Advertisement
ಸಾಮಾಜಿಕ ಕಾಳಜಿ ಅಗತ್ಯಸಮಾಜದ ಬಗ್ಗೆ ವಿದ್ಯಾರ್ಥಿಗಳಿಗೆ ಬದ್ಧತೆ ಇರಬೇಕು. ಸಮಾಜದ ಒಗ್ಗಟ್ಟಿನ ಫಲವಾಗಿ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಕೇಂದ್ರೀಯ ವಿ.ವಿ. ವಿದ್ಯಾರ್ಥಿಗಳಿಗೆ ದೊರೆತಿದೆ. ಈ ಹಿನ್ನೆಲೆಯನ್ನು ಜಾಗೃತಿಯಿಂದ ಸದಾ ನೆನಪಿಸಿ ಕೊಳ್ಳಬೇಕು ಎಂದವರು ಹೇಳಿದರು.
ಕೇಂದ್ರೀಯ ವಿ.ವಿ.ಯಲ್ಲಿ ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣ ಹೊಂದಿದರಲ್ಲಿ ಶೇ. 65ರಷ್ಟು ಮಂದಿ ವಿದ್ಯಾರ್ಥಿನಿಯರಾಗಿದ್ದಾರೆ. ತೃಶ್ಶೂರ್ ಕೃಷಿ ವಿ.ವಿ.ಯಲ್ಲೂ ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣ ಹೊಂದಿರುವವರಲ್ಲಿ ಶೇ. 90 ಮಂದಿ ಮತ್ತು ಕೊಚ್ಚಿ ಮೀನುಗಾರಿಕೆ ವಿ.ವಿ.ಯಲ್ಲಿ ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣರಾಗಿರುವರಲ್ಲಿ ಶೇ. 100 ಮಂದಿ ವಿದ್ಯಾರ್ಥಿನಿಯರೇ ಆಗಿದ್ದಾರೆ. ಇದು ಶಿಕ್ಷಣ ರಂಗದ ಗಮನಾರ್ಹ ಮುನ್ನಡೆ. ಕೇವಲ 11 ವರ್ಷದ ವಯೋಮಾನ ಹೊಂದಿರುವ ಪೆರಿಯ ಕೇಂದ್ರೀಯ ವಿ.ವಿ.ಯಲ್ಲಿ ಇನ್ನೂ ಹೆಚ್ಚಿನ ಔನ್ನತ್ಯ ಗಳಿಕೆ ಸಾಧ್ಯವಿದೆ. ವಿದ್ಯಾರ್ಥಿಗಳ, ಹೆತ್ತವರ ಜೊತೆಗೆ ಸಾರ್ವಜನಿಕ ಬೆಂಬಲವೂ ಈ ನಿಟ್ಟಿನಲ್ಲಿ ಅಗತ್ಯ ಎಂದು ರಾಜ್ಯಪಾಲರು ಹೇಳಿದರು. ಸಂಶೋಧನೆ ಪೂರ್ಣಗೊಳಿಸಿದ ಪಿಎಚ್.ಡಿ.ಯ, ಸ್ನಾತಕೋತ್ತರ ಪದವಿ, ಪದವಿಯ 610 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಿತು. ವಿ.ವಿ. ಕುಲಪತಿ ಪ್ರೊ| ಎಸ್.ವಿ. ಶೇಷಗಿರಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಉಪಕುಲಪತಿ ಡಾ| ಕೆ. ಜಯಪ್ರಸಾದ್, ರಿಜಿಸ್ಟ್ರಾರ್ ಡಾ| ಎ. ರಾಧಾಕೃಷ್ಣನ್ ನಾಯರ್, ಹಣಕಾಸು ಅಧಿಕಾರಿ ಡಾ| ಬಿ.ಆರ್. ಪ್ರಸನ್ನ ಕುಮಾರ್ ಉಪಸ್ಥಿತರಿ ದ್ದರು. ಡಾ| ಜಿ. ಗೋಪಕುಮಾರ್ ಸ್ವಾಗತಿ ಸಿದರು. ಪರೀಕ್ಷೆ ನಿಯಂತ್ರಣ ಅಧಿಕಾರಿ ಡಾ| ಎಂ. ಮುರಳೀಧರನ್ ನಂಬ್ಯಾರ್ ವಂದಿಸಿದರು.