ಮುಂಬಯಿ: ಶೈಕ್ಷಣಿಕ ವರ್ಷದ ಸಂಪೂರ್ಣ ಆನ್‌ಲೈನ್ ಕಲಿಕೆಯ ಬಳಿಕ ಶೇ. 50.2ರಷ್ಟು ಎಸ್‌ಎಸ್‌ಸಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ವಿಶ್ವಾಸವಿಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ.
ವಾಸ್ತವವಾಗಿ ಶೇ. 68ರಷ್ಟು ವಿದ್ಯಾರ್ಥಿಗಳ ಕಲಿಕೆ ಆನ್‌ಲೈನ್‌ನಲ್ಲಿ ಆಗಿರುವುದರಿಂದ ಪರೀಕ್ಷೆಗಳನ್ನೂ ಆನ್‌ಲೈನ್‌ನಲ್ಲೇ ನಡೆಸಬೇಕು ಎಂದು ನಂಬಿದರೆ, ಶೇ. 80ರಷ್ಟು ವಿದ್ಯಾರ್ಥಿಗಳು ಆಂತರಿಕ ಮೌಲ್ಯಮಾಪನಗಳಲ್ಲಿ ಕನಿಷ್ಠ ಶೇ. 50ರಷ್ಟು ಪಠ್ಯವನ್ನು ಹೊಂದಿರಬೇಕು ಎಂದು ಅಭಿಪ್ರಾಯಪಟ್ಟಿ¨ªಾರೆ. ಈ ಮಧ್ಯೆ ಶೇ. 72ರಷ್ಟು ವಿದ್ಯಾರ್ಥಿಗಳು ತಾವು ಒತ್ತಡಕ್ಕೊಳಗಾಗಿದ್ದು, ಮಾರ್ಗದರ್ಶನ ಮತ್ತು ಸಮಾಲೋಚನೆಯ ಅಗತ್ಯವನ್ನು ತಿಳಿಸಿದ್ದಾರೆ. ಇದಲ್ಲದೆ ಶೇ. 80ರಷ್ಟು ವಿದ್ಯಾರ್ಥಿಗಳು ರಾಜ್ಯ ಮಂಡಳಿ ಒದಗಿಸುವ ಕೌನ್ಸೆಲಿಂಗ್ ಸೌಲಭ್ಯದ ಬಗ್ಗೆ ತಿಳಿದಿಲ್ಲ ಎಂಬುದು ಕುರ್ಲಾದ ಶಿಕ್ಷಕರೊಬ್ಬರು ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.ಆನ್‌ಲೈನ್ ಸಮೀಕ್ಷೆಯಲ್ಲಿ ಮುಂಬಯಿ, ಥಾಣೆ, ನವಿ ಮುಂಬಯಿಯಾದ್ಯಂತ 100ಕ್ಕೂ ಹೆಚ್ಚು ಶಾಲೆಗಳಿಂದ 1,050ಕ್ಕೂ ಹೆಚ್ಚು ಎಸ್‌ಎಸ್‌ಸಿ, ಎಚ್‌ಎಸ್‌ಸಿ ವಿದ್ಯಾರ್ಥಿಗಳಿಂದ ಪ್ರತಿಕ್ರಿಯೆ ಸಂಗ್ರಹಿಸಿದೆ. ಶಾಲೆಗಳು ಇನ್ನೂ ತೆರೆ ಯದಿ ರುವ ನಗರಗಳು ಇವು. ಶೇ. 31.8ರಷ್ಟು ವಿದ್ಯಾರ್ಥಿ ಗಳು ಒತ್ತಡದಿಂದ ಬಳಲುತ್ತಿದ್ದು, ಕಲಿಕೆ ಯಲ್ಲಿ ಹಿಂದುಳಿ ಯುವ ಭೀತಿಯೊಂದಿಗೆ ಸಾಂಕ್ರಾ ವಿ ುಕ ರೋಗದ ನಡುವೆ ಆತ್ಮವಿಶ್ವಾಸದ ನಷ್ಟ, ಕುಟುಂಬ ತೊಂದರೆಗಳಿಂದ ವಿದ್ಯಾರ್ಥಿ ಗಳು ಬಳಲುತ್ತಿರುವುದಾಗಿ ಸಮೀಕ್ಷೆಯು ಸೂಚಿಸಿದೆ.
ವಿದ್ಯಾರ್ಥಿಗಳಿಗೆ ವಿಶ್ರಾಂತಿಯ ಅಗತ್ಯವಿದೆ
ವಿದ್ಯಾರ್ಥಿಗಳು ಅನುಭವಿಸುತ್ತಿರುವ ಒತ್ತಡ ವನ್ನು ಸರಕಾರವು ಅರ್ಥಮಾಡಿಕೊಂಡು ಅವರಿಗೆ ಸ್ವಲ್ಪ ವಿಶ್ರಾಂತಿ ನೀಡುವುದು ಸಮೀಕ್ಷೆಯ ಉದ್ದೇಶ ವಾಗಿದೆ. ಈ ಮೂರು ನಗರಗಳ ಮಕ್ಕಳು ಒಂದು ದಿನವೂ ಶಾಲೆಗೆ ಹೋಗಿಲ್ಲ. ಸಾಂಪ್ರದಾಯಿಕ ಮಾದರಿಯಲ್ಲಿ ಅವರು ಬೋರ್ಡ್ ಪರೀಕ್ಷೆಗೆ ಹಾಜರಾಗಬೇಕೆಂದು ನಿರೀಕ್ಷಿಸುವುದು ಕಿರುಕುಳ ನೀಡಿದಂತೆ. ಅನೇಕ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕಲಿಕೆಯಲ್ಲೂ ಹಲವಾರು ಸಮಸ್ಯೆಗಳಿವೆ ಎಂಬುದನ್ನು ಗಮನಿಸುವುದೂ ಮುಖ್ಯವಾಗಿದೆ ಎಂದು ಸಮೀಕ್ಷೆ ನಡೆಸಿದ ಕುರ್ಲಾದ ಗಾಂಧಿ ಬಲ್ಮಂದಿರ್ ಶಾಲೆಯ ಇಂಗ್ಲಿಷ್ ಶಿಕ್ಷಕ ಜಯವಂತ್ ಕುಲಕರ್ಣಿ ತಿಳಿಸಿದ್ದಾರೆ.
ಶೇ. 47ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಎಪ್ರಿಲ್ ಅಥವಾ ಮೇಗೆ ಮುಂದೂಡಿದರೆ ಸಾಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಶೇ. 10.6ರಷ್ಟು ವಿದ್ಯಾರ್ಥಿಗಳು ಮಾತ್ರ ಆನ್‌ಲೈನ್ ಕಲಿಕೆ ಪರಿಣಾಮಕಾರಿಯಾಗಿದೆ ಎಂದು ಹೇಳಿ ದ್ದಾರೆ. ಹೆಚ್ಚುವರಿಯಾಗಿ ಶೇ. 65.1ರಷ್ಟು ವಿದ್ಯಾ ರ್ಥಿ ಗಳು ಅಭ್ಯಾಸದ ಕೊರತೆ ಯಿಂದಾಗಿ ಪಠ್ಯವನ್ನು ಪೂರ್ಣಗೊಳಿಸಲು ಸಾಧ್ಯ ವಾಗು ವುದಿಲ್ಲ ಎಂದು ಭಯಪಡುತ್ತಿದ್ದಾರೆ. ಇನ್ನೂ ಶೇ. 51.2ರಷ್ಟು ವಿದ್ಯಾರ್ಥಿಗಳು ಪಠ್ಯಕ್ರಮದಲ್ಲಿನ ಬದಲಾ ವಣೆಗಳ ಬಗ್ಗೆ ಇನ್ನೂ ಗೊಂದಲದಲ್ಲಿದ್ದಾರೆ.