Advertisement

Madikeri ಅರಣ್ಯ ಇಲಾಖೆ ವಾಹನದಲ್ಲಿ ವಿದ್ಯಾರ್ಥಿಗಳು ಮನೆಗೆ….

10:56 PM Jun 09, 2024 | Team Udayavani |

ಮಡಿಕೇರಿ: ನಿರೀಕ್ಷೆಯಂತೆ ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ.

Advertisement

ಮಡಿಕೇರಿ ತಾಲೂಕಿನ ಅರೆಕಾಡು ಶಾಲೆಯ ಸಮೀಪ ಶನಿವಾರ ಕಾಡಾನೆ ಗಳು ಕಾಣಿಸಿಕೊಂಡು ಅಪಾಯದ ಮುನ್ಸೂಚನೆ ಕಂಡು ಬಂದಿತ್ತು.

ತತ್‌ಕ್ಷಣ ಎಚ್ಚೆತ್ತುಕೊಂಡ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದರು. ಸ್ಥಳಕ್ಕೆ ಬಂದ ಅರಣ್ಯ ಸಿಬಂದಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದರು. ಅನಂತರ ಮುಂಜಾಗ್ರತಾ ಕ್ರಮವಾಗಿ ಇಲಾಖೆಯ ವಾಹನದಲ್ಲಿ ವಿದ್ಯಾರ್ಥಿಗಳನ್ನು ಮನೆ ಮನೆಗಳಿಗೆ ತಲುಪಿಸಿದರು.

ಸಕಾಲದಲ್ಲಿ ಕಾರ್ಯೋನ್ಮುಖರಾಗಿ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ತೋರಿದ ಅರಣ್ಯ ಇಲಾಖೆಯ ಸಿಬಂದಿಯ ಕಾರ್ಯವನ್ನು ಸ್ಥಳೀಯ ಗ್ರಾಮಸ್ಥರು ಶ್ಲಾ ಸಿದ್ದಾರೆ.

ಕಾರಿನ ಮೇಲೆ ಕಾಡಾನೆ ದಾಳಿ
ಮಡಿಕೇರಿ: ಕಾಡಾನೆ ದಾಳಿಯಿಂದ ಕಾರೊಂದು ಜಖಂಗೊಂಡಿರುವ‌ ಘಟನೆ ಸುಂಟಿಕೊಪ್ಪ ಸಮೀಪ ಏಳನೇ ಹೊಸಕೋಟೆಯ ಹೆದ್ದಾರಿಯಲ್ಲಿ ಸಂಭವಿಸಿದೆ.

Advertisement

ಕಾಫಿ ತೋಟದೊಳಗಿನಿಂದ ಹೆದ್ದಾರಿಗೆ ದಿಢೀರ್‌ ಆಗಿ ಬಂದ ಕಾಡಾನೆ ಏಕಾಏಕಿ ಕಾರಿನ ಮೇಲೆ ದಾಳಿ ಮಾಡಿ ಓಡಿಹೋಯಿತು. ಅದರ ಬೆನ್ನಲ್ಲೇ ಮತ್ತೂಂದು ಕಾಡಾನೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಕಾರು ಸವಾರರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದರು.

ನಿರಂತರವಾಗಿ ಸುಂಟಿಕೊಪ್ಪ- ಕುಶಾಲನಗರ ಭಾಗದ ಹೆದ್ದಾರಿಯಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ವಾಹನ ಸವಾರರು ನಿತ್ಯ ಆತಂಕ ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವೀರಮಂಗಲ:
ಕಾಡಾನೆ ಹಾವಳಿ
ಪುತ್ತೂರು: ಕಳೆದೊಂದು ವಾರದಿಂದ ಪೆರ್ಲಂಪಾಡಿ, ಪಾಲ್ತಾಡಿ, ಸವಣೂರು ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಇದೀಗ ವೀರಮಂಗಲದ ಕಾಯರ್‌ ಮುಗೇರು, ಪಲ್ಲತ್ತೋಡಿ, ಖಂಡಿಗೆ ಪರಿಸರದಲ್ಲಿ ಕೃಷಿ ತೋಟಗಳಲ್ಲಿ ಬಾಳೆಗಿಡ, ಅಡಿಕೆ ಮರಗಳಿಗೆ ಹಾನಿ ಉಂಟು ಮಾಡುತ್ತಿದೆ. ರವಿವಾರ ರಾತ್ರಿಯೇಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾ ಚರಣೆ ನಡೆಯಲಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next