Advertisement
ಕೊರೊನಾವನ್ನು ದೂರುವುದಕ್ಕೂ ಒಂದು ಮಿತಿಯಿದೆ ಅಲ್ಲವೇ? ಆದರೆ ಶಿಕ್ಷಕರು ಅನುಭವಿಸುತ್ತಿರುವ ಇತ್ತೀಚಿನ ಶೈಕ್ಷಣಿಕ ಸವಾಲುಗಳಿಗೆ ಕೊರೊನಾವೇ ಕಾರಣ. ಎರಡು ವರ್ಷಗಳ ಕಾಲ ಶಾಲೆಯಿಂದ ದೂರವಿದ್ದು ಮನೆಯಲ್ಲೇ ಆನ್‌ಲೈನ್ ಮೂಲಕ ಪಾಠ ಕೇಳಿದ ವಿದ್ಯಾರ್ಥಿಗಳು ಲಾಕ್‌ಡೌನ್ ತೆರವಾದರೂ ಮತ್ತೆಂದೂ ಆಫ್ಲೈನ್ ಆಗಲೇ ಇಲ್ಲ. ತಡರಾತ್ರಿಯವರೆಗೂ ಬೆಳಗಿನ ಜಾವದ ವರೆಗೂ ಆನ್‌ಲೈನ್‌ನಲ್ಲೇ ಇರುವ ವಿದ್ಯಾರ್ಥಿಗಳು ಅಂತ ರ್ಜಾಲದ ಅನಂತ ಸಾಧ್ಯತೆಗಳ ಬಗ್ಗೆ ಸಂಶೋಧನೆ ನಡೆಸಿ ದರು. ಹಳ್ಳಿ ಮೂಲೆಯ ಮಕ್ಕಳೂ ಕೂಡಾ ಸ್ನಾಪ್ ಚ್ಯಾಟ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಹೀಗೆ ತಾವೆಂದೂ ಕಂಡು ಕೇಳರಿಯದ ಜಾಲತಾಣಗಳ ಮಾಯಾವಲಯದಲ್ಲಿ ವಿಹರಿಸಲು ಪ್ರಾರಂಭಿಸಿದ್ದಾರೆ.
Related Articles
Advertisement
ಇಲ್ಲಿ ತಪ್ಪಿತಸ್ಥರು ಯಾರು? ವಿದ್ಯಾರ್ಥಿಗಳು ಅಂತರ್ಜಾಲದ ದಾಸರಾಗುವುದಕ್ಕೆ ನಿಜವಾಗಿಯೂ ಹೊಣೆಗಾರರು ಯಾರು? ಆನ್‌ಲೈನ್ ಪಾಠ ಮಾಡುವ ಮೂಲಕ ಮೊಬೈಲ್ ಬಳಕೆಗೆ ನಾಂದಿ ಹಾಡಿದ ಶಿಕ್ಷಕರೇ? ಶಿಕ್ಷಕರು ತಮಗೆ ಗೊತ್ತಿಲ್ಲದ ಆ್ಯಪ್‌ಗ್ಳನ್ನು ಹುಡುಕಿ, ಹೆಣಗಾಡಿ ಆನ್‌ಲೈನ್ ಪಾಠ ಮಾಡುವ ಅನಿವಾರ್ಯತೆ ತಂದಿತ್ತ ಕೊರೊನಾವೇ? ಆನ್‌ಲೈನ್ ಶಿಕ್ಷಣ ಮುಗಿದ ಅನಂತರವೂ ಮಕ್ಕಳಿಗೆ ಬೇಕಾಬಿಟ್ಟಿ ಮೊಬೈಲ್ ಕೊಟ್ಟು, ಕಾಲಕಾಲಕ್ಕೆ ನೆಟ್ ಪ್ಯಾಕ್ ಹಾಕಿಕೊಟ್ಟು, ಮಕ್ಕಳ ಮೇಲೆ ಅತಿಯಾದ ಮೋಹ, ಅಪರಿಮಿತ ನಂಬಿಕೆ ಹೊಂದಿರುವ ಹೆತ್ತವರೇ?
ಹಲವು ಮಕ್ಕಳಿಗೆ ಮೊಬೈಲ್ ಫೋನ್ ಬಳಕೆ ಚಟವಾಗಿ ಬಿಟ್ಟಿದೆ. ಪಬ್ ಜಿ ಮುಂತಾದ ಆಟಗಳಿಗೆ ದಾಸರಾದ ವರು, ತಮಿಷ್ಟದ ಯೂಟ್ಯೂಬ್ ಚಾನೆಲ್‌ಗಳಿಗೆ ಚಂದಾದಾರರಾಗಿಕೊಂಡು ಅಪ್‌ಲೋಡ್ ಆಗುವ ಪ್ರತೀ ವೀಡಿಯೋವನ್ನೂ ನೋಡುವವರು, ಫೇಸ್‌ಬುಕ್, ವಾಟ್ಸ್ ಆ್ಯಪ್ ಇನ್‌ಸ್ಟಾಗ್ರಾಂ ಮುಂತಾದವುಗಳಲ್ಲಿ ಕಂಡು, ಕೇಳರಿಯದವರೊಂದಿಗೆ ಚಾಟಿಂಗ್‌ನಲ್ಲಿ ಕಳೆಯುವವರು, ತಡರಾತ್ರಿಯವರೆಗೆ ಯಾವ್ಯಾವುದೋ ಜಾಲತಾಣದಲ್ಲಿ ಏನೇನನ್ನೋ ಸರ್ಚ್ ಮಾಡುವವರು ಕಲಿಕೆಯಲ್ಲಿ ಗಮನ ಕೇಂದ್ರೀಕರಿಸುವುದಾದರೂ ಹೇಗೆ?
ಹೆತ್ತವರ ಜವಾಬ್ದಾರಿ: ಶಿಸ್ತಿನ ವ್ಯವಸ್ಥೆ ಇರುವ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಾಲೆಗೆ ಫೋನ್ ತರುವುದಿಲ್ಲ. ಆದರೆ ಮನೆಯಲ್ಲಿ ಅವರು ಫೋನ್ ಬಳಸದಂತೆ ತಡೆಯುವುದು ಶಿಕ್ಷಕರ ಪರಿಧಿಗೆ ಮೀರಿದ್ದು. ಇಲ್ಲಿ ಎಚ್ಚೆತ್ತುಕೊಳ್ಳಬೇಕಾದವರು ಹೆತ್ತವರು. ಮೊದಲನೆ ಯದಾಗಿ ಹೆತ್ತ ವರಿಗೆ ಮಕ್ಕಳೊಂದಿಗೆ ಆಪ್ತ ಸಂಬಂಧ ಹೊಂದಿರಬೇಕು. ಮಕ್ಕಳೊಂದಿಗೆ ಸ್ವಲ್ಪ ಹೊತ್ತಾದರೂ ಮುಕ್ತವಾಗಿ ಮಾತನಾಡಬೇಕು. ಮಕ್ಕಳು ತಮ್ಮೊಂದಿಗೆ ಎಲ್ಲ ವನ್ನೂ ಹಂಚಿಕೊಳ್ಳುವ ಸ್ವಾತಂತ್ರ್ಯ ಹಾಗೂ ಪ್ರೀತಿ ಅವರಿಗೆ ಕೊಡ ಬೇಕು. ಒಮ್ಮೆಲೇ ಫೋನ್ ಕಿತ್ತುಕೊಂಡು ಇಡು ವುದು, ಹೊಡೆದು, ಬಡಿದು ಬುದ್ಧಿ ಹೇಳುವುದು ಅಷ್ಟು ಉತ್ತಮವಾದ ಕ್ರಮವಲ್ಲ. ಮಕ್ಕಳಿಗೆ ಲೈಂಗಿಕ ಶಿಕ್ಷಣ ಅಗತ್ಯವೆಂದು ಹೇಳುವಂತೆ ಸ್ಮಾರ್ಟ್‌ಫೋನ್ ಬಳಕೆಯ ಕುರಿತ ಶಿಕ್ಷಣವೂ ಅತ್ಯಗತ್ಯ. ಹೈಸ್ಕೂಲ್ ಪ್ರವೇಶಿಸುವ ಮುನ್ನವೇ ಸ್ಮಾರ್ಟ್‌ಫೋನ್‌ನಲ್ಲಿ ಅವಿತಿರುವ ಅಪಾಯಗಳ ಕುರಿತ ಜಾಗೃತಿಯನ್ನು ಮಕ್ಕಳಲ್ಲಿ ಮೂಡಿಸಬೇಕು. ಹೆತ್ತವರ ಸಮ್ಮುಖದಲ್ಲಿ ಮಾತ್ರವೇ ಮೊಬೈಲ್ ಬಳಸಲು ಅವಕಾಶ ಕೊಡಬೇಕು. ಮಕ್ಕಳು ಜಾಲತಾಣಗಳಲ್ಲಿ ಖಾತೆ ತೆರೆಯದಂತೆ ಎಚ್ಚರ ವಹಿಸಬೇಕು. ಮಕ್ಕಳಿಗೆ ಸ್ವಂತವಾಗಿ ಸ್ಮಾರ್ಟ್‌ಫೋನ್ ಕೊಡಿ ಸದಿ ರುವುದು ಉತ್ತಮ. ಈಗಾಗಲೇ ಇದ್ದರೆ ಹೆತ್ತವರಿಗೆ ತಿಳಿಯದ ಪಾಸ್‌ವರ್ಡ್ ಹಾಕಲು ಅವಕಾಶ ಕೊಡದಿರಿ. ಫೋನ್ ಬಳಕೆಗೆ ದಿನದಲ್ಲಿ ಒಂದು ನಿರ್ದಿಷ್ಟ ಅವಧಿ ನಿಶ್ಚ ಯಿಸಿ. ಮಕ್ಕಳು ಮಲಗಲು ಹೋಗುವಾಗ ಫೋನ್ ಹೆತ್ತ ವರಿಗೆ ಒಪ್ಪಿಸಿ ಹೋಗಲು ನಿಷ್ಕರ್ಷಿಸಿ. ನಿಮ್ಮ ಮಕ್ಕಳ ಆನ್‌ಲೈನ್ ಗೆಳೆಯ-ಗೆಳತಿಯರ ಕುರಿತು ತಿಳಿದುಕೊಳ್ಳಿ. (ಅಂತಹ ಗೆಳೆಯರು ಇಲ್ಲದಿರುವುದೇ ಒಳಿತು.) ಮಕ್ಕಳು ಯಾವತ್ತೂ ರಹಸ್ಯ ಫೋನ್ ಕಾಲ್‌ಗಳಲ್ಲಿ ಮುಳುಗಲು ಆಸ್ಪದ ಕೊಡದಿರಿ. ಮಕ್ಕಳು ಕಲಿಕೆಯಲ್ಲಿ ನಿರತರಾಗಿದ್ದಾರೆಂದು ಅವರಷ್ಟಕ್ಕೆ ಬಿಡದೇ ಒಮ್ಮೊಮ್ಮೆ ಅವರ ಅಭ್ಯಾಸ ಕೊಠಡಿಗೆ ಹೋಗಿ ಪರೀಕ್ಷಿಸಿ. ಮಕ್ಕಳಿಗೆ ಬುದ್ಧಿ ಹೇಳಿದರೆ, ಅವರ ತಪ್ಪನ್ನು ತಿದ್ದಿದರೆ ಅವರಿಗೆ ನೋವಾಗುತ್ತದೆಂದು ಸುಮ್ಮ ನಿ ದ್ದರೆ ಮುಂದೊಂದು ದಿನ ಅವರ ಬದುಕು ಹಾಳಾಗಿ ಅವರೂ ಹೆತ್ತವರೂ ನೋವನುಭವಿಸುವ ಸಂದರ್ಭ ಬರಬಹುದು. ಪಾಠ ಬೋಧನೆ ಮಾಡುವುದಷ್ಟೇ ಅಲ್ಲ, ಸ್ಮಾರ್ಟ್ ಫೋನ್ ನೊಳಗೆ ಮಾನಸಿಕವಾಗಿ ಬಂಧಿಯಾಗಿರುವ ಮಕ್ಕ ಳನ್ನು ಬಿಡುಗಡೆ ಗೊಳಿಸಿ ತರಗತಿಯಲ್ಲಿ ಮುಕ್ತ ಮನಸ್ಸಿ ನೊಂದಿಗೆ ಕುಳಿತು ಕಲಿಕೆಯಲ್ಲಿ ನಿರತರಾಗುವಂತೆ ಮಾಡುವ ಸಂಕೀರ್ಣ ಜವಾಬ್ದಾರಿಯೂ ಶಿಕ್ಷಕರ ಹೆಗಲೇ ರಿದೆ. ಶಿಕ್ಷಕರಿಂದಷ್ಟೇ ವಿದ್ಯಾರ್ಥಿ ಗಳನ್ನು ಈ ಚಟದಿಂದ ಬಿಡಿಸುವುದು ಅಸಾಧ್ಯ ಎನ್ನುವ ಸ್ಥಿತಿ ಕೆಲವು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಇರುವುದರಿಂದ ತಜ್ಞ, ವೃತ್ತಿಪರ ಆಪ್ತಸಮಾ ಲೋಚಕರ ಅಗತ್ಯವೂ ಬೇಕಾಗಬಹುದು.
– ಜೆಸ್ಸಿ ಪಿ.ವಿ., ಪುತ್ತೂರು