021 | Team Udayavani |

ಅಫಜಲಪುರ: ವಿದ್ಯಾರ್ಥಿ ಜೀವನ ಬಹಳ ಅಮೂಲ್ಯ ವಾದದ್ದು. ಹೀಗಾಗಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸಬೇಕೆಂದು ಸಿಪಿಐ ಜಗದೇವಪ್ಪ ಪಾಳಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Advertisement

ತಾಲೂಕಿನ ಗೊಬ್ಬೂರ (ಬಿ) ಗ್ರಾಮದ ಸಿದ್ಧಾರ್ಥ ಪದವಿ ಕಾಲೇಜಿನಲ್ಲಿ ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸದಾ ಕಠಿಣ ಅಭ್ಯಾಸ ಮಾಡಬೇಕು. ಶಿಕ್ಷಕರನ್ನು ಗೌರವಿಸಬೇಕು, ಪುಸ್ತಕಗಳನ್ನು ಪ್ರೀತಿಸಬೇಕು. ಅಂದಾಗ ಸಾಧನೆ ಸುಲಭವಾಗುತ್ತದೆ. ಇಲ್ಲದಿದ್ದರೆ ಬದುಕು ಬಹಳ ಕಷ್ಟಕರವಾಗುತ್ತದೆ ಎಂದರು.

ಚಿತ್ತಾಪುರ ಪದವಿ ಕಾಲೇಜಿನ ಪ್ರಾಚಾರ್ಯ ಡಾ| ವಿಜಯಕುಮಾರ ಸಾಲಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ ಬಹಳ ಅವಶ್ಯಕ. ಇವೆರಡನ್ನು ನಿಮ್ಮ ಸಂಗಾತಿಗಳನ್ನಾಗಿ ಮಾಡಿಕೊಂಡರೆ ಭವಿಷ್ಯದಲ್ಲಿ ಸೋಲು ಸುಳಿಯುವುದಿಲ್ಲ ಎಂದು ಹೇಳಿದರು.

ಹರ್ಷವರ್ಧನ ಪದವಿ ಕಾಲೇಜಿನ ಪ್ರಾಚಾರ್ಯ ಡಾ| ಸಂಗಣ್ಣ ಎಂ. ಸಿಂಗೆ ಆನೂರ, ಡಾ| ಪಂಡಿತ ಬಿ.ಕೆ ಮಾತನಾಡಿ ಇತ್ತೀಚೆಯ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್‌ ಗೀಳಿನಿಂದಾಗಿ ಹಾಳಾಗುತ್ತಿದ್ದಾರೆ. ಓದುವ ಸಮಯದಲ್ಲಿ ಮೊಬೈಲ್‌ ನಿಂದ ದೂರವಿರಿ. ತಂತ್ರಜ್ಞಾನಗಳನ್ನು ನಿಮ್ಮ ಜ್ಞಾನಕ್ಕೆ ಅನುಕೂಲವಾಗುವಂತೆ ಉಪಯೋಗಿಸಿಕೊಳ್ಳಿ. ಇಲ್ಲದಿದ್ದರೆ ಮೊಬೈಲ್‌ ನಿಮ್ಮ ಬದುಕನ್ನು ನಾಶ ಮಾಡುತ್ತದೆ ಎಂದು ಎಚ್ಚರಿಸಿದರು.

ಮಲ್ಲು ದೇವತ್ಕಲ್‌, ಶಿವಾನಂದ ಕೌದಿ, ದೇವಾನಂದ ಸಾವಳಗಿ, ಶಂಕರ ಪೋದ್ದಾರ, ಶರಣು ಅಲೆª, ಬಸವರಾಜ ನಿಂಬರಗಿ, ಪ್ರಭುಲಿಂಗ ಪಾಟೀಲ, ಮಹಾದೇವ ವಿಶ್ವಕರ್ಮ, ರಮಾ ಅರ್ಜುಣಗಿಕರ್‌, ಜ್ಯೋತಿ ಕಡಗಂಚಿ, ಜ್ಯೋತಿ ಕಾರಜೋಳ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next