Advertisement

ವಿದ್ಯಾರ್ಥಿಗಳಿಗೆ ಅಮೆರಿಕ ಎಂದರೆ ನಡುಕ!

10:37 AM Feb 27, 2017 | Team Udayavani |

ವಾಷಿಂಗ್ಟನ್‌/ನವದೆಹಲಿ: ಕನ್ಸಾಸ್‌ನಲ್ಲಿ ನಡೆದ ಭಾರತೀಯ ಟೆಕ್ಕಿಯ ಕೊಲೆಯು ಅಮೆರಿಕದ ಕನಸು ಕಾಣುತ್ತಿದ್ದ ಭಾರತೀಯ ಮನಸ್ಸುಗಳಲ್ಲಿ ನಡುಕ ಹುಟ್ಟಿಸಿದೆ. ಡೊನಾಲ್ಡ್‌ ಟ್ರಂಪ್‌ ಆಡಳಿತ ಬಂದಾಗಿನಿಂದ ಜನಾಂಗೀಯ ದ್ವೇಷ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕಳವಳಗೊಂಡಿರುವ ಅನೇಕರು, ಅಮೆರಿಕಕ್ಕೆ ಹೋಗಿ ಉನ್ನತ ವಿದ್ಯಾಭ್ಯಾಸ ಮಾಡುವ ಆಸೆಯನ್ನು ಕೈಬಿಟ್ಟಿದ್ದಾರೆ. 

Advertisement

“ನನಗೀಗ ಅಮೆರಿಕಕ್ಕೆ ಹೋಗಲು ಭಯವಾಗುತ್ತಿದೆ’ ಎಂದು ದೆಹಲಿ ಐಐಟಿ ವಿದ್ಯಾರ್ಥಿಯೊಬ್ಬರು ಹೇಳಿದರೆ, ಇನ್ನು ಕೆಲವು ವಿದ್ಯಾರ್ಥಿಗಳು, “ನಾವೀಗ ಅಮೆರಿಕದ ಯೋಜನೆ ಕೈಬಿಟ್ಟು, ಕೆನಡಾ ಅಥವಾ ಆಸ್ಟ್ರೇಲಿಯಾದಲ್ಲಿ ಸ್ನಾತಕೋತ್ತರ ಕೋರ್ಸ್‌ ಮಾಡಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ. ಇನ್ನು ಕೆಲವರು ಸ್ವಲ್ಪ ಸಮಯದಲ್ಲೇ ಎಲ್ಲವೂ ಸರಿಹೋಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. 

ಟ್ರಂಪ್‌- ಸರ್ನಾ ಭೇಟಿ: ಅಮೆರಿಕದಲ್ಲಿನ ಭಾರತದ ರಾಯ­ಭಾರಿ ನವತೇಜ್‌ ಸರ್ನಾ ಅವರು ಅಧ್ಯಕ್ಷ ಟ್ರಂಪ್‌ರನ್ನು ಭೇಟಿ­ಯಾ­ಗಿದ್ದಾರೆ. ಟ್ರಂಪ್‌ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಭೇಟಿಯಿದು. ಸರ್ನಾ ಸೇರಿದಂತೆ ಎಲ್ಲ ಹೊಸ ವಿದೇಶಿ ರಾಯ­ಭಾರಿಗಳನ್ನು ಭೇಟಿಯಾಗಿ ಟ್ರಂಪ್‌ ಮಾತುಕತೆ ನಡೆಸಿದ್ದಾರೆ.

ಡಿನ್ನರ್‌ಗೆ ಬರಲ್ಲ ಎಂದ ಟ್ರಂಪ್‌: ಅಧಿಕಾರ ವಹಿಸಿಕೊಂಡಾಗಿ­ನಿಂದಲೂ ಟ್ರಂಪ್‌ಗ್ೂ ಮಾಧ್ಯಮದವರಿಗೂ ಆಗಿ ಬರುತ್ತಿಲ್ಲ. ಇದಕ್ಕೆ ಹೊಸ ನಿದರ್ಶನವೆಂಬಂತೆ, ವೈಟ್‌ಹೌಸ್‌ ಕರೆಸ್ಪಾಂ­ಡೆಂಟ್ಸ್‌ ಅಸೋಸಿಯೇಷನ್‌ ಆಯೋಜಿಸಿರುವ ವಾರ್ಷಿಕ ಔತಣಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ಟ್ರಂಪ್‌ ಹೇಳಿದ್ದಾರೆ. 

ಪ್ರತಿ ವರ್ಷ ಈ ಡಿನ್ನರ್‌ನಲ್ಲಿ ಅಧ್ಯಕ್ಷ, ಪತ್ರಕರ್ತರು, ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ಪತ್ರಿಕೋ­ದ್ಯಮ ಸ್ಕಾಲರ್‌ಶಿಪ್‌ಗಾಗಿ ನಿಧಿಯನ್ನೂ ಸಂಗ್ರಹಿಸಲಾಗುತ್ತದೆ. ಔತಣಕೂಟಕ್ಕೆ ಸುಖಾಸುಮ್ಮನೆ ಗೈರಾದ ಮೊದಲ ಅಧ್ಯಕ್ಷ ಟ್ರಂಪ್‌ ಆಗಿದ್ದಾರೆ. ಇತ್ತೀಚೆಗಷ್ಟೇ ಅವರು ಪತ್ರಕರ್ತರನ್ನು ಅತ್ಯಂತ ಅಪ್ರಾಮಾಣಿ­ಕರು ಎಂದು ಕರೆದಿದ್ದರು. ಅಲ್ಲದೆ ವೈಟ್‌ಹೌಸ್‌ನಿಂದ ನ್ಯೂಯಾರ್ಕ್‌ ಟೈಮ್ಸ್‌, ಸಿಎನ್‌ಎನ್‌ ಸೇರಿದಂತೆ ಹಲವಾರು ಮಾಧ್ಯಮಗಳನ್ನು ಇತ್ತೀಚೆಗಷ್ಟೇ ನಿಷೇಧಿಸಿದ್ದರು. 1981ರಲ್ಲಿ ಆಗಿನ ಅಧ್ಯಕ್ಷ ರೊನಾಲ್ಡ್‌ ರೇಗನ್‌ರ ಹತ್ಯೆ ಯತ್ನ ನಡೆದಿದ್ದು­ದರಿಂದ ಆ ವರ್ಷ ಆಯೋಜಿಸಲಾಗಿದ್ದ ಔತಣಕೂಟಕ್ಕೆ ಅವರು ಗೈರುಹಾಜರಾಗಿದ್ದರು.

Advertisement

ಶ್ವೇತಭವನದ  ಕೆಲಸಕ್ಕೆ ಗುಡ್‌ಬೈ!
ಟ್ರಂಪ್‌ ಅವರ ವಲಸೆ ನೀತಿಯಿಂದ ನೊಂದು ಬಾಂಗ್ಲಾದೇಶ ಮೂಲದ ರುಮಾನಾ ಅಹ್ಮದ್‌ ಶ್ವೇತಭವನದ ಕೆಲಸಕ್ಕೆ ಗುಡ್‌ಬೈ ಹೇಳಿದ್ದಾರೆ. 2011­ರಿಂದಲೂ ವೈಟ್‌ಹೌಸ್‌ನಲ್ಲಿ ಕಾರ್ಯ­ನಿರ್ವ­ಹಿ­ಸುತ್ತಿರುವ ಈಕೆ, ರಾಷ್ಟ್ರೀಯ ಭದ್ರತಾ ಮಂಡಳಿ­­ಯಲ್ಲೂ ಕೆಲಸ ಮಾಡುತ್ತಿದ್ದರು. “ನಾನು ಹಿಜಾಬ್‌ ಧರಿಸುವ ಮುಸ್ಲಿಂ ಮಹಿಳೆ. ಒಬಾಮ ಆಡಳಿ­ತವು ನನ್ನನ್ನು ಅತ್ಯಂತ ಆತ್ಮೀಯತೆಯಿಂದ, ಎಲ್ಲರೊಳ­ಗೊಬ್ಬರಂತೆ ನೋಡಿಕೊಳ್ಳುತ್ತಿತ್ತು. ಆದರೆ, ಈಗ ಪರಿಸ್ಥಿತಿ ಹದಗೆಟ್ಟಿದೆ. ಈ ಆಡಳಿತವು ನಮ್ಮನ್ನು ಅಮೆರಿಕದ ನಾಗರಿಕ­ರಂತೆ ನೋಡುವ ಬದಲು, ಅಪಾಯದಂತೆ ನೋಡುತ್ತಿದೆ. ಹಾಗಾಗಿ ಕೆಲಸ ಬಿಡುತ್ತಿದ್ದೇನೆ,’ ಎಂದಿದ್ದಾರೆ ರುಮಾನಾ.
 

Advertisement

Udayavani is now on Telegram. Click here to join our channel and stay updated with the latest news.

Next