ಬೇಲೂರು: ವಿದ್ಯಾರ್ಥಿಗಳಿಗೆ ಶಿಕ್ಷಣ ಎಷ್ಟು ಮುಖ್ಯವೋ, ವ್ಯವಹಾರಿಕ ಜ್ಞಾನವೂ ಮುಖ್ಯವಾಗಿದ್ದು, ಮಕ್ಕಳು ವಿದ್ಯೆಯೊಂದಿಗೆ ವ್ಯವಹಾರದ ಜ್ಞಾನ ಪಡೆಯಬೇಕು ಎಂದು ತಹಶೀಲ್ದಾರ್ ರಮೇಶ್ ಹೇಳಿದರು.
ಪಟ್ಟಣದ ನೆಹರು ನಗರದ ದಿವ್ಯಾ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಸೋಮವಾರ ದಿವ್ಯಾ ಸಾಂಪ್ರದಾಯಿಕ ಜಾತ್ರೆ, ಮಕ್ಕಳ ಆಹಾರ ಮೇಳ ಮತ್ತು ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಕಲಿಕೆ ನಿರಂತರ ವಾಗಿರಬೇಕು. ಇದರೊಂದಿಗೆ ತಿನ್ನುವ ಆಹಾರ ಪದ್ಧತಿಯನ್ನು ಆಯ್ಕೆ ಮಾಡಿ, ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಇದರೊಂದಿಗೆ ಮಕ್ಕಳು ವಿದ್ಯಾಭ್ಯಾಸದೊಂದಿಗೆ ಏನನ್ನಾದರೂ ಸಾಧಿಸಲು ಅವಕಾಶಗಳು ಅಗತ್ಯ. ಆದರೆ, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ತಾವು ಕಲಿಯುವ ವಿದ್ಯೆಯೊಂದಿಗೆ ವ್ಯವಹಾರಿಕ ಜ್ಞಾನವನ್ನು ಹೆಚ್ಚಿಸಿಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು. ಹಾಗಾದಾಗ ಮಾತ್ರ ಪೋಷಕರ ಮತ್ತು ಶಿಕ್ಷಕರ ಶ್ರಮಕ್ಕೆ ಬೆಲೆ ಸಿಗುತ್ತದೆ ಎಂದು ಹೇಳಿದರು.
ಶಿಕ್ಷಣ ಎಲ್ಲಾ ಕಡೆ ಅಗತ್ಯ: ಬಿಇಒ ಕೆ.ಪಿ.ನಾರಾ ಯಣ್ ಮಾತನಾಡಿ, ಶಿಕ್ಷಣ ಕೇವಲ ತರಗತಿಯಲ್ಲಿ ಮಾತ್ರ ಬಳಕೆಗೆ ಸೀಮಿತವಾ ಗಿರದೆ, ಎಲ್ಲ ಕ್ಷೇತ್ರದಲ್ಲೂ ಪಡೆಯುವಂತಾಗಿದೆ. ಅಲ್ಲದೆ, ಇಂತಹ ಆಹಾರ ಮೇಳ, ಸಂತೆಯಲ್ಲಿ ಮಕ್ಕಳು ಭಾಗವಹಿಸಿದ ಸಂದರ್ಭ ಅವರನ್ನು ಗಮನಿಸಿದರೆ ಅವರ ಕಣ್ಣುಗಳಲ್ಲಿ ಏನೋ ಒಂದು ರೀತಿಯ ಆಶಾಭಾವನೆ ಕಾಣುತ್ತಿದ್ದೇವೆ. ಇಲ್ಲಿ ಮಕ್ಕಳು ತಮಗೆ ಬೇಕಾದ ಇಷ್ಟವಾದ ಆಹಾರ ಪದಾರ್ಥಗಳನ್ನು ಇಟ್ಟು ದರ ನಿಗದಿ ಪಡಿಸಿ ವ್ಯಾಪಾ ರಕ್ಕೆ ಇಳಿದಿದ್ದಾರೆ. ಇದು ಮಕ್ಕಳಲ್ಲಿ ವಿದ್ಯೆಯೊಂದಿಗೆ ವ್ಯವಹಾರಿಕ ಜ್ಞಾನ ಹೆಚ್ಚಿಸಲು ಸಹಕಾರಿಯಾಗಿದೆ. ಇವರಿಗೆ ಪೋಷಕರು, ಶಿಕ್ಷಕ ವೃಂದ ಹೆಚ್ಚಿನದಾಗಿ ಪ್ರೋತ್ಸಾಹಿಸ ಬೇಕಿದೆ. ಅಲ್ಲದೆ, ಇಲಾಖೆಯಿಂದ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವುದಕ್ಕಾಗಿ ಪ್ರತಿಭಾ ಕಾರಂಜಿ, ಕಲೋತ್ಸವ, ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ವ್ಯಕ್ತಿತ್ವ ರೂಪಿಸಲಾಗುತ್ತಿದೆಂದು ಹೇಳಿದರು.
ದಿವ್ಯಾ ವಿದ್ಯಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಗೌಡೇ ಗೌಡ ಮಾತನಾಡಿ, ಶಾಲಾ ಮಕ್ಕಳಲ್ಲಿ ವಿದ್ಯೆಯೊಂದಿಗೆ ವ್ಯವಹಾರಿಕ ಜ್ಞಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಕಳೆದ ಐದಾರು ವರ್ಷಗಳಿಂದ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸಿ ಜ್ಞಾನ ಸಂಪಾದನೆಯೊಂದಿಗೆ ದೇಶಕ್ಕೆ ಕೊಡುಗೆ ನೀಡುವಂತಾಗಬೇಕು ಎಂದು ವಿವರಿಸಿದರು.
ದಿವ್ಯಾ ವಿದ್ಯಾ ಸಂಸ್ಥೆ ಕಾರ್ಯದರ್ಶಿ ವನಜಾಕ್ಷಿ, ಬಿ.ಆರ್.ಸಿ. ಶಿವಮರಿಯಪ್ಪ, ಇಸಿಒಗಳಾದ ರವಿಕುಮಾರ್, ಉಮೇಶ್, ಶಿವಪ್ಪ, ಮಂಜುನಾಥ್, ಗೋಪಾಲ್, ಪತ್ರಕರ್ತರ ಸಂಘದ ಅಧ್ಯಕ್ಷ ರಾಘವೇಂದ್ರ ಹೊಳ್ಳ, ಪಿ.ಎಸ್.ಐರಮೇಶ್,ಎ. ಎಸ್‌ಐ ನಾಗರಾಜ್, ಮುಖ್ಯ ಶಿಕ್ಷಕರಾದ ಚೇತನ್, ಉಮೇಶ್ ಇತರರು ಇದ್ದರು.