Advertisement

ಜೆಇಇ ಮೇನ್‌, ನೀಟ್‌ ಪರೀಕ್ಷೆಗಳ ಮಾರ್ಗಸೂಚಿಯಲ್ಲಿ ಏನಿದೆ?

10:04 PM Aug 17, 2020 | Karthik A |

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ಸೋಮವಾರ ನೀಟ್‌ ಮತ್ತು ಜೆಇಇ ಮೇನ್‌ 2020 ಪ್ರವೇಶ ಪರೀಕ್ಷೆಗಳನ್ನು ಮುಂದೂಡುವ ಅರ್ಜಿಯನ್ನು ತಿರಸ್ಕರಿಸಿದೆ.

Advertisement

ಈ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಮುಖ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 1ರಿಂದ 6ರ ವರೆಗೆ ಜೆಇಇ ಮೇನ್‌, ಸೆಪ್ಟೆಂಬರ್‌ 13ರಂದು ನೀಟ್‌ ಪರೀಕ್ಷೆ ನಡೆಯಲಿದೆ.

ಜೆಇಇ ಮೇನ್‌ ಮತ್ತು ನೀಟ್‌ ದೇಶದ ಅತಿದೊಡ್ಡ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಈ ಪರೀಕ್ಷೆಗಳನ್ನು ದೇಶಾದ್ಯಂತ ಏಕಕಾಲದಲ್ಲಿ ನಡೆಸಲಿದೆ. ಎನ್‌ಟಿಎ ಇದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಹೊಸ ಪರೀಕ್ಷಾ ಮಾರ್ಗಸೂಚಿಗಳನ್ನು ರಚಿಸಲಾಗಿದೆ.

ಇದು ದೇಶದ ಅತಿದೊಡ್ಡ ಪರೀಕ್ಷೆಯಾಗಿದ್ದು, ಸಾಮಾಜಿಕ ಅಂತರದ ಕುರಿತಾಗಿ ಎಚ್ಚರ ವಹಿಸಲಾಗುತ್ತದೆ. ಈ ಬಾರಿ ನಮಗೆ ಕಳೆದ ಬಾರಿಗಿಂತ ಎರಡು ಪಟ್ಟು ಹೆಚ್ಚು ಕೊಠಡಿಗಳನ್ನು ನೀಡಲಾಗುತ್ತದೆ. ಇದಕ್ಕಾಗಿ ನಾವು ಹೆಚ್ಚಿನ ಸಂಖ್ಯೆಯ ಶಾಲೆಗಳು, ಕಾಲೇಜುಗಳು ಮತ್ತು ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ.

Advertisement

ಕಳೆದ ಬಾರಿಗಿಂತ ಹೆಚ್ಚಿನ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಜೆಟಿಇ ಮುಖ್ಯ ಪರೀಕ್ಷೆಗೆ ಎನ್‌ಟಿಎ ಈ ಬಾರಿ 600 ಕೇಂದ್ರಗಳನ್ನು ರಚಿಸಿದೆ. ಕಳೆದ ಬಾರಿ 450 ಕೇಂದ್ರಗಳನ್ನು ರಚಿಸಲಾಗಿತ್ತು. ನೀಟ್‌ ಪರೀಕ್ಷೆಗಾಗಿ ಸುಮಾರು 4000 ಕೇಂದ್ರಗಳನ್ನು ತೆರೆಯಲಾಗಿದೆ. ಕಳೆದ ಬಾರಿ 2,500 ಕೇಂದ್ರಗಳನ್ನು ಮೀಸಲಿಡಲಾಗಿತ್ತು.

ದಟ್ಟನೆ ತಪ್ಪಿಸಲು ಹೊಸ ಕ್ರಮ
ಈ ಬಾರಿ ಎಲ್ಲ ವಿದ್ಯಾರ್ಥಿಗಳು ಏಕ ಕಾಲದಲ್ಲಿ ಪರೀಕ್ಷಾ ಕೇಂದ್ರಕ್ಕೆ ತಲುಪುವುದಿಲ್ಲ. ಕೇಂದ್ರದಲ್ಲಿ ರಶ್‌ ಅನ್ನು ತಪ್ಪಿಸಲು ಈ ಕ್ರಮದ ಮೊರೆ ಹೋಗಲಾಗಿದೆ. ಇದಕ್ಕಾಗಿ ಕೋವಿಡ್‌ ಮಾರ್ಗಸೂಚಿಯನ್ನು ಪ್ರವೇಶ ಪತ್ರದಲ್ಲಿ ನಮೂದಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಹೊಸ ನಿಯಮಗಳ ಬಗ್ಗೆ ಮಾಹಿತಿ ಪಡೆಯಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯು ಪರೀಕ್ಷಾ ಕೇಂದ್ರಗಳಿಗೆ ಯಾವಾಗ ಬರಬೇಕು ಎಂಬುದನ್ನು ನಮೂದಿಸಲಾಗುತ್ತದೆ. ನೀಡಲಾದ ಸಮಯಕ್ಕೆ ವಿದ್ಯಾರ್ಥಿಗಳು ಕೇಂದ್ರಗಳಿಗೆ ಬರಬೇಕಾಗುತ್ತದೆ.

ಸುರಕ್ಷೆಗೆ ಒತ್ತು
ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಥರ್ಮಲ್‌ ಸ್ಕ್ರೀನಿಂಗ್‌ ಮತ್ತು ಸ್ಯಾನಿಟೈಜರ್‌ ವ್ಯವಸ್ಥೆ ಇರುತ್ತದೆ. ದೇಹ ತಾಪಮಾನ ಹೆಚ್ಚಿದ್ದರೆ ಪರೀಕ್ಷೆಗಳನ್ನು ಬರೆಯಲು ಅವಕಾಶ ಮಾಡಿಕೊಡಲಾಗುವುದಿಲ್ಲ. ವಿದ್ಯಾರ್ಥಿಗಳ ಪೋಷಕರನ್ನು ಕೇಂದ್ರಗಳಿಂದ ದೂರವಿಡಲಾಗುತ್ತದೆ. ಕೆಲವು ತುರ್ತು ಸಂದರ್ಭಗಳಲ್ಲಿ ಮಾತ್ರ ಪೋಷಕರನ್ನು ಪರೀಕ್ಷಾ ಕೇಂದ್ರಗಳಿಗೆ ಬರಲು ಅನುಮತಿಸಲಾಗುತ್ತದೆ. ಉದಾಹರಣೆಗೆ ವಿದ್ಯಾರ್ಥಿಯು ಅಂಗವಿಕಲನಾಗಿದ್ದರೆ ಅಥವಾ ವಿದ್ಯಾರ್ಥಿಗೆ ಇತರ ಸಮಸ್ಯೆಗಳಿದ್ದರೆ ಮಾತ್ರ ಹೆತ್ತವರು ಬರಬಹುದು.

ಒಟ್ಟು ಎಷ್ಟು ವಿದ್ಯಾರ್ಥಿಗಳು?
ದೇಶಾದ್ಯಂತ 11 ಲಕ್ಷ ವಿದ್ಯಾರ್ಥಿಗಳು ಜೆಇಇ ಮೇನ್‌, 16 ಲಕ್ಷ ವಿದ್ಯಾರ್ಥಿಗಳು ನೀಟ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ನಡುವೆ ಒಂದು ಮೀಟರ್‌ ಅಂತರವನ್ನು ಕಾಯ್ದುಕೊಳ್ಳಬೇಕು. ಸಾಧ್ಯವಾದರೆ, ಟ್ರಿಪಲ್‌ ಲೇಯರ್‌ ಮಾಸ್ಕ್ ಎನ್‌ -95 ಬಳಸಿ, ಇಲ್ಲದಿದ್ದರೆ ಬಟ್ಟೆ ಮುಖವಾಡ ಧರಿಸಬಹುದಾಗಿದೆ. ಇದರಿಂದ ಗಾಳಿ ಸೋರಿಕೆಯಾಗುವುದಿಲ್ಲ. ಮಾಸ್ಕ್ ಮೂಲಕ ಮೂಗು ಮತ್ತು ಬಾಯಿಯನ್ನು ಸರಿಯಾಗಿ ಮುಚ್ಚಿಕೊಳ್ಳಬೇಕು.

ಪರೀಕ್ಷೆಯ ದಿನಾಂಕವನ್ನು ವಿಸ್ತರಿಸಲು ವಿವಿಧ ರಾಜ್ಯಗಳ 11 ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕೋವಿಡ್‌ ಕಾಲದಲ್ಲಿ ಪರೀಕ್ಷೆಗಳಿಗೆ ಹೊರಡಿಸಲಾದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದಿಲ್ಲ ಎಂದು ಅವರು ಕೋರ್ಟ್‌ಗೆ ಹೇಳಿದ್ದರು. ಆದರೆ ಮಾನ್ಯ ನ್ಯಾಯಾಲಯವು ಇವರ ವಾದವನ್ನು ಪುರಸ್ಕರಿಸಲಿಲ್ಲ.

ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಹಾಲ್ ಟಿಕೆಟ್ ಅನ್ನು https://nta.ac.in/ ವೆಬ್‌ಸೈಟ್‌ಗಳ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. 

 

Advertisement

Udayavani is now on Telegram. Click here to join our channel and stay updated with the latest news.

Next