Advertisement

Forest Department ಸಿಬಂದಿ ಅಟ್ಟಿದಂತೆ ಊರಿಂದೂರಿಗೆ ಓಡುವ ಕಾಡಾನೆ!

11:28 PM Jun 11, 2024 | Team Udayavani |

ಪುತ್ತೂರು: ವಾರದ ಹಿಂದೆ ಕೇರಳದ ಪರಪ್ಪೆ ಅರಣ್ಯ ದಿಂದ ಕೊಳ್ತಿಗೆ ಗ್ರಾಮದ ರಬ್ಬರ್‌ ತೋಟಕ್ಕೆ ಕಾಲಿಟ್ಟಿದ್ದ ಆನೆಯು ಪುತ್ತೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸುತ್ತಿದ್ದು, ಮಂಗಳವಾರ ಬೆಳ್ಳಿಪ್ಪಾಡಿ ಗ್ರಾಮ ದಲ್ಲಿ ಕಾಣಿಸಿಕೊಂಡಿದೆ.

Advertisement

ಕೊಳ್ತಿಗೆ ಗ್ರಾಮದ ರಬ್ಬರ್‌ ತೋಟದಲ್ಲಿ ಗದ್ದಲ ಎಬ್ಬಿಸಿದ ಕಾಡಾನೆಯನ್ನು ಅರಣ್ಯ ಇಲಾಖೆ
ಅಲ್ಲಿಂದ ಅಟ್ಟುವಲ್ಲಿ ಯಶಸ್ವಿಯಾ ಗಿತ್ತು. ಬಳಿಕ ಸವಣೂರು ಗ್ರಾಮದ ಪಾಲ್ತಾಡಿ, ಕುಮಾರಮಂಗಲ, ಪುಣcಪ್ಪಾಡಿ ಪ್ರದೇಶದಲ್ಲಿ ಕಾಣಿಸಿ ಕೊಂಡು ತೋಟದ ಬೆಳೆಗಳನ್ನು ಹಾನಿ ಮಾಡಿತ್ತು. ಬಳಿಕ ಕೆಯ್ಯೂರು ಗ್ರಾಮದ ತೆಗ್ಗು, ಓಲೆಮುಂಡೋವು ಪರಿಸರದಲ್ಲಿ ಕೃಷಿ ಹಾನಿ ಮಾಡಿತ್ತು. ಅರಣ್ಯ ಇಲಾಖೆ ಸಿಬಂದಿ ಅಲ್ಲಿಂದಲೂ ಅಟ್ಟಿದ್ದರು. ಅನಂತರ ಸವಣೂರು ಗ್ರಾಮದ ಪುಣcಪ್ಪಾಡಿಯಲ್ಲಿ , ನರಿಮೊಗರು ಗ್ರಾಮದ ವೀರಮಂಗಲ, ಶಾಂತಿಗೋಡಿನ ಗೇರು ಅಭಿವೃದ್ಧಿ ಮತ್ತು ಸಂಶೋಧನ ಕೇಂದ್ರದ ಗೇರು ತೋಪಿನೊಳಗೆ ಒಂದು ರಾತ್ರಿ ಕಳೆದಿದೆ.

ಹಾಲಿ, ಮಾಜಿ ಶಾಸಕರ ಭೇಟಿ: ಶಾಸಕ ಅಶೋಕ್‌ ಕುಮಾರ್‌ರೈ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಸ್ಥಳಕ್ಕೆ ಭೇಟಿ ನೀಡಿ ಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ತೀವ್ರಗೊಳಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ.

ಒಂದರ ಜತೆಗೆ ಇನ್ನೊಂದು!
ಜೂ. 11ರ ನಸುಕಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿಯ ತೋಟದಲ್ಲಿ 2 ಆನೆಗಳು ಕಂಡು ಬಂದಿವೆ. ಇನ್ನೊಂದು ಆನೆ ಯಾವ ಭಾಗದಿಂದ ಸೇರಿಕೊಂಡಿದೆ ಅನ್ನುವ ಬಗ್ಗೆ ಇಲಾಖೆ ಪರಿಶೀಲನೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next